ನಮ್ಮ ರಾಜ್ಯದಲ್ಲಿ ವೃದ್ಧಾಪ್ಯಾ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಯೋಜನೆ ಮೈತ್ರಿ, ಅಸಿಡ್ ದಾಳಿಗೆ ಒಳಗಾದವರು, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬ ಹೀಗೆ ಅನೇಕರಿಗೆ ಮಾಸಿಕ ಪಿಂಚಣಿ (Pension ) ನೀಡುವ ವ್ಯವಸ್ಥೆಯನ್ನು ಸರ್ಕಾರ (government) ಜಾರಿಗೆ ತಂದಿದೆ. ಅನೇಕ ವರ್ಷಗಳಿಂದ ಈ ರೀತಿ ಸಾಮಾಜಿಕ ಭದ್ರತಾ ಯೋಜನೆಯಡಿ ದುರ್ಬಲರಿಗೆ ನೆರವು ನೀಡಿ ಅದರ ಜೀವನ ನಿರ್ವಹಣೆಗೆ ಸರ್ಕಾರ ಸಹಾಯ ಮಾಡುತ್ತಿದೆ.
ಈವರೆಗೂ ಅಂಚೆ ಕಚೇರಿ ಮೂಲಕ ಪ್ರತಿಯೊಬ್ಬರು ಪಿಂಚಣಿ ಪಡೆಯುತ್ತಿದ್ದರು. ಮನೆಮನೆಗೂ ಬರುತ್ತಿದ್ದ ಪೋಸ್ಟ್ ಮ್ಯಾನ್ ಸಹಿ ಪಡೆದು ರಿಸಿಪ್ಟ್ ಕೊಟ್ಟು ಹಣ ನೀಡುತ್ತಿದ್ದರು. ಆದರೆ ಈಗ ಡಿಜಿಟಲ್ ಇಂಡಿಯಾ (Digital India) ಕಾನ್ಸೆಪ್ಟ್ ನಲ್ಲಿ ಎಲ್ಲಾ ಕ್ಷೇತ್ರವು ಡಿಜಿಟಲೀಕರಣಗೊಂಡಿದೆ. ಹಾಗಾಗಿ ಫಲಾನುಭವಿಗಳು ತಾವು ದಾಖಲೆ ನೀಡಿ ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಗಳಿಗೆ ಹಣವನ್ನು ಪಡೆಯುತ್ತಿದ್ದಾರೆ.
ಈ ಕುರಿತು ಸರ್ಕಾರ ಈಗ ಹೊಸ ಆದೇಶ ಹೊರಡಿಸಿದೆ. ಇನ್ನು ಮುಂದೆ ಈ ರೀತಿಯ ಯಾವುದೇ ಪಿಂಚಣಿಯನ್ನು ಸಹ ಖಜಾನೆ-2 ತಂತ್ರಾಂಶದ ಅಡಿಯಲ್ಲಿ ಆಧಾರ್ ಮೂಲಕ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಈ ಮೇಲೆ ತಿಳಿಸಿದ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಪ್ರತಿಯೊಬ್ಬರೂ ಕೂಡ ಈಗಾಗಲೇ ಪೆನ್ಷನ್ ಪಡೆಯುತ್ತಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡಿಸಿ NPCI ಮ್ಯಾಪಿಂಗ್ (Aadhar Seeding NPCI Mapping to bank account) ಕೂಡ ಮಾಡಿಸಿಕೊಳ್ಳಬೇಕು.
ಈ ರೀತಿ ಆದಾಗ ನೇರವಾಗಿ ನಗದು ವರ್ಗಾವಣೆ ಮಾಡಲು ಅನುಕೂಲವಾಗುತ್ತದೆ. ಹಿಂದಿನಿಂದ ಕೂಡ ಸರ್ಕಾರ ಇದರ ಬಗ್ಗೆ ಮಾಹಿತಿ ನೀಡುತ್ತಲೇ ಬಂದಿದೆ ಆದರೆ ಈ ಬಾರಿ ಕಡ್ಡಾಯವಾಗಿ ಸೆಪ್ಟೆಂಬರ್ 30ರ ಒಳಗೆ ಈ ಕಾರ್ಯ ಪೂರ್ತಿಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ. ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಈವರೆಗೆ ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆ ಮಾಡಿಕೊಳ್ಳದಿದ್ದಲ್ಲಿ.
ಗೃಹಲಕ್ಷ್ಮಿ ಇ-ಕೆವೈಸಿ ಸರ್ವಿಸ್ ಪ್ರಾರಂಭ, ಯಾರಿಗೆಲ್ಲಾ ಹಣ ಬಂದಿಲ್ಲ ಈ ರೀತಿ ಮಾಡಿ ಹಣ ಪಡೆಯಿರಿ.!
ಸೆಪ್ಟಂಬರ್ 30 ರ ಒಳಗಾಗಿ ಪಿಂಚಣಿ ಪಡೆಯಲು ಬ್ಯಾಂಕ್ ಗಳಿಗೆ ಅಥವಾ ಅಂಚೆ ಖಾತೆ ಹೊಂದಿರುವವರು ಅಂಚೆ ಕಚೇರಿಗೆ ಸಂಪರ್ಕಿಸಿ ತಕ್ಷಣವೇ ಇ-ಕೆವೈಸಿ (e-kyc) ಪ್ರಕ್ರಿಯೆಯ ಜೊತೆಗೆ NPCI ಮ್ಯಾಪಿಂಗ್ ಮಾಡಿಕೊಳ್ಳಬೇಕು. ಈಗಾಗಲೇ ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆಯಾಗಿದ್ದರೂ NPCI ಮ್ಯಾಪಿಂಗ್ ಆಗಿದೆಯೇ ಎಂದು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಈ ಪ್ರಕ್ರಿಯ ಪೂರ್ತಿಗೊಳ್ಳದೆ ಇದ್ದಲ್ಲಿ ಅಕ್ಟೋಬರ್ ತಿಂಗಳಿಂದ ಅವರಿಗೆ ಪಿಂಚಣಿ ಸ್ಥಗಿತಗೊಳ್ಳಬಹುದು.
ಇತ್ತೀಚೆಗೆ ಅನೇಕ ಫಲಾನುಭವಿಗಳು ನಿಯಮ ಮೀರಿ ಎರಡೆರಡು ಯೋಜನೆಯ ಸಹಾಯಧನ ಪಡೆಯುತ್ತಿದ್ದಾರೆ ಎನ್ನುವ ಜೊತೆಗೆ ಅನರ್ಹರು ಕೂಡ ಸರ್ಕಾರಕ್ಕೆ ವಂಚಿಸಿ ಈ ರೀತಿ ಪಿಂಚಣಿ ಸೌಲಭ್ಯ ಪಡೆದಿದ್ದಾರೆ ಎನ್ನುವ ಗುಮಾನಿಗಳು ಇದ್ದವು. ಇದನ್ನು ಕೂಡ ತಡೆಗಟ್ಟುವ ಸಲುವಾಗಿ ಸರ್ಕಾರ ಆಧಾರ್ ಮಾಹಿತಿ ಮೂಲಕ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ.
ಬಾಡಿಗೆ ಮನೆಯಲ್ಲಿ ಇರುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ
ಇದರಿಂದ ನಕಲಿ ಫಲಾನುಭವಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಹಾಗಾಗಿ ತಪ್ಪದೆ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕಾಗಿದೆ. ಇದು ಪ್ರತಿಯೊಬ್ಬರಿಗೂ ಅನುಕೂಲವಾಗುವ ಯೋಜನೆಯಾಗಿದ್ದು ಪ್ರತಿ ಮನೆಗಳಲ್ಲೂ ಕೂಡ ಈ ಯೋಜನೆಗಳಲ್ಲಿ ಪೆನ್ಷನ್ ಪಡೆಯವರು ಇದ್ದಾರೆ ಹಾಗಾಗಿ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.