ಪ್ರತಿಯೊಬ್ಬರಿಗೂ ಕೂಡ ತಮ್ಮ ಹೆಸರಿನಲ್ಲಿ ಆಸ್ತಿ (Property purchase) ಖರೀದಿಸಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ವಾಸಕ್ಕಾಗಿ ಮನೆ ಅಥವಾ ಮಕ್ಕಳಿಗೆ ಸೈಟು, ಕೃಷಿಕರಾಗಿದ್ದರೆ ಜಮೀನು ಖರೀದಿಸಿ ಸ್ಥಿರಾಸ್ತಿ ಸಂಗ್ರಹಿಸಬೇಕು ಎನ್ನುವ ಮಹಾಭಿಲಾಷೆ ಇರುತ್ತದೆ. ಈ ರೀತಿ ಆಸ್ತಿ ಖರೀದಿ ಮಾಡುವಾಗ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು.
ಯಾಕೆಂದರೆ ಆಸ್ತಿ ಖರೀದಿ ಮಾಡುವಾಗ ಮಾರಾಟಗಾರರು ತಮ್ಮ ಆಸ್ತಿಗಳ ಮೇಲಿರುವ ಸಾಲದ ಬಗ್ಗೆ ವಿವರಿಸದೆ ನಿಮಗೆ ಮೋಸ ಮಾಡಿ (fraud) ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಅಂತಹ ಸಮಯಗಳಲ್ಲಿ ನೀವು ದುಡ್ಡು ಕೊಟ್ಟು ಕೊಂಡುಕೊಂಡ ಆಸ್ತಿ ಕೈ ತಪ್ಪಿ ಹೋಗಬಹುದು ಅಥವಾ ನೀವೇ ಆ ಸಾಲವನ್ನು (loan) ನಿಮ್ಮ ದುಡ್ಡಿನಿಂದ ತೀರಿಸುವ ಪರಿಸ್ಥಿತಿ ಬಂದು ನಿಮಗೆ ನ’ಷ್ಟ ಆಗಬಹುದು ಈ ಬಗ್ಗೆ ತಿಳಿದುಕೊಂಡಿರಲೇಬೇಕಾದದ್ದು ಒಳ್ಳೆಯದು.
ಸಹಕಾರಿ ಸಂಘಗಳಲ್ಲಿ ಸಾಲ ಮಾಡಿದ್ದೀರಾ.? ಆಗಿದ್ರೆ ಒಮ್ಮೆ ಈ ವರದಿ ನೋಡಿ.!
ಈಗಿನ ಉದ್ದೇಶಪೂರ್ವಕವಾಗಿ ಮೋಸ ಮಾಡುವವರ ಸಂಖ್ಯೆ ಹೆಜ್ಜೆಗೆ ಇರುವುದರಿಂದ ಯಾವುದನ್ನು ಸಹ ಬಾಯಿ ಮಾತಿನಲ್ಲಿ ನಂಬಲು ಸಾಧ್ಯವಿಲ್ಲ. ಎಲ್ಲದಕ್ಕೂ ಪುರಾವೆ ಬೇಕಾಗುತ್ತದೆ. ಹೀಗೆ ಅಪರಿಚಿತರಿಂದ ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ಮತ್ತು ನಿಮ್ಮ ತಂದೆ, ತಾತ ಅಥವಾ ನಿಮ್ಮ ಕುಟುಂಬದ ಇನ್ಯಾವುದೇ ಸದಸ್ಯರ ಆಸ್ತಿಯ ಮೇಲೆ ಸಾಲ ಇದೆ ಎನ್ನುವುದನ್ನು ಮಾಹಿತಿ ತಿಳಿದುಕೊಳ್ಳಬೇಕಾದ ಸಂದರ್ಭ ಇದ್ದರೆ.
ಆಗ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಅನುಕೂಲ ಆಗಲಿ ಎಂದು ಸರ್ಕಾರ ಒಂದು ವೆಬ್ಸೈಟ್ ಬಿಡುಗಡೆ ಮಾಡಿದೆ. ಇದು ಪೇಯ್ಡ್ ವೆಬ್ಸೈಟ್ ಆಗಿದ್ದು ಈ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ನೀವು ನಿಮ್ಮ ಆಸ್ತಿಯ ಮೇಲಿನ ಸಾಲದ ಕುರಿತ ಸಂಪೂರ್ಣ ಮಾಹಿತಿಯನ್ನು ದಾಖಲೆ ಸಮೇತ ಪಡೆದುಕೊಳ್ಳಬಹುದು, ಇದರ ಮೂಲಕ ನಿಮಗೆ ವಂಚನೆ ಆಗುವ ಪ್ರಮಾಣ ಕಡಿಮೆ ಆಗುತ್ತದೆ.
ಪ್ರೈಸ್ ಮನಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವುದು ಹೇಗೆ.? ಬೇಕಾಗುವ ದಾಖಲೆಗಳೇನು ನೋಡಿ.!
ಈಗ ನಾವು ಹೇಳುವ ಈ ಸುಲಭ ವಿಧಾನಗಳನ್ನು ಪಾಲಿಸಿ, ಸಾಲದ ಮಾಹಿತಿ ಪಡೆಯಿರಿ.
● ಮೊದಲಿಗೆ https://www.cersai.org.in/CERSAI/asstsrch.prg ವೆಬ್ಸೈಟ್ ಗೆ ಭೇಟಿ ಕೊಡಬೇಕು.
● ಯಾವ ಆಸ್ತಿಯ ಖರೀದಿ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಇಚ್ಛೆ ಇದೆ ಆ ಆಸ್ತಿಗೆ ಸಂಬಂಧಪಟ್ಟ ದಾಖಲೆ ಪತ್ರಗಳ ಸಂಖ್ಯೆ ಮನೆ ನಂಬರ್, ಅದರ ವಿಳಾಸ ಅಥವಾ ಜಮೀನಾಗಿದ್ದರೆ RTC ನಂಬರ್ ಈ ರೀತಿ ಕೇಳಲಾಗುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
● ಈ ರೀತಿ ವಿವರಗಳನ್ನು ಭರ್ತಿ ಮಾಡಿದಾಗ ಆ ಆಸ್ತಿಯ ಮೇಲೆ ಯಾರಾದರೂ ಸಾಲ ಮಾಡಿದರೆ ಅದರ ಹೆಸರು ಅದರ ಮೊತ್ತ ಯಾವ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದಾರೆ ಮತ್ತು ಯಾವ ಆರ್ಥಿಕ ವರ್ಷದಲ್ಲಿ ಸಾಲ ಪಡೆದಿದ್ದಾರೆ ಎನ್ನುವ ಕುರಿತಾದ ಪೂರ್ತಿ ಮಾಹಿತಿ ಬರುತ್ತದೆ.
ಇಂಥವರಿಗೆ ಗೃಹಲಕ್ಷ್ಮಿ ಹಣ ಬರಲ್ಲ.! 1 ಲಕ್ಷ APL, BPL, ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗಳು ತಿರಸ್ಕೃತ.!
● ಇದು ಪೇಡ್ ವೆಬ್ಸೈಟ್ ಆಗಿರುವುದರಿಂದ ಈ ಮಾಹಿತಿಗಳನ್ನು ತಿಳಿದುಕೊಳ್ಳಲು ನೀವು ಶುಲ್ಕ ಪಾವತಿ ಮಾಡಬೇಕಾದ ಅವಶ್ಯಕತೆ ಇರುತ್ತದೆ. ನೀವು ಯಾವ ದಾಖಲೆಯನ್ನು ಪರೀಕ್ಷಿಸಲು ಇಷ್ಟಪಡುತ್ತೀರಾ ಎನ್ನುವುದರ ಆಧಾರದ ಮೇಲೆ ಕನಿಷ್ಠ 50 ರೂಪಾಯಿಯಿಂದ ಗರಿಷ್ಠ 500 ರೂಪಾಯಿವರೆಗೂ ಕೂಡ ಇದರಲ್ಲಿ ಶುಲ್ಕ ನಿಗದಿ ಆಗಿರುತ್ತದೆ.
● ಈ ಒಂದು ವೆಬ್ಸೈಟ್ ಸಹಾಯದಿಂದ ಆಸ್ತಿಯ ಮೇಲಿರುವ ಸಾಲದ ಮಾಹಿತಿಯನ್ನು ತಿಳಿದುಕೊಳ್ಳಬಹುದು, ಒಂದು ವೇಳೆ ಯಾರಾದರೂ ಸುಳ್ಳು ದಾಖಲೆ ತೋರಿಸಿ ಮೋಸ ಮಾಡಲು ಪ್ರಯತ್ನಿಸಿದಾಗ ಆ ದಾಖಲೆ ಸಂಖ್ಯೆಯಲ್ಲಿ ಸಾಲ ಪಡೆದವರ ಹೆಸರು ಬೇರೆ ಇದ್ದರೆ ತಕ್ಷಣ ಸಿಕ್ಕಿ ಹಾಕಿಕೊಳ್ಳುತ್ತಾರೆ.