60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 2 ಲಕ್ಷ ಪಿಂಚಣಿ.! ತಪ್ಪದೇ ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ವಯಸ್ಸಾದ ಮೇಲೆ ದುಡ್ಡಿನ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಆ ಸಮಯದಲ್ಲಿ ಕೆಲಸ ಸಿಗುವುದಿಲ್ಲ , ಕೆಲಸ ಸಿಕ್ಕರೂ ದುಡಿಯಲು ದೇಹದಲ್ಲಿ ಶಕ್ತಿ ಇರುವುದಿಲ್ಲ. ಇಂತಹ ಸಮಯಗಳಲ್ಲಿ ನೆಮ್ಮದಿಯಾಗಿರಬೇಕು ಎಂದರೆ ದುಡಿಯುವ ವಯಸ್ಸಿನಿಂದಲೇ ಭವಿಷ್ಯದ ಬಗ್ಗೆ ಚಿಂತಿಸಿ ಹಣ ಕೂಡಿಡಬೇಕು. ಸರ್ಕಾರಿ ಹುದ್ದೆಯಲ್ಲಿ ಇದ್ದವರಿಗೆ ಪೆನ್ಷನ್ (Pension) ಬರುತ್ತದೆ, ಆದರೆ ಖಾಸಗಿ ಹುದ್ದೆಗಳಲ್ಲಿ ಇರುವವರಿಗೆ ಈ ರೀತಿ ಅವಕಾಶ ಇರುವುದಿಲ್ಲ.

ಕೆಲವರಿಗಷ್ಟೇ EPF ಮುಂತಾದ ಸೌಕರ್ಯ ಸಿಕ್ಕರೂ ಪ್ರತಿ ತಿಂಗಳು ಆದಾಯ ತರುವಂತಹ ಮೂಲ ಬೇಕು ಎಂದರೆ ನಾವೇ ಸರ್ಕಾರ ಸೂಚಿಸಿರುವ ಇತರ ಪೆನ್ಷನ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಪ್ಲಾನ್ ಮಾಡಬೇಕು. ಇಂತಹ ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಕೇಂದ್ರ ಸರ್ಕಾರವು (government pension Schemes) ಅಟಲ್ ಪೆನ್ಷನ್ ಯೋಜನೆ ನ್ಯಾಷನಲ್ ಪೆನ್ಶನ್ ಸ್ಕೀಮ್, ಸ್ಟಾಂಡ್ ಅಪ್ ಪೆನ್ಷನ್ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಗೃಹಲಕ್ಷ್ಮಿಯ ಎರಡನೇ ಕಂತಿನ ಹಣ ಬಿಡುಗಡೆ ಯಾವಾಗ.? ಇನ್ನು ಯಾರಿಗೆಲ್ಲಾ ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣ ಬಂದಿಲ್ಲ ರೇಷನ್ ಕಾರ್ಡ್ ನಲ್ಲಿ ಈ ಒಂದು ತಪ್ಪನ್ನು ಸರಿಪಡಿಸಿ.!

ಯಾವುದೇ ಅಂಚೆ ಕಛೇರಿ ಸೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಈ ಯೋಜನೆಗಳನ್ನು ಖರೀದಿಸಬಹುದು. 60 ವರ್ಷ ಆದ ಬಳಿಕ ಪ್ರತಿ ತಿಂಗಳು ಖಚಿತ ಆದಾಯ ತರುವ ಪೆನ್ಷನ್ ನೀಡುವ ಯೋಜನೆಗಳು ಇವಾಗಿದ್ದು, ನೀವು ಆರಿಸುವ ಯೋಜನೆ ಆಧಾರದ ಮೇಲೆ, ಹೂಡಿಕೆ ಮಾಡುವ ಮೊತ್ತ ಹಾಗೂ ಅದಕ್ಕೆ ಬೀಳುವ ಬಡ್ಡಿದರ ಇನ್ನಿತರ ನಿಯಮಗಳು ಅನ್ವಯ ಆಗುತ್ತದೆ. ಇದರಲ್ಲಿ ನ್ಯಾಷನಲ್ ಪೆನ್ಷನ್ ಸ್ಕೀಮ್ ಈ ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಈ ಯೋಜನೆಯ ಮೂಲಕ ಗರಿಷ್ಠ 2 ಲಕ್ಷದವರೆಗೆ ನೀವು ಪೆನ್ಷನ್ ಪಡೆಯಬಹುದಾಗಿದೆ, ಯೋಜನೆ ಬಗ್ಗೆ ಮಾಹಿತಿಗಾಗಿ ಪೂರ್ತಿ ಅಂಕಣವನ್ನು ಓದಿ.

