ಬ್ಯಾಂಕ್ ಖಾತೆ (Bank account) ಹೊಂದುವುದು ಈಗ ಪ್ರತಿಯೊಬ್ಬರಿಗೂ ಕೂಡ ಅನಿವಾರ್ಯವಾಗಿದೆ. ಯಾಕೆಂದರೆ ಶಾಲೆಗೆ ಹೋಗುವ ಮಕ್ಕಳು ಸ್ಕಾಲರ್ಶಿಪ್ ಇಂದ ಹಿಡಿದು ಉದ್ಯೋಗಸ್ಥರು ಸಂಬಳ ಪಡೆಯಲು ವೃದ್ಧರು ಮಾಸಿಕ ಪಿಂಚಣಿ ಪಡೆಗಯುವುದಕ್ಕಾಗಿ ಹಾಗೆಯೇ ಡಿಜಿಟಲ್ ಇಂಡಿಯಾ ಕನಸಿನೊಂದಿಗೆ ಕಾರಣ ಗೊಳ್ಳುತ್ತಿರುವುದರಿಂದ ಇದನ್ನು ಪ್ರೋತ್ಸಾಹಿಸುತ್ತಿರುವ ಸರ್ಕಾರ ಯಾವುದೇ ಕಲ್ಯಾಣ ಯೋಜನೆಗಳು ನೆರವನ್ನು ಕೂಡ DBT ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದೆ.
ಆದರೆ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಮಾತ್ರ ಹೊಂದಬೇಕು, ಎಷ್ಟಿದ್ದರೆ ಉತ್ತಮ ಮತ್ತು ಒಂದು ವೇಳೆ ಆತ ಆಕಸ್ಮಿಕ ಮ’ರ’ಣ ಹೊಂದಿದರೆ ಅವನ ಖಾತೆಯಲ್ಲಿರುವ ಹಣ ಯಾರಿಗೆ ಹೋಗುತ್ತದೆ ಎನ್ನುವುದರ ಕುರಿತು ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಕನ್ನಡ ಬಂದರೆ ಸಾಕು ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಅವಕಾಶ, ತಪ್ಪದೇ ಅರ್ಜಿ ಸಲ್ಲಿಸಿ.!
ಬ್ಯಾಂಕ್ ಖಾತೆಗಳಲ್ಲಿ ನಾಲ್ಕು ವಿವಿಧಗಳಿವೆ. ಉಳಿತಾಯ ಖಾತೆ, ಚಾಲ್ತಿ ಖಾತೆ, ಸಂಬಳದ ಖಾತೆ ಮತ್ತು ಜಂಟಿ ಖಾತೆ, ಸಾಮಾನ್ಯವಾಗಿ ಜನರು ತಾವು ಹಣವನ್ನು ಉಳಿಸಲು ಖಾತೆ ತೆರೆಯುತ್ತಾರೆ ಮತ್ತು ಅವಶ್ಯಕತೆ ಬಿದ್ದಾಗ ಅದನ್ನು ಹಿಂಪಡೆದುಕೊಳ್ಳುತ್ತಾರೆ. ಈ ಉಳಿತಾಯ ಖಾತೆಯಲ್ಲಿ ಗ್ರಾಹಕರು ಇರುವ ಹಣಕ್ಕೆ ಬ್ಯಾಂಕ್ ಗಳು ಬಡ್ಡಿ ಕೂಡ ನೀಡುತ್ತವೆ ಚಾಲ್ತಿ ಖಾತೆಯನ್ನು ಹೆಚ್ಚಾಗಿ ವ್ಯಾಪಾರಸ್ಥರು ಬಳಸುತ್ತಾರೆ ಸಂಬಳದ ಖಾತೆಯನ್ನು ಒಂದು ಕಂಪನಿಯು ತನ್ನ ಉದ್ಯೋಗದಾತರಿಗೆ ನೀಡುತ್ತದೆ.
ಸಂಬಳದ ಖಾತೆಯ ಶೂನ್ಯ ಖಾತೆಯಾಗಿದ್ದು ಇದು ಉಳಿತಾಯ ಖಾತೆಯಾಗಿ ಬದಲಾಗುವ ತನಕ ಕನಿಷ್ಠ ಮೊತ್ತದ ಹಣ ಇರಲೇಬೇಕಾದ ನಿಯಮ ಇಲ್ಲ, ಆದರೆ ಹಣದ ಬಹಿವಾಟು ನಡೆಯುತ್ತಾ ಖಾತೆ ಆಕ್ಟಿವ್ ