ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕರಿಗೂ (Worker ) ಕೂಡ ಆತನ ಪ್ರತಿ ತಿಂಗಳ (Monthly Salary) ವೇತನದಲ್ಲಿ 12% ಉದ್ಯೋಗ ಭವಿಷ್ಯ ನಿಧಿಗೆ ಕಡಿತಗೊಳ್ಳುತ್ತದೆ (EPF). ಇಷ್ಟೇ ಮೊತ್ತದ ಹಣವನ್ನು ಆತನಿಗೆ ಉದ್ಯೋಗ ನೀಡಿರುವ ಉದ್ಯೋಗದಾತರು (Employer) ಕೂಡ ನೀಡುತ್ತಾರೆ.
ಕೇಂದ್ರ ಸರ್ಕಾರದ EPFO ಸಂಸ್ಥೆಯು ಇದನ್ನು ವ್ಯವಸ್ಥಿತವಾಗಿ ನಡೆಸುತ್ತದೆ ಮತ್ತು ಈ EPFO ಖಾತೆಯಲ್ಲಿರುವ ಹಣಕ್ಕೆ ಬಡ್ಡಿಯನ್ನು ಕೂಡ ನೀಡುತ್ತದೆ. ಕೇಂದ್ರ ಸರ್ಕಾರವದ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ ನೀಡುವ UAN ಸಂಖ್ಯೆಯು ಉದ್ಯೋಗಿಗಳ ಭವಿಷ್ಯ ನಿಧಿಗೆ ಒದಗಿಸುವ 12 ಅಂಕೆಗಳ ವಿಶಿಷ್ಟ ನಂಬರ್ ಆಗಿದೆ.
ಈ ಸುದ್ದಿ ಓದಿ:- ಇಂದು ಮತ್ತು ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು UAN ಅನ್ನು ದೃಢೀಕರಣ ಮಾಡುತ್ತದೆ. ಈ 12 ಅಂಕೆಗಳ UAN ಪ್ರತಿ ಉದ್ಯೋಗಿಗೆ ಅವರು ಉದ್ಯೋಗಕ್ಕೆ ಸೇರಿದ ತಕ್ಷಣದಿಂದ ಆಕ್ಟಿವೇಟ್ ಆಗಿ ಅವರ ಜೀವನದುದ್ದಕ್ಕೂ ಒಂದೇ ಆಗಿರುತ್ತದೆ, ಅವರು ಹೊಸ ಕಂಪನಿ ಅಥವಾ ಬೇರೆ ಉದ್ಯೋಗಕ್ಕೆ ಸೇರಿದ ಪಕ್ಷದಲ್ಲಿಯೂ ಕೂಡ UAN ಸಂಖ್ಯೆ ಮಾತ್ರ ಬದಲಾಗುವುದಿಲ್ಲ.
ಈ PF ಖಾತೆಯಲ್ಲಿರುವ ಹಣವನ್ನು ಉದ್ಯೋಗಿಯು ಕೆಲಸ ಬಿಟ್ಟ ನಂತರ ವಿತ್ ಡ್ರಾ ಮಾಡಿಕೊಳ್ಳಬಹುದು ಅಥವಾ ಕೆಲವು ಅಗತ್ಯ ಪರಿಸ್ಥಿತಿಗಳಲ್ಲಿ ಕಂಡಿಶನ್ ಮೇರೆಗೆ ಹಿಂಪಡೆದುಕೊಳ್ಳುವ ಹಕ್ಕು ಇರುತ್ತದೆ. ಪ್ರತಿ ತಿಂಗಳು ನಮ್ಮ ಸಂಬಳದಲ್ಲಿ ಕಡಿತವಾಗುತ್ತಿರುವ ಈ ಹಣವು ನಮ್ಮ PF ಖಾತೆ ಸೇರುತ್ತಿದೆಯೇ? ಮತ್ತು ನಮ್ಮ ಉದ್ಯೋಗದಾತರ ಶೇರ್ ಕೂಡ ಸೇರುತ್ತಿದೆಯೇ? ನಮ್ಮ ಖಾತೆಯಲ್ಲಿ ಒಟ್ಟು ಎಷ್ಟು ಹಣ ಇದೆ ಎನ್ನುವುದನ್ನು ನಾವು ಮೊಬೈಲ್ ನಲ್ಲಿಯೇ ಕೆಲವು ವಿಧಾನಗಳ ಮೂಲಕ ಚೆಕ್ ಮಾಡಿ ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:-ನಿಮ್ಮ ಯಾವುದೇ ಆಸ್ತಿಯ ಐಡಿ, ಆಸ್ತಿಯ ನಂಬರ್ ಹಾಗೂ ವಿವರಗಳನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳುವ ವಿಧಾನ.!
