ದೇಶದ ಜನತೆಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ (Central government) ದೇಶದ ಎಲ್ಲಾ ರಾಜ್ಯದ ಹಾಗೂ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದೇ ರೀತಿಯಾಗಿ ಆಯಾ ರಾಜ್ಯ ಸರ್ಕಾರಗಳು (State government) ಕೂಡ ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ರಾಜ್ಯದ ನಾಗರಿಕರಿಗಾಗಿ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ.
ಎಲ್ಲಾ ವರ್ಗಗಳ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಆಯಾ ವರ್ಗಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಾಗಿದೆ. ಇದರ ಜೊತೆಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ನೀಡಿದ್ದು ಇದು ದೇಶದಾದ್ಯಂತ ಎಲ್ಲರಿಗೂ ಒಂದೇ ತೆರನಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಅಂಗವಿಕಲರಿಗೆ, ವಿಧವೆಯರಿಗೆ, ಅವಿವಾಹಿತ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅತಿ ತಿಂಗಳು ಪೆನ್ಷನ್ ಸೌಲಭ್ಯ ಕೂಡ ನೀಡುತ್ತಿದೆ.
HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಬೀಳಲಿದೆ ದಂಡ.! ವಾಹನ ಸಾವರರಿಗೆ ಹೊಸ ರೂಲ್ಸ್ ಜಾರಿ.!
ಈಗ ಇದೇ ರೀತಿಯಲ್ಲಿ ಮತ್ತೊಂದು ಪೆನ್ಷನ್ ಯೋಜನೆಯನ್ನು (Pension Scheme) ಜಾರಿಗೆ ತಂದಿದೆ. ಇದರ ವಿಶೇಷತೆಯೇನೆಂದರೆ ಈ ಬಾರಿ 1ರೂ. ಕೂಡ ಹೂಡಿಕೆ ಮಾಡದೆ ಹಿರಿಯ ನಾಗರಿಕರು ಮಾಸಿಕವಾಗಿ 3,000 ಪಿಂಚಣಿ ಪಡೆಯಬಹುದು. ಈ ಯೋಜನೆ ಆಶ್ಚರ್ಯವನ್ನುಂಟು ಮಾಡಬಹುದು ಆದರೆ ಖಂಡಿತವಾಗಿಯೂ ಕೂಡ ಇಂತಹದೊಂದು ಯೋಜನೆ ಇದೆ.
ಸರ್ಕಾರಿ ನೌಕರರನ್ನು ಹೊರತುಪಡಿಸಿ ಅಥವಾ ತಾವೇ ಹಣವನ್ನು ಹೂಡಿಕೆ ಮಾಡಿ ಯೋಜನೆಗಳನ್ನು ಖರೀದಿಸಿದವರನ್ನು ಹೊರತುಪಡಿಸಿ ಇನ್ನಾದರೂ ಕೂಡ ಈ ರೀತಿ ದೊಡ್ಡ ಮೊತ್ತದ ಪೆನ್ಷನ್ ಪಡೆಯುವ ಅನುಕೂಲತೆ ಇರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಒಂದು ರೂಪಾಯಿ ಕೂಡ ಹಣವನ್ನು ಹೂಡಿಕೆ ಮಾಡದೆ ಗರಿಷ್ಠ 3000ರೂ. ವರೆಗೆ ಪಿಂಚಣಿ ಪಡೆಯಬಹುದಾದ (Without investment Pension Scheme) ನಿರ್ಮಾಣ ಕಾಮಗಾರಿ ಪಿಂಚಣಿ ಯೋಜನೆ ಎನ್ನುವ (Nirmana Kamagari Pension Scheme) ಯೋಜನೆಯನ್ನು ಹರಿಯಾಣ (Hariyana) ರಾಜ್ಯ ಸರ್ಕಾರವು ಜಾರಿಗೆ ತಂದಿದೆ.
ಆಧಾರ್ ಸೀಡಿಂಗ್ ಆಗಿದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿಲ್ಲವೇ? ಹಣ ಬಂದೇ ಬರುತ್ತಿದೆ ಹೀಗೆ ಮಾಡಿ.!
ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಕೂಡ ಜಾರಿಗೆ ಬಂದರೂ ಅನುಮಾನವಿಲ್ಲ. ಈ ಯೋಜನೆಯನ್ನು ಯಾರೆಲ್ಲಾ ಪಡೆಯಬಹುದು, ಇದಕ್ಕೆ ಅರ್ಹತೆಗಳೇನು ಮತ್ತು ಬೇಕಾಗುವ ದಾಖಲೆ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಯೋಜನೆಯ ಹೆಸರು:- ನಿರ್ಮಾಣ ಕಾಮಗಾರಿ ಪಿಂಚಣಿ ಯೋಜನೆ
ಅರ್ಜಿ ಸಲ್ಲಿಸಲು ಅರ್ಹತೆಗಳು:-
● 60 ವರ್ಷ ಅಥವಾ ಅದಕ್ಕಿಂತ ಮೇಲಿನ ವಯಸ್ಸಿನ ಕಟ್ಟಡ ಕಾರ್ಮಿಕರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
● ಕಾರ್ಮಿಕ ಮಂಡಳಿಯಲ್ಲಿ ಸದಸ್ಯತ್ವ ಹೊಂದಿ ಲೇಬರ್ ಕಾರ್ಡ್ ಪಡೆದಿರಬೇಕು.
● ಈ ಯೋಜನೆಯ ಫಲಾನುಭವಿಗಳಾಗಲು ಬಯಸಿ ಅರ್ಜಿ ಸಲ್ಲಿಸುವವರು ಸರ್ಕಾರದ ಇತರ ಯಾವುದೇ ಮಂಡಳಿ ಅಥವಾ ಇಲಾಖೆಯ ಯೋಜನೆಗಳ ಫಲಾನುಭವಿಗಳಾಗಿರಬಾರದು.
● ಅರ್ಜಿ ಸಲ್ಲಿಸಲು ಕೇಳಿದಿರುವ ಎಲ್ಲಾ ದಾಖಲೆಗಳನ್ನು ಕೂಡ ಹೊಂದಿರಬೇಕು.
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ನಿವಾಸ ದೃಢೀಕರಣ ಪತ್ರ
● ವಯಸ್ಸಿನ ದೃಢೀಕರಣಕ್ಕಾಗಿ ಪ್ರಮಾಣ ಪತ್ರ
● ಕಾರ್ಮಿಕ ಮಂಡಳಿಯಲ್ಲಿ ನೋಂದಣಿಯಾಗಿ ಪಡೆದಿರುವ ಸಂಖ್ಯೆ ಅಥವಾ ಲೇಬರ್ ಕಾರ್ಡ್
● ಕೆಲಸದ ಚೀಟಿ
● ಬ್ಯಾಂಕ್ ಪಾಸ್ ಬುಕ್ ವಿವರ
● ಮೊಬೈಲ್ ಸಂಖ್ಯೆ
● ಇತ್ತೀಚಿನ ಭಾವಚಿತ್ರ.
SBI ನಲ್ಲಿ 2000 ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
ಅರ್ಜಿ ಸಲ್ಲಿಸುವ ವಿಧಾನ:-
● ನೇರವಾಗಿ saralhariyana.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.
● ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆಯನ್ನು ಯಶಸ್ವಿಯಾಗಿ ಪೂರ್ತಿ ಗೊಳಿಸಿ ಆಕ್ನೋಲೆಜ್ಮೆಂಟ್ ಪಡೆಯಿರಿ.