ಕಲಬುರ್ಗಿ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲರ ಸಭೆಯಲ್ಲಿ ಭಾಗಯಾಗಿದ್ದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Revenue inspector) ಅವರು ರಾಜ್ಯದಲ್ಲಿ ತಿದ್ದುಪಡಿ ಮಾಡಿರುವ ಹೊಸ ರಿಜಿಸ್ಟ್ರೇಷನ್ ನಿಯಮದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚಿನ ರೈತರಿಗೆ ಸಮಸ್ಯೆ ಆಗಿರುವ ಆಸ್ತಿ ವಿವಾದದ ಕುರಿತು ಸರ್ಕಾರ ನಿರ್ಧಾರಕ್ಕೆ ಬಂದಿರುವುದಕ್ಕೆ ಮಾಹಿತಿ ಕೊಟ್ಟಿದ್ದಾರೆ.
ಈವರೆಗೆ ಅನೇಕರು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಇಲಾಖೆಯನ್ನು ವಂಚಿಸಿ ಸಾರ್ವಜನಿಕರು ಹಾಗೂ ಸರ್ಕಾರದ ಆಸ್ತಿಯನ್ನು ಅಕ್ರಮವಾಗಿ ತಮ್ಮದಾಗಿಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಅವರ ಆಟ ನಡೆಯುವುದಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆಯನ್ನು ಕೊಟ್ಟಿದ್ದಾರೆ.
ನಿಮ್ಮ ಮನೆಯ ವಿದ್ಯುತ್ ಬಿಲ್ 210 ಯೂನಿಟ್ ಬಂದಿದ್ದರೆ ನೀವು ಎಷ್ಟು ಕರೆಂಟ್ ಬಿಲ್ ಕಟ್ಟಬೇಕು ಗೊತ್ತಾ.?
ಸಬ್ ರಿಜಿಸ್ಟರ್ ಆಫೀಸಲ್ಲಿ (sub register office) ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಸುಳ್ಳು ಮಾಹಿತಿಗಳನ್ನು ನೀಡಿ ವ್ಯಕ್ತಿಯ ಅಥವಾ ಸರ್ಕಾರದ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಇದರಿಂದ ಆ ನಿಜಾಂಶ ತಿಳಿದ ಬಳಿಕ ಆಸ್ತಿಯ ನಿಜವಾದ ಮಾಲೀಕರು ಕೋರ್ಟು ಕಚೇರಿ ಎಂದು ವರ್ಷ ಗಟ್ಟಲೆ ಅಲೆಯಬೇಕಾಗಿ ಬರುತ್ತದೆ.
ಈ ಹಿಂದೆ ಹಲವಾರು ವರ್ಷಗಳಿಂದ ಸಾಕಷ್ಟು ಪ್ರಕರಣಗಳು ಇದರ ಕುರಿತು ದಾಖಲಾಗಿವೆ ಹಾಗೂ ನನ್ನನ್ನು ಹುಡುಕಿ ಬರುವ ಅನೇಕರ ದೂರು ಕೂಡ ಇದಕ್ಕೆ ಸಂಬಂಧಪಟ್ಟ ಇರುತ್ತದೆ ಹಾಗಾಗಿ ಇದಕ್ಕೆಲ್ಲ ಮುಕ್ತಾಯ ಹಾಡಲು ಸರ್ಕಾರ ಹೊಸದೊಂದು ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಕೃಷಿ ಭೂಮಿಗೆ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯಬೇಕಾ.? ಆಗಿದ್ರೆ ಈ ರೀತಿ ಮಾಡಿ.!
ಯಾವುದೇ ವ್ಯಕ್ತಿಯಾಗಿದ್ದರು ಮತ್ತೊಬ್ಬ ವ್ಯಕ್ತಿ ಆಸ್ತಿಯನ್ನು ಸುಳ್ಳು ದಾಖಲೆ ಸೃಷ್ಟಿ ಮಾಡುವ ಮೂಲಕ ಅಥವಾ ಸರ್ಕಾರದ ಆಸ್ತಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಆ ಮೂಲಕ ವಶಡಿಸಿಕೊಳ್ಳಲು ನೋಡಿದರೆ ಅದು ಸಾಧ್ಯವಾಗುವುದಿಲ್ಲ. ಪ್ರಕರಣಗಳು ದಾಖಲಾಗಿರುವುದು ಅರಿವಿಗೆ ಬಂದ ತಕ್ಷಣವೇ ಆ ರಿಜಿಸ್ಟರ್ ಗಳನ್ನು ರದ್ದು ಮಾಡಲಾಗುತ್ತದೆ.
ಈ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕೊಡುತ್ತಿದ್ದೇವೆ. ಎಂದು ತಿದ್ದುಪಡಿ ಆಗಿರುವ ರಿಜಿಸ್ಟ್ರೇಷನ್ ನಿಯಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಮಾತನ್ನು ಮುಂದುವರಿಸಿದ ಅವರು ಈ ಹಿಂದೆ ಅಧಿವೇಶನದಲ್ಲೂ ಆಸ್ತಿ ವಿಚಾರದ ಕಾಯ್ದೆ ತಿದ್ದುಪಡಿ ಮಾಡಲಾಗಿದೆ.
ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಕೂಡ ಸಿಕ್ಕಿದೆ ಮುಂದಿನ ನಾಲ್ಕು ತಿಂಗಳ ಒಳಗೆ ಇದಕ್ಕೆ ಅಧಿಕೃತವಾದ ಆದೇಶ ಪತ್ರವೂ ಸಹ ಹೊರ ಬೀಳಲಿದೆ. ನಂತರ ಯಾರು ಬೇರೆಯವರ ಆಸ್ತಿ ವಶಪಡಿಸಿಕೊಳ್ಳಲು ಕಣ್ಣು ಹಾಕುವವರು ಇದಕ್ಕೆ ಮಧ್ಯ ನಿಂತು ಸಹಾಯ ಮಾಡುವ ದಲ್ಲಾಳಿಗಳು ಇವರ ಗೇಮ್ಗಳು ಇನ್ನು ಮುಂದೆ ಬಂದ್ ಆಗುತ್ತವೆ ಎಂದಿದ್ದಾರೆ.
ಇನ್ನು ಮುಂದೆ ಕಾಲಹರಣ ಮಾಡದೆ ಮೋಸ ಆಗಿದೆ ಎಂದು ಗೊತ್ತದ ತಕ್ಷಣವೇ ರಿಜಿಸ್ಟರ್ ಅನ್ನು ರದ್ದು ಮಾಡಿ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಈ ಹಿಂದೆಯೂ ಕೂಡ ಈ ರೀತಿ ಜನರು ಮೋಸ ಹೋಗಿರುವುದು ತಿಳಿದು ಬಂದಿದೆ. ಹಾಗಾಗಿ ಅವರಿಗೂ ಸಹ ನ್ಯಾಯ ಕೊಡಿಸಲು ಪ್ರಯತ್ನ ಪಡುತ್ತೇವೆ ವಿಜಯಪುರದ ಜಿಲ್ಲೆಯಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ಬಾಕಿ ಇವೆ ಇವುಗಳನ್ನು ಇನ್ನು 15 ದಿನದ ಒಳಗೆ ಮುಗಿಸಲು ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರದ ಈ ಹೊಸ ನಿಯಮದಿಂದ ಅನೇಕರಿಗೆ ಅನುಕೂಲವಾಗಲಿದೆ. ಹಾಗಾಗಿ ಈ ಕಾಯ್ದೆ ಜಾರಿಗೆ ಬಂದು ಮೋಸಗಾರರು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪುವಂತಾಗಲಿ ಎಂದು ನಾವು ಕೂಡ ಹರಸೋಣ.