1. ಮೊಬೈಲ್ ಅಪ್ಲಿಕೇಶನ್ ಮೂಲಕ EPF ವಿವರ ಪಡೆಯಬಹುದು
* ಮೊದಲು Playstore ಗೆ ಹೋಗಿ ಉಮಾಂಗ್(UMANG) ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಕೊಳ್ಳಿ.
* ನಿಮ್ಮ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆ ಹಾಗೂ password ಹಾಕಿ ಲಾಗ್ ಇನ್ ಆಗಿ.
* ನಂತರ ನಿಮ್ಮ UAN ನಂಬರ್ ಹಾಕಬೇಕು.
* ನಿಮ್ಮ EPF ಖಾತೆಗೆ ನೋಂದಣಿ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
* OTP ಹಾಕಿ, ಅಪ್ಲಿಕೇಶನ್ ಬಲಭಾಗದಲ್ಲಿ ಸದಸ್ಯರ ID ಎಂಬ option ಸೆಲೆಕ್ಟ್ ಮಾಡಿ ನಿಮ್ಮ e-passbook ಡೌನ್ಲೋಡ್ ಮಾಡಿಕೊಳ್ಳಿ.
2. ಸಂದೇಶದ ಮೂಲಕವೂ ಮಾಹಿತಿ ಪಡೆಯಬಹುದು
* (EPFO UAN) ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ SMS ಕಳುಹಿಸಿ, ನಿಮಗೆ ಆಯ್ಕೆಯ ಭಾಷೆಯಲ್ಲಿ SMS ಪಡೆಯಬಹುದು. ನಿಮ್ಮ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಟೈಪ್ ಮಾಡಿ SMS ಕಳುಹಿಸಬೇಕು.
* ಉದಾಹರಣೆಗೆ ನಿಮಗೆ ಕನ್ನಡ ಭಾಷೆಯಲ್ಲಿ ವಿವರ ಬೇಕು ಎಂದರೆ (EPFO UAN KAN) ಎಂದು ಟೈಪ್ ಮಾಡಿ SMS ಕಳುಹಿಸಿ.
* ನೀವು ಈ ವಿಧಾನದಲ್ಲಿ ಖಾತೆ ವಿವರಗಳನ್ನು ಪಡೆಯಲು UAN ಸಂಖ್ಯೆಯನ್ನು ನಿಮ್ಮ KYC ಗೆ ಲಿಂಕ್ ಮಾಡಬೇಕಿರುತ್ತದೆ.
ಈ ಸುದ್ದಿ ಓದಿ:-ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಅರ್ಜಿ ಆಹ್ವಾನ. ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಏನೆಲ್ಲಾ ದಾಖಲೆಗಳು ಬೇಕು.? ಎಲ್ಲಿ ಅರ್ಜಿ ಹಾಕಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
3. EPFO ಪೋರ್ಟಲ್ ಗೆ ಹೋಗಿ ಲಾಗಿನ್ ಮಾಡಿ ಕೂಡ ಮಾಹಿತಿ ಪಡೆಯಬಹುದು
* EPFO ಪೋರ್ಟಲ್ ಗೆ ಹೋಗಿ, ನಮ್ಮ ಸೇವೆಗಳು ಎಂಬ ಆಪ್ಷನ್ ಕ್ಲಿಕ್ ಮಾಡಿ.
* drop-down menu ಗೆ ಹೋಗಿ ಉದ್ಯೋಗಿಗಳಿಗಾಗಿ ಎಂಬ ಆಯ್ಕೆ ಕ್ಲಿಕ್ ಮಾಡಿ
* ನಂತರ ಸದಸ್ಯ PassBook ಎಂಬಲ್ಲಿ ಹೋಗಿ UAN ಸಂಖ್ಯೆ ಮತ್ತು pasaword ಹಾಕಿ.
* ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಸರಿಯಾದ ಕ್ರಮದಲ್ಲಿ ತುಂಬಬೇಕು ನಂತರ ನಿಮಗೆ EPFO ಖಾತೆಯ ಪೂರ್ಣ ದೊರೆಯುತ್ತದೆ.
4. Miss Call ನೀಡುವ ಮೂಲಕ
* ನಿಮ್ಮ EPF ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ +91 1122901406
ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೆ ಕೆಲವೇ ಕ್ಷಣದಲ್ಲಿ ನಿಮ್ಮ ಖಾತೆ ವಿವರ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶದಲ್ಲಿ ಬರುತ್ತದೆ.