ನಾಲ್ಕನೇ ಗ್ಯಾರೆಂಟಿ ಯೋಜನೆಯಾಗಿ (Guarantee Scheme) ಜಾರಿಯಾಗಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi) ಸಹಾಯಧನವನ್ನು ಕಳೆದ ತಿಂಗಳಿಂದ ಸರ್ಕಾರವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಕೊಂಡು ನೋಂದಾಯಿಸಿಕೊಂಡಿದ್ದ ಅರ್ಹ ಫಲಾನುಭವಿಗಳು ಆಗಸ್ಟ್ 30 ರಿಂದ ಹಣ ಪಡೆಯುತ್ತಿದ್ದಾರೆ.
ಆಗಸ್ಟ್ ತಿಂಗಳ ಸಹಾಯಧನವು ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆಯಾಗಿದ್ದು ಹಣ ಪಡೆದವರು ಸೆಪ್ಟೆಂಬರ್ ತಿಂಗಳ ಸಹಾಯಧನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಎಲ್ಲರೂ ಕೂಡ ಈ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ.
ಆರರಿಂದ ಏಳು ಲಕ್ಷ ಮಹಿಳೆಯರ ಖಾತೆಗಳು ಸಕ್ರಿಯವಾಗಿರದ, ದಾಖಲೆಗಳಲ್ಲಿ ಮಿಸ್ ಮ್ಯಾಚ್ ಆಗಿರುವುದು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗಿರದ ಕಾರಣ ಅವರ ಖಾತೆಗಳಿಗೆ ಹಣ ತುಂಬಿಸಲು ಸಾಧ್ಯವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child welfare department) ತಿಳಿಸಿದೆ.
ಅದನ್ನು ಹೊರತುಪಡಿಸಿ ಇನ್ನು ಕೆಲವು ಮಹಿಳೆಯರು ಎಲ್ಲ ಸರಿ ಇದ್ದರು ಹಣ ತಲುಪಿಲ್ಲ ಎಂದು ದೂರುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅದೇನೆಂದರೆ, ಗೃಹಲಕ್ಷ್ಮಿ ಇ-ಕೆವೈಸಿ ಸರ್ವಿಸ್ (Gruhalakshmi e-kyc services) ಎನ್ನುವ ಆಪ್ಷನ್ ನ್ನು ಸೇವಾ ಸಿಂಧು ಮೂಲಕ ಬಿಡುಗಡೆ ಮಾಡಿದ್ದು ರೇಷನ್ ಕಾರ್ಡ್ ಸಂಖ್ಯೆ ಹಾಕುವ ಮೂಲಕ ಅದನ್ನು ಪೂರ್ತಿಗೊಳಿಸಿದವರಿಗೆ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರಲಿದೆ.
ಯಾವುದೇ ಸಮಸ್ಯೆಯಿಂದ ಹಣ ಪಡೆಯಲು ಆಗದಿದ್ದರೂ ಕೂಡ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು ಇದನ್ನು ಹೇಗೆ ಮತ್ತು ಎಲ್ಲಿ ಮಾಡಬೇಕು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
● Sevasindhu account ಹೊಂದಿ User ID ಹಾಗೂ Password ಇರುವವರು ನೇರವಾಗಿ https://sevasindhugs.karnataka.gov.in/gl-sp/ ಈ ವೆಬ್ ಸೈಟ್ ಗೆ ಭೇಟಿ ನೀಡಬೇಕು.
● ಯೂಸರ್ ಐ ಡಿ ಮತ್ತು ಪಾಸ್ವರ್ಡ್ ನಮೂದಿಸಿ login ಆಗಬೇಕು.
● ಸೇವಾಸಿಂಧು ಅಫೀಸಿಯಲ್ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಮೆನುಬಾರ್ ನಲ್ಲಿರುವ ಸರ್ವಿಸಸ್ ನೋಡಿ apply for services ಎನ್ನುವ ಆಪ್ಷನ್ ಅದನ್ನು ಸೆಲೆಕ್ಟ್ ಮಾಡಿ View available Services ಎನ್ನುವುದನ್ನು ಕ್ಲಿಕ್ ಮಾಡಿ.
● ಮುಂದಿನ ಪುಟಕ್ಕೆ ಹೋಗುತ್ತದೆ ಅದರಲ್ಲಿ ಮೊದಲಿಗೆ ನಿಮ್ಮ Ration card ಸಂಖ್ಯೆ ಕೇಳಲಾಗಿರುತ್ತದೆ, ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಅದರ ಕೆಳಗೆ ನೀಡಲಾಗಿರುವ word verification ಕೋಡ್ ನ್ನು ನಮೂದಿಸಿದರೆ ಮುಂದಿನ ಹಂತದಲ್ಲಿ ಫಲಾನುಭವಿಯ aadhar number ಕೇಳಲಾಗುತ್ತದೆ.
● ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ
● OTP ಯನ್ನು ಹಾಕಿ Submit ಕೊಟ್ಟರೆ Gruhalakshmi e-kyc services update ಪೂರ್ತಿ ಆಗುತ್ತದೆ.
ಸದ್ಯಕ್ಕೆ ಇಂತಹದೊಂದು ಆಪ್ಷನ್ ಸೇವಾ ಸಿಂಧು ಸರ್ವಿಸ್ ಗಳಲ್ಲಿ ಲಭ್ಯವಿದ್ದು, ಇನ್ನು ಸಹ ಪೂರ್ತಿ ಡೆವಲಪ್ ಆಗಬೇಕಿದೆ ಮತ್ತು ಸರ್ಕಾರವೇ ಇದರ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಅಫಿಷಿಯಲ್ ಆಗಿ ಅನೌನ್ಸ್ ಅಧಿಕೃತವಾಗಿ ಘೋಷಣೆ ಮಾಡಲಿದೆ. ಆಗ ಹತ್ತಿರದಲ್ಲಿರುವ ಯಾವುದೇ CSC ಕೇಂದ್ರ ಅಥವಾ ಸೇವಾಕೇಂದ್ರಗಳಲ್ಲಿ ಹೋಗಿ ಈ ರೀತಿಯಾಗಿ ಮಾಡಿಸಿಕೊಂಡು ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಬಹುದು.