Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೇಂದ್ರ ಸರ್ಕಾರವು (Indian government) ದೇಶದ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಉಳಿತಾಯ ಯೋಜನೆ ಕೂಡ ಕೇಂದ್ರ ಸರ್ಕಾರ ಯೋಜನೆಗಳ ಭಾಗವಾಗಿದ್ದು, ಹೆಣ್ಣು ಮಕ್ಕಳಿಗಾಗೆ ಇರುವ ವಿಶೇಷ ಯೋಜನೆಯಾದ ಸುಕನ್ಯ ಸಮೃದ್ಧಿ ಯೋಜನೆ (Sukanya Samriddhi Yojane) ಉಳಿದ ಎಲ್ಲಾ ಯೋಜನೆಗಳಿಗಿಂತ ಹೆಚ್ಚು ವಿಶೇಷವಾದ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಅತಿ ಹೆಚ್ಚು ಬಡ್ಡಿದರ ಪಡೆಯುವ ಯೋಜನೆಯಾಗಿದೆ.
ಹೆಣ್ಣು ಮಕ್ಕಳನ್ನು ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಗಳಿಂದ ರಕ್ಷಿಸುವುದಕ್ಕಾಗಿ ಪೋಷಕರು ಮಗುವಿನ ಹೆಸರಿನಲ್ಲಿ ಸಣ್ಣ ಪ್ರಮಾಣದ ಉಳಿತಾಯ ಮಾಡಿ ಮಗುವಿಗೆ 21 ವರ್ಷ ತುಂಬಿದ ಬಳಿಕ ಉನ್ನತ ವಿದ್ಯಾಭ್ಯಾಸದ ಖರ್ಚಿಗೆ ಅಥವಾ ಮದುವೆ ಖರ್ಚಿಗೆ ಈ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಭೇಟಿ ಪಡಾವೋ, ಭೇಟಿ ಬಚಾವೋ ಎನ್ನುವ ದ್ಯೇಯದೊಂದಿಗೆ ಆರಂಭವಾಗಿರುವ ಕೇಂದ್ರ ಸರ್ಕಾರದ ಈ ಯೋಜನೆ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಗೃಹಲಕ್ಷ್ಮಿ ಇ-ಕೆವೈಸಿ ಸರ್ವಿಸ್ ಪ್ರಾರಂಭ, ಯಾರಿಗೆಲ್ಲಾ ಹಣ ಬಂದಿಲ್ಲ ಈ ರೀತಿ ಮಾಡಿ ಹಣ ಪಡೆಯಿರಿ.!
ಯೋಜನೆಯ ಹೆಸರು:- ಸುಕನ್ಯಾ ಸಮೃದ್ಧಿ ಯೋಜನೆ (SSY)
ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಲು ಕೇಳಲಾಗುವ ಅರ್ಹತೆಗಳು:-
● ಭಾರತದ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಹರು, ಹೆಣ್ಣು ಮಗುವಿನ ಪೋಷಕರು ಭಾರತದ ಖಾಯಂ ನಿವಾಸಿಗಳಾಗಿರಬೇಕು.
● 10 ವರ್ಷ ವಯಸ್ಸಿನ ಒಳಗಿರುವ ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸಬಹುದು.
● ಒಂದು ಕುಟುಂಬದ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಮಾತ್ರ ತಮ್ಮ ಖಾತೆಗಳನ್ನು ತೆರೆಯಬಹುದು, ಒಂದು ವೇಳೆ ಎರಡನೇ ಮಗುವಿನ ಸಮಯದಲ್ಲಿ ಅವಳಿ ಹೆಣ್ಣು ಮಕ್ಕಳಾಗಿದ್ದರೆ ಮೂರು ಜನರ ಹೆಸರಿನಲ್ಲೂ ಕೂಡ ಖಾತೆ ತೆರೆಯಬಹುದು, ಆದರೆ ಮೊದಲನೇ ಮಗುವಿನ ಜನರ ಸಮಯದಲ್ಲಿ ಅವಳಿ ಹೆಣ್ಣು ಮಕ್ಕಳಾಗಿದ್ದರೆ ಆ ಎರಡು ಅವಳಿ ಹೆಣ್ಣು ಮಕ್ಕಳಷ್ಟೇ ಅರ್ಹರಾಗುತ್ತಾರೆ.
ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಕೆಲವು ಪ್ರಮುಖ ಅಂಶಗಳು:-
● ಯೋಜನೆ ಅಡಿಯಲ್ಲಿ ಪೋಷಕರು ಪ್ರತಿತಿಂಗಳು ತಮ್ಮ ಶಕ್ತಿಯನುಸಾರ ಹೂಡಿಕೆ ಮಾಡಬಹುದು. ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಖಾತೆಯನ್ನು ಜೀವಂತವಾಗಿರಿಸಬಹುದು. ಗರಿಷ್ಠ ಮಿತಿ 1.5 ಲಕ್ಷ ರೂ.
● ಹೆಣ್ಣುಮಗುವಿಗೆ 18 ವರ್ಷ ವಯಸ್ಸು ತಲುಪುವವರೆಗೆ ಖಾತೆಯನ್ನು ನಿರ್ವಹಿಸುತ್ತಾರೆ.
● ಯಾವುದಾದರೂ ಸಮಯದಲ್ಲಿ ಒಂದು ವರ್ಷದವರೆಗೆ ಠೇವಣಿ ಪಾವತಿಸದೆ ಡೀಫಾಲ್ಟ್ ಆಗಿದ್ದರೆ ರೂ.50 ದಂಡ ಕಟ್ಟಬೇಕಾಗುತ್ತದೆ.
● ಯೋಜನೆಯ ಮೆಚ್ಯುರಿಟಿ ಅವಧಿಯು 21 ವರ್ಷಗಳು.
● ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ವರ್ಗಾವಣೆ ಮಾಡುವ ಸೌಲಭ್ಯವೂ ಲಭ್ಯವಾಗಿದೆ, ಅಂಚೆ ಕಛೇರಿಯಲ್ಲೂ ಸಹ ಒಂದು ಠಾಣೆಯಿಂದ ಇನ್ನೊಂದು ಅಂಚೆ ಕಛೇರಿಗೆ ವರ್ಗಾಯಿಸಬಹುದು.
● 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಹೂಡಿಕೆ ಮೊತ್ತದ 50% ಅನ್ನು ನೀವು ಹಿಂಪಡೆಯಬಹುದು.
ಬಾಡಿಗೆ ಮನೆಯಲ್ಲಿ ಇರುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ
ಬೇಕಾಗುವ ದಾಖಲೆಗಳು
● ಹೆಣ್ಣು ಮಗುವಿನ ಹಾಗೂ ಪೋಷಕರೂಬ್ಬರ ಆಧಾರ್ ಕಾರ್ಡ್
● PAN ಕಾರ್ಡ್
● ಜನನ ಪ್ರಮಾಣಪತ್ರ
● ವಿಳಾಸ ಪುರಾವೆ
● ವೈದ್ಯಕೀಯ ಪ್ರಮಾಣಪತ್ರ.
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಗ್ರಾಮದ ಅಂಚೆ ಕಚೇರಿಗೆ ಹೋಗಿ ಅಥವಾ ಹತ್ತಿರದ ರಾಷ್ಟ್ರೀಕೃತ ಬ್ಯಾಂಕಿಗೆ ಹೋಗಿ ಅರ್ಜಿ ಸಲ್ಲಿಸಿ, ನಿಮ್ಮ ಮನೆ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು.
● ಆನ್ಲೈನ್ ನಲ್ಲಿ ನೋಂದಾಯಿಸಿಕೊಳ್ಳಲು ಇಚ್ಚಿಸುವವರು ನೇರವಾಗಿ ಬ್ಯಾಂಕ್ ಗಳ ಅಧಿಕೃತ ವೆಬ್ ಸೈಟ್ ಖಾತೆಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.