ಸರ್ಕಾರದ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಗೆಯಾದ ಮೇಲೆ ರೇಷನ್ ಕಾರ್ಡ್ ತಿದ್ದುಪಡಿ (ration card correction) ವಿಷಯ ಹೆಚ್ಚು ಚರ್ಚೆ ಆಗುತ್ತದೆ. ಇದುವರೆಗೂ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆ ಎಂದು ಗಮನಕೊಡದವರು ಅದರಲ್ಲಿರುವ ಮಾಹಿತಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಲು ಪರದಾಡುವಂತಾಗಿದೆ.
ರೇಷನ್ ಕಾರ್ಡ್ ಗಳಲ್ಲಿ ಹೆಸರು ಸರಿ ಇಲ್ಲದ ಕಾರಣ, ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯ ಹೆಸರು ಇಲ್ಲದ ಕಾರಣ, ಮೃ’ತ ಸದಸ್ಯರ ಹೆಸರು ಕೈಬಿಡುವುದು ಹೊಸ ಸದಸ್ಯರ ಹೆಸರು ಸೇರಿಸುವುದು, ಹೊಸ ರೇಷನ್ ಕಾರ್ಡ್ ಗೆ ಅರ್ಜಿ, APL ಕಾರ್ಡ್ ನ್ನು BPL ರೇಷನ್ ಕಾರ್ಡ್ ಮಾಡಿಸುವುದು, ಇನ್ನು ಮುಂತಾದ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಜನರು ಕಾಯುತ್ತಿದ್ದಾರೆ.
ವ್ಯಕ್ತಿ ಮ-ರಣದ ನಂತರ ಅವರ ಖಾತೆಯಲ್ಲಿ ಇರುವ ಹಣ ಯಾರಿಗೆ ಸೇರುತ್ತೆ.?
ಯಾಕೆಂದರೆ ಈ ಮೇಲೆ ತಿಳಿಸಿದ ಮಾಹಿತಿಗಳು ರೇಷನ್ ಕಾರ್ಡ್ ಅಲ್ಲಿ ಸರಿಯಾಗಿ ಇಲ್ಲದ ಕಾರಣ ಅನೇಕರು ಸರ್ಕಾರದ ಗ್ಯಾರೆಂಟಿ ಯೋಜನೆಗಳ ಪ್ರಯೋಜನ ಪಡೆಯಲಾಗದೆ ವಂಚಿತರಾಗಿದ್ದಾರೆ. ಅದರಲ್ಲೂ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು (Annabhagya and Gruhalakshmi Scheme) ರೇಷನ್ ಕಾರ್ಡ್ ನಲ್ಲಿ ಮಾಹಿತಿ ಸರಿ ಇರದ ಕಾರಣ ಆ ಕುಟುಂಬದ ಮಹಿಳೆಯರು ಪಡೆತಲು ಆಗುತ್ತಿಲ್ಲ.
ಹೀಗಾಗಿ ಅವರೆಲ್ಲ ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳ ಸಲುವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುತ್ತಿರುವ ಮೇಲೆ ಸರ್ಕಾರ ಹದ್ದಿನ ಕಣ್ಣು ಇಟ್ಟಿದೆ. ಅದೇನೆಂದರೆ, ಈಗಾಗಲೇ ನಮ್ಮ ರಾಜ್ಯದಲ್ಲಿ ಮಿತಿಗಿಂತ ಹೆಚ್ಚು BPL ಕಾರ್ಡ್ ಗಳು ಚಾಲ್ತಿಯಲ್ಲಿ ಇರುವುದರಿಂದ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅರ್ಹರಿಗೂ ಕೂಡ BPL ರೇಷನ್ ಕಾರ್ಡ್ ವಿತರಣೆ ಮಾಡಲು ಆಗುತ್ತಿಲ್ಲ.
ಕನ್ನಡ ಬಂದರೆ ಸಾಕು ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಅವಕಾಶ, ತಪ್ಪದೇ ಅರ್ಜಿ ಸಲ್ಲಿಸಿ.!
ಇನ್ನೊಂದೆಡೆ ಅನುಕೂಲಿಸ್ಥರು ಕೂಡ ನಿಜಾಂಶ ಮರೆಮಾಚಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು BPL ಕಾರ್ಡ್ ಹೊಂದಿರುವುದು, ಒಂದೇ ಕುಟುಂಬದಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದರು ಕೂಡ ಹೆಚ್ಚಿನ ಸೌಲಭ್ಯ ಪಡೆಯುವ ಕಾರಣದಿಂದಾಗಿ ಒಂದೇ ವಿಳಾಸದಲ್ಲಿ ಒಂದೇ ಕುಟುಂಬದ ಸದಸ್ಯರು ಎರಡು ಮೂರು ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡಿರುವುದು ಮುಂತಾದ ವಿಷಯಗಳು ಇಲಾಖೆ ಗಮನಕ್ಕೆ ಕೂಡ ಬರುತ್ತಿರುವುದರಿಂದ ಇವುಗಳನ್ನು ಫಿಲ್ಟರ್ ಮಾಡಲು ಸರ್ಕಾರ ಇದೆ ಸರಿಯಾದ ಸಮಯ ಎಂದು ಭಾವಿಸಿದೆ.
ಅದಕ್ಕಾಗಿ ಈಗಾಗಲೇ ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಿರುವವರ ಪೈಕಿ 70% ಅರ್ಜಿದಾರರ ರೇಷನ್ ಕಾರ್ಡ್ ಗಳು ರದ್ದು ಮಾಡಿದೆ ಎನ್ನುವ ಮಾಹಿತಿ ತಿಳಿದು ಬರುತ್ತಿದೆ. ಒಟ್ಟು 24 ಲಕ್ಷ APL ಕಾರ್ಡ್ ದಾರರು ಅರ್ಜಿ ಸಲ್ಲಿಸಿದ್ದರು, ಆದರೆ ಕಳೆದ 14 ದಿನಗಳಲ್ಲಿ ಅರ್ಜಿ ತಿದ್ದುಪಡಿಯಾಗಿ ಸಲ್ಲಿಕೆಯಾಗಿರುವುದು 53,000 ಅರ್ಜಿಗಳು ಮಾತ್ರ. ಅಂತೆಯೇ ಒಟ್ಟು 3.71 ಲಕ್ಷ BPL ಕಾರ್ಡ್ ತಿದ್ದುಪಡಿಗೆ ಸಲ್ಲಿಕೆಯಾಗಿತ್ತು ಅದರಲ್ಲಿ ಸರ್ಕಾರ 1.27 ಲಕ್ಷ ಪಡಿತರ ಅರ್ಜಿಗಳಿಗೆ ಒಪ್ಪಿಗೆ ಸೂಚಿಸಿದೆ ಎನ್ನುವ ಮಾಹಿತಿ ತಿಳಿದು ಬರುತ್ತಿದೆ.
ಈ ಕಂಡೀಷನ್ ಪಾಲಿಸಿದ್ರೆ ಮಾತ್ರ ಇನ್ಮುಂದೆ ಗೃಹಲಕ್ಷ್ಮಿ ಯೋಜನೆ 2000 ಹಣ ಬರೋದು.!
ಒಟ್ಟಾರೆಯಾಗಿ ಈವರೆಗೆ 93,000 ಅರ್ಜಿಗಳು ತಿರಸ್ಕಾರಗೊಂಡಿದೆ, ಅವುಗಳಲ್ಲಿ ಅನೇಕ ಕಾರ್ಡ್ ಗಳನ್ನು ಶಾಶ್ವತವಾಗಿ ರದ್ದುಪಡಿಸಲಾಗಿದೆ ಹಾಗೂ ಉಳಿದ ಅರ್ಜಿಗಳ ಪರಿಷ್ಕರಣೆ ಆಗುತ್ತಿದ್ದು, ಈ ತಿಂಗಳ ಅಂತ್ಯದ ಒಳಗೆ ಪರಿಷ್ಕರಣೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ತಿಳಿಸಿದೆ. ಅದರಲ್ಲೂ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳು ಘೋಷಣೆಯಾದ ಮೇಲೆ ಈ ರೀತಿ ಅರ್ಜಿ ತಿದ್ದುಪಡಿಗೆ ಹೆಚ್ಚಿನ ಅರ್ಜಿಗಳು ಬರುತ್ತವೆ ಎಂದು ಆಹಾರ ಇಲಾಖೆಯ ಮೂಲಗಳು ಹೇಳುತ್ತಿವೆ.