ಪ್ರತಿಯೊಬ್ಬರಿಗೂ ಕೂಡ ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಮಾಡಬೇಕು ಎಂದು ಆಸೆ ಇರುತ್ತದೆ. ಜೊತೆಗೆ ಗ್ರಾಮೀಣ ಭಾಗದಲ್ಲಿರುವವರು ಬೇರೆ ಉದ್ಯೋಗಗಳನ್ನು ಮಾಡಲು ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಎಂದು ಹಿಂದೇಟು ಹಾಕುತ್ತಾರೆ. ಇವರಿಗೆಲ್ಲಾ ಒಂದು ಉತ್ತಮವಾದ ಅವಕಾಶ ಇದೆ. ಕನ್ನಡ ಭಾಷೆ ಚೆನ್ನಾಗಿ ಗೊತ್ತಿದ್ದರೆ, ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರೂ ಕೂಡ ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ಕೆಲಸ ಮಾಡುವ ಅವಕಾಶ ಸಿಗುತ್ತಿದೆ.
ಆಫ್‌ಲೈನ್ ನಲ್ಲಿ ನೇರವಾಗಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಯಾವ ಹುದ್ದೆ? ಏನೆಲ್ಲಾ ದಾಖಲೆ ಬೇಕು? ವಿದ್ಯಾರ್ಹತೆ ಏನಿರಬೇಕು? ವಯೋಮಿತಿ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕಡೆಯ ದಿನಾಂಕ ಇತ್ಯಾದಿ ಎಲ್ಲಾ ವಿಷಯದ ಬಗ್ಗೆಯೂ ಕೂಡ ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಈ ಕಂಡೀಷನ್ ಪಾಲಿಸಿದ್ರೆ ಮಾತ್ರ ಇನ್ಮುಂದೆ ಗೃಹಲಕ್ಷ್ಮಿ ಯೋಜನೆ 2000 ಹಣ ಬರೋದು.!
ಇಲಾಖೆಯ ಹೆಸರು:- ಕಲ್ಬುರ್ಗಿ ಗ್ರಾಮ ಪಂಚಾಯಿತಿ
ಒಟ್ಟು ಹುದ್ದೆಗಳ ಸಂಖ್ಯೆ:- 45
ಹುದ್ದೆ ಹೆಸರು:- ಮೇಲ್ವಿಚಾರಕರು
ವೇತನ ಶ್ರೇಣಿ:-
● ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಆರಂಭಿಕವಾಗಿ 15,196ರೂ. ಪ್ರತಿ ತಿಂಗಳು ಸಿಗುತ್ತದೆ.
● ಹಾಗೆಯೇ ಕಾಲಕಾಲಕ್ಕೆ ಕಾರ್ಮಿಕ ಇಲಾಖೆಯು ನಿಗದಿ ಪಡಿಸುವ ತುಟ್ಟಿಭತ್ಯೆಯನ್ನು ಕೂಡ ಪಡೆಯುತ್ತಾರೆ.
ಶೈಕ್ಷಣಿಕ ವಿದ್ಯಾರ್ಹತೆ:-
● ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ PUC ಉತ್ತೀರ್ಣವಾಗಿರಬೇಕು.
● ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರವನ್ನು ಹೊಂದಿರಬೇಕು.
● ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಕನಿಷ್ಠ ಮೂರು ತಿಂಗಳುಗಳ ಕಾಲ ಕಂಪ್ಯೂಟರ್ ಶಿಕ್ಷಣ ಪಡೆದಿರಬೇಕು.
ವಯೋಮಿತಿ:-
ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು.
ವಯೋಮಿತಿ ಸಡಿಲಿಕೆ:-
SC / ST ಅಭ್ಯರ್ಥಿಗಳಿಗೆ 5 ವರ್ಷಗಳು
OBC ಅಭ್ಯರ್ಥಿಗಳಿಗೆ 3 ವರ್ಷಗಳು.
ಅರ್ಜಿ ಶುಲ್ಕ:-
ರೂ.40 ಪಾವತಿಸಿ ಉಪ ನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಲಬುರ್ಗಿ ಕಛೇರಿಯಲ್ಲಿ ಅರ್ಜಿ ನಮೂನೆಯನ್ನು
ಪಡೆಯಬೇಕು.
ಅರ್ಜಿ ಸಲ್ಲಿಸುವ ವಿಧಾನ:-
ಈ ಮೇಲೆ ತಿಳಿಸಿದಂತೆ ಅರ್ಜಿ ನಮೂನೆಯನ್ನು ಪಡೆದು ವಿವರಗಳನ್ನು ಭರ್ತಿ ಮಾಡಿ ಉಪನಿರ್ದೇಶಕರು, ಜಿಲ್ಲಾ ಕೇಂದ್ರ ನ್ಯಾಯಾಲಯ, ಕಲಬುರ್ಗಿ ಇಲ್ಲಿಗೆ ಸಲ್ಲಿಸಬೇಕು.
ಜೊತೆಗೆ ಕೇಳಲಾಗಿರುವ ಎಲ್ಲಾ ಪೂರಕ ದಾಖಲೆಗಳ ಪ್ರತಿಗಳನ್ನು ಕೂಡ ಲಗತ್ತಿಸಬೇಕು.
ಆಯ್ಕೆ ವಿಧಾನ:-
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ.
ಜಾತಿ ಮೀಸಲಾತಿ ಆಧಾರದ ಮೇಲೆ ಆಯ್ದುಕೊಳ್ಳಲಾಗುವುದು.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 25 ಸೆಪ್ಟೆಂಬರ್, 2023.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 13 ಅಕ್ಟೋಬರ್, 2023.
ಬೇಕಾಗುವ ಪ್ರಮುಖ ದಾಖಲೆಗಳು:-
1. ವಿವರ ತುಂಬಿ ಸಹಿ ಮಾಡಿದ ಅರ್ಜಿ ಫಾರಂ
2. ಇತ್ತೀಚಿನ ಎರಡು ಭಾವಚಿತ್ರಗಳು
3. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
4. ಆಧಾರ್ ಕಾರ್ಡ್
5. ಶೈಕ್ಷಣಿಕ ಅಂಕ ಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
6. ಕಂಪ್ಯೂಟರ್ ಶಿಕ್ಷಣದ ಸರ್ಟಿಫಿಕೇಟ್
7. ಜಾತಿ ಪ್ರಮಾಣ ಪತ್ರ
8.ಆದಾಯ ಪ್ರಮಾಣದ ಪತ್ರ
ಗ್ರಾಮೀಣ ಅಭ್ಯರ್ಥಿ ಮತ್ತು ಕನ್ನಡ ಮಾಧ್ಯಮ ಸರ್ಟಿಫಿಕೇಟ್
ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು.