ಆಗಸ್ಟ್ 30ರಂದು ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಹಣ ಬಿಡುಗಡೆ ಮಾಡಿದೆ. ಅಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಂತ ಹಂತವಾಗಿ RBI ನ ನಿಯಮಾನುಸಾರವಾಗಿ DBT ಮೂಲಕ ಹಣ ವರ್ಗಾವಣೆ ಆಗುತ್ತಿದೆ.
DBT ಮೂಲಕ ಹಣ ವರ್ಗಾವಣೆಯಾಗುತ್ತಾ ಇರುವುದರಿಂದ ನೇರವಾಗಿ ಫಲಾನುಭವಿಗಳ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಮತ್ತು ಈ ರೀತಿ ಹಣ ವರ್ಗಾವಣೆ ಮಾಡಲು ಒಂದು ದಿನಕ್ಕೆ ಇಂತಿಷ್ಟೇ ಖಾತೆಗಳು ಎನ್ನುವ ಮಿತಿ ಇರುವುದರಿಂದ ಅವುಗಳನ್ನು ಪರಿಶೀಲಿಸಿ ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ತಲುಪಿಸಲು ಸಮಯ ಹಿಡಿಯುತ್ತಿದೆ.
ಹೀಗಾಗಿ ಇನ್ನೂ ಹಣ ತಲುಪದ ಮಹಿಳೆಯರು ಗೊಂದಲಕ್ಕೆ ಒಳಗಾಗಿದ್ದಾರೆ ಅವರಿಗೆಲ್ಲ ಒಂದು ಪ್ರಮುಖ ಸುದ್ದಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child welfare department) ಅಧಿಕಾರಿಗಳು ಕೂಡ ಈ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದು ಲ.
6-7 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗಿಲ್ಲ ಜೊತೆಗೆ ಆಧಾರ್ ಲಿಂಕ್ ಆಗಿದ್ದರು ಖಾತೆಯಲ್ಲಿ ವಹಿವಾಟು ನಡೆಯದೇ ಇನ್ ಆಕ್ಟಿವ್ ಆಗಿದೆ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಮಹಿಳೆಯರು ಕೂಡ ಹಣ ಪಡೆಯಲಿದ್ದಾರೆ ಎಂದು ಸ್ಪಷ್ಟತೆ ಕೊಟ್ಟಿದ್ದಾರೆ.
ಈ ರೀತಿ ಸಮಸ್ಯೆ ಆಗಿರುವವರು ಅದನ್ನು ಸರಿಪಡಿಸಿಕೊಂಡ ನಂತರ ಅವರಿಗೂ ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಿದ್ದಾರೆ. ಎಲ್ಲಾ ಮಾಹಿತಿ ಸರಿಯಿದ್ದರೂ 25% ಫಲಾನುಭವಿಗಳು ಇನ್ನೂ ಹಣ ತಲುಪಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಅವರು ರೇಷನ್ ಕಾರ್ಡ್ ಸಕ್ರಿಯವಾಗಿದೆ ಎನ್ನುವುದನ್ನು ತಪ್ಪದೆ ಪರಿಶೀಲಿಸಬೇಕು.
ಯಾಕೆಂದರೆ ರೇಷನ್ ಕಾರ್ಡ್ ಸಕ್ರಿಯ ಎನ್ನುವ ಸ್ಟೇಟಸ್ ಹೊಂದದೇ ಇದ್ದರೆ ಅವರಿಗೂ ಕೂಡ ಹಣ ತಲುಪುವುದಿಲ್ಲ. ಈಗ ನಾವು ಹೇಳುವ ವಿಧಾನದ ಮೂಲಕ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆ ಎನ್ನುವುದನ್ನು ಚೆಕ್ ಮಾಡಿ.
● ಮೊದಲಿಗೆ ಮಾಹಿತಿ ಕಣಜ (MAHITI KANAJA) ವೆಬ್ಸೈಟ್ಗೆ ಭೇಟಿ ಕೊಡಿ, www.mahitikanaja.karntaka.gov.in ಕ್ಲಿಕ್ ಮಾಡುವ ಮೂಲಕ ಭೇಟಿ ಕೊಡಬಹುದು.
● ಸರ್ಕಾರದ ಈ ಅಫೀಷಿಯಲ್ ಪೇಜ್ ಓಪನ್ ಆಗುತ್ತದೆ ಅದರಲ್ಲಿ food and civil supply department ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಕ್ಲಿಕ್ ಮಾಡಿದ ತಕ್ಷಣ ಮುಖಪುಟದಲ್ಲಿ ಮತ್ತಷ್ಟು ಆಪ್ಷನ್ ಓಪನ್ ಆಗುತ್ತದೆ ಅದರಲ್ಲಿ Public distribution system ration details ಎಂದು ಕಾಣುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನಂತರ rationcard indiviual ಎನ್ನುವ ಆಪ್ಶನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
● ನಿಮ್ಮ ಜಿಲ್ಲೆಯಲ್ಲಿ ಸೆಲೆಕ್ಟ್ ಮಾಡಿ, ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಇಷ್ಟಾದ ಕೂಡಲೇ ನಿಮ್ಮ ರೇಷನ್ ಕಾರ್ಡ್ ಕುರಿತ ಸಂಪೂರ್ಣ ಮಾಹಿತಿ ಬರುತ್ತದೆ.
ಗೃಹಲಕ್ಷ್ಮಿ ಇ-ಕೆವೈಸಿ ಸರ್ವಿಸ್ ಪ್ರಾರಂಭ, ಯಾರಿಗೆಲ್ಲಾ ಹಣ ಬಂದಿಲ್ಲ ಈ ರೀತಿ ಮಾಡಿ ಹಣ ಪಡೆಯಿರಿ.!
● ನಿಮ್ಮ ತಾಲೂಕು, ಗ್ರಾಮ ಪಂಚಾಯಿತಿ, ಗ್ರಾಮ, ಪ್ರದೇಶ, ಕಾರ್ಡ್ ಪ್ರಕಾರ, ನ್ಯಾಯ ನ್ಯಾಯಬೆಲೆ ಅಂಗಡಿ ಹೆಸರು ಮತ್ತು ರೇಷನ್ ಕಾರ್ಡ್ ಸ್ಥಿತಿ ಕೂಡ ಪೇಜ್ ಮೇಲೆ ಕಾಣಿಸುತ್ತದೆ. ಹಾಗೆ ಅದರ ಕೆಳಗಡೆ ನಿಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯ ಸಂಖ್ಯೆ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಹೆಸರು ಇತ್ಯಾದಿ ವಿವರ ಕೂಡ ಬರುತ್ತದೆ.
ಇದರಲ್ಲಿ ರೇಷನ್ ಕಾರ್ಡ್ ಸ್ಥಿತಿ ಎಂದು ಇರುವಲ್ಲಿ ಸಕ್ರಿಯ (Ration card status active ) ಎಂದು ಇದೆಯೇ ಧೃಡಪಡಿಸಿಕೊಳ್ಳಿ. ಈ ರೀತಿ ಇಲ್ಲ ಎಂದರೆ ಅವರಿಗೂ ಗೃಹಲಕ್ಷ್ಮಿ ಹಣ ಬರುವುದಿಲ್ಲ, ತಕ್ಷಣವೇ ಅವರು ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುವ ಮೂಲಕ ಸರಿಪಡಿಸಿಕೊಳ್ಳಬೇಕು.
ಬಾಡಿಗೆ ಮನೆಯಲ್ಲಿ ಇರುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