ಯೋಜನೆಯ ಬಗ್ಗೆ ಪ್ರಮುಖ ಅಂಶಗಳು:-

● 18 ರಿಂದ 60 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
● ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೊತ್ತದ ಆಧಾರದ ಮೇಲೆ ನಿಮಗೆ ಬರುವ ಪೆನ್ಷನ್ ನಿರ್ಧಾರ ಆಗುತ್ತದೆ. ನೀವು ಕಡಿಮೆ ವಯಸ್ಸಿಗೆ ಹೂಡಿಕೆ ಮಾಡುತ್ತಾ ಬಂದರೆ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು, ನೀವು ವಯಸ್ಸಾದ ಮೇಲೆ ಹೂಡಿಕೆ ಮಾಡುವುದಾದರೆ ಹೆಚ್ಚಿನ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಬರುವುದು ಉತ್ತಮ, ಇದರಿಂದ ಒಳ್ಳೆಯ ಲಾಭವಾಗುತ್ತದೆ.

● ಈ ಯೋಜನೆಯಡಿ ಹೂಡಿಕೆ ಮಾಡುವ ಮೊತ್ತವು ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 80C ಮತ್ತು 80CCD ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳುತ್ತದೆ.
● ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ನೀವು ಈ ಯೋಜನೆಯಡಿ ಹೂಡಿಕೆ ಮಾಡಿದ ಹಣದಲ್ಲಿ ನಿಮಗೆ 60 ವರ್ಷ ಆದಮೇಲೆ ಅದರ 60% ಅನ್ನು ಹಿಂಪಡೆಯಬಹುದು. ಉಳಿಕೆ ಮೊತ್ತವನ್ನು ಪೆನ್ಷನ್ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು.

ನಿಮ್ಮ ಕುಟುಂಬದ ಜಮೀನು, ಮನೆ ಆಸ್ತಿಗಳ ಮೇಲೆ ಬೇರೆ ಯಾರದ್ರು ಸಾಲ ಮಾಡಿದ್ದರೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

● ಅಂಚೆ ಕಚೇರಿಯ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರ್ಕಾರದ ಇತರೆ ಯೋಜನೆಗಳಿಗೆ ಅನ್ವಯಿಸುವ ಎಲ್ಲಾ ನಿಯಮ ಮತ್ತು ನಿಬಂಧನೆಗಳು ಕೂಡ ಈ ಯೋಜನೆಗೂ ಅನ್ವಯಿಸುತ್ತದೆ.
● ಪ್ರತಿ ತಿಂಗಳು ನಿಮ್ಮ ಉಳಿತಾಯ ಖಾತೆಯಿಂದ ಹಣ ಕಡಿತವಾಗುವ ರೀತಿ ಸೆಲೆಕ್ಟ್ ಮಾಡುವ ಆಪ್ಷನ್ ಕೂಡ ಇರುತ್ತದೆ.
● ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ಕೊಡಬಹುದು ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ಗಳಲ್ಲಿ ಈ ಮಾಹಿತಿಯ ಬಗ್ಗೆ ಸರ್ಚ್ ಮಾಡಿ ಪಡೆದುಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now