ದೇಶದಲ್ಲಿ ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಇರಬೇಕು ಎನ್ನುವುದು ಸರ್ಕಾರದ ಕನಸು. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಂತ ಮನೆ ಕನಸು ಹೊಂದಿರುವವರ ಕನಸು ಈಡೇರಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ರೂಪಿಸಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ರಾಜೀವ್ ಗಾಂಧಿ ವಸತಿ ನಿಗಮ, ಇವುಗಳು ಮಾತ್ರವಲ್ಲದೆ ಇನ್ನು ಹತ್ತು ಹಲವು ಯೋಜನೆಗಳು ಜಾರಿಯಲ್ಲಿದ್ದು ಇವುಗಳಿಗೆ ಅರ್ಹರಾಗಿರುವ ಫಲಾನುಭವಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಸರ್ಕಾರ ನೆರವನ್ನು ಪಡೆದು ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಬಹುದು.
ಮನೆ ಎನ್ನುವುದು ಮನುಷ್ಯನೊಬ್ಬನ ಮೂಲಭೂತ ಅವಶ್ಯಕತೆ ಯಾಕೆಂದರೆ ಸ್ವಂತ ಮನೆ ಇಲ್ಲದೇ ಇದ್ದರೆ ಒಬ್ಬ ದುಡಿಯುವ ವ್ಯಕ್ತಿಯು ಖರ್ಚಿನ ಹೆಚ್ಚು ಭಾಗವನ್ನು ಬಾಡಿಗೆಗಾಗಿಯೇ ಮೀಸಲಿಡಬೇಕು. ಇದೊಂದು ದೊಡ್ಡ ಹೊರೆ ಆಗಿರುವುದರಿಂದ ಆದಷ್ಟು ಬೇಗ ಎಲ್ಲರೂ ಸ್ವಂತ ಮನೆ ಹೊಂದುವುದು ಉತ್ತಮ. ಆದರೆ ಸ್ವಂತ ಮನೆ ಆಗುವವರೆಗೂ ಕೂಡ ಬಾಡಿಗೆ ಮನೆಯಲ್ಲಿ ವಾಸ ಮಾಡಲೇಬೇಕು, ಹಳ್ಳಿಗಳಿಂದ ಹಿಡಿದು ನಗರ ಪ್ರದೇಶದವರೆಗೆ ಪ್ರತಿಯೊಬ್ಬರೂ ಕೂಡ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ.
ಹಳ್ಳಿಗಳಿಂದ ನಗರಕ್ಕೆ ಕೆಲಸಕ್ಕಾಗಿ ವಲಸೆ ಹೋಗುವರು ಅಥವಾ ನಗರದಲ್ಲೇ ಇದ್ದು ಸ್ವಂತ ಮನೆ ಕಟ್ಟಿಕೊಳ್ಳುವುದಕ್ಕೆ ಅನುಕೂಲ ಇಲ್ಲದವರು ಅಥವಾ ವಿದ್ಯಾಭ್ಯಾಸದ ಕಾರಣಕ್ಕಾಗಿ ಇನ್ನಿತರ ಯಾವುದೇ ಕಾರಣಕ್ಕೂ ದೂರದ ಊರುಗಳಿಗೆ ಹೋಗುವವರು ಇವರೆಲ್ಲ ಇರಲು ಬಾಡಿಗೆ ಮನೆಯನ್ನೇ ಅನುಸರಿಸಬೇಕು.
ಈ ರೀತಿ ಬಾಡಿಗೆ ಮನೆಗೆ ಹೋಗುವ ಮುನ್ನ ಕೆಲ ನಿಯಮಗಳನ್ನು ಬಾಡಿಗೆದಾರರು ತಿಳಿದುಕೊಂಡಿರಬೇಕು ಮತ್ತು ಮನೆಗಳನ್ನು ಬಾಡಿಗೆ ಕೊಡುವ ಮಾಲೀಕರಿಗೂ ಕೂಡ ಕೆಲವು ನಿಯಮಗಳು ಇದ್ದು ಇವುಗಳನ್ನು ತಪ್ಪದೆ ಅವರು ಪಾಲಿಸಬೇಕು ಇಲ್ಲವಾದಲ್ಲಿ ಮುಂದೆ ಒಂದು ದಿನ ಕಾನೂನು ತೊಡಕು ಉಂಟಾದಾಗ ಸಮಸ್ಯೆ ಎದುರಿಸಬೇಕಾಗುತ್ತದೆ.
ಮನೆ ಬಾಡಿಗೆ ಕೊಡುವುದಕ್ಕು ಮುನ್ನ ಬಾಡಿಗೆದಾರರು ಹಾಗೂ ಮನೆ ಮಾಲೀಕರ ನಡುವೆ ಒಂದು ಅಗ್ರಿಮೆಂಟ್ ಆಗಬೇಕು, ಈ ರೆಂಟ್ ಅಗ್ರಿಮೆಂಟ್ ಅಲ್ಲಿ ಯಾವ ದಿನಾಂಕದಿಂದ ಅವರು ಮನೆ ಬಾಡಿಗೆಗೆ ಬಂದಿದ್ದಾರೆ, ಪ್ರತಿ ತಿಂಗಳು ತಪ್ಪದೆ ಯಾವ ದಿನಾಂಕದಂದು ಅವರು ಬಾಡಿಗೆ ಕೊಡಬೇಕು, ಅಡ್ವಾನ್ಸ್ ಎಷ್ಟು ಹಣ ಕೊಟ್ಟಿದ್ದಾರೆ ಮತ್ತು ಮನೆ ಲೈಟ್ ಬಿಲ್ ಕರೆಂಟ್ ಬಿಲ್ ಇವುಗಳನ್ನು ಬಾಡಿಗೆದಾರರು ಸರಿಯಾಗಿ ಪಾವತಿ ಮಾಡಬೇಕು.
ಮನೆಯಲ್ಲಿ ಯಾವುದಾದರೂ ವಸ್ತುಗಳನ್ನು ಡ್ಯಾಮೇಜ್ ಮಾಡಿದ್ದರೆ ಅಥವಾ ಎಲೆಕ್ಟ್ರಿಕಲ್ ವಸ್ತುಗಳು ಹಾಳಾಗಿದ್ದರೆ ಮನೆಯ ಪೇಯಿಂಟ್ ಹಾಳಾಗಿದ್ದರೆ ಅದಕ್ಕಾಗಿ ಮನೆ ಖಾಲಿ ಮಾಡುವಾಗ ಹಣ ಕಡಿತಗೊಳಿಸಲಾಗುವುದು ಮತ್ತು ಮನೆಯಲ್ಲಿ ಯಾವ ಯಾವ ವಸ್ತು ಇದೆ, ಮನೆಯ ವಿಳಾಸ ಮತ್ತು ವಿಸ್ತೀರ್ಣ ಇತ್ಯಾದಿ ಮಾಹಿತಿ ಎಲ್ಲವನ್ನು ಒಳಗೊಂಡ ಅಗ್ರಿಮೆಂಟ್ ಆದಾಗಿರುತ್ತದೆ.
ಇದಕ್ಕೆ ಮಾಲೀಕರು ಮತ್ತು ಬಾಡಿಗೆದಾರ ಇಬ್ಬರು ಸಹಿ ಹಾಕುವುದರ ಜೊತೆಗೆ ಇಬ್ಬರ ಪರವಾಗಿ ಸಾಕ್ಷಿಗಳು ಸಹಾ ಸಹಿ ಹಾಕಬೇಕು. ನಂತರ ಇದನ್ನು ನೋಟರಿ ಮಾಡಿಸಿಕೊಂಡರೆ ಇನ್ನೂ ಒಳ್ಳೆಯದು. ಈಗ ಈ ಮನೆ ಅಗ್ರಿಮೆಂಟ್ ಗಳು 11 ತಿಂಗಳಿಗೆ ಇದೆ, ಆ ನಂತರವೂ ಕೂಡ ಅದೇ ಮನೆಯಲ್ಲಿ ಮುಂದುವರೆಯುವುದಾದರೆ ಹೊಸ ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು.
ಯಾವುದೇ ವ್ಯಕ್ತಿ 12 ವರ್ಷಗಳವರೆಗೆ ಒಂದೇ ಮನೆಯಲ್ಲಿ ವಾಸವಿದ್ದು ಅದಕ್ಕೆ ಯಾವುದೇ ರೀತಿ ಅಗ್ರಿಮೆಂಟ್ ಇಲ್ಲದೆ ಇದ್ದಾಗ ಮನೆ ನನ್ನದೇ ಎಂದು ಆತ ಕೋರ್ಟ್ ನಲ್ಲಿ ದಾವೇ ಕೊಡಬಹುದು ಹಾಗಾಗಿ ಮಾಲೀಕರು ಈ ವಿಷಯದಲ್ಲಿ ಮುತುವರ್ಜಿ ವಹಿಸಿ ಅಗ್ರಿಮೆಂಟ್ ಮಾಡಿಕೊಳ್ಳುವುದು ಒಳ್ಳೆಯದು. ಜೊತೆಗೆ ಬಾಡಿಗೆಗೆ ಕೊಡುವಾಗ ಮನೆಗಳನ್ನು ಅವರು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ಪರಿಶೀಲಿಸುತ್ತಿರಬೇಕು, ಹಾಗೆ ಮನೆಗೆ ಬಾಡಿಗೆ ಬರುವವರ ಆಧಾರ್ ಕಾರ್ಡ್ ಪ್ರತಿಯನ್ನು ದಾಖಲೆಯಾಗಿ ಮಾಲೀಕರುಗಳು ಪಡೆದುಕೊಳ್ಳಬೇಕು.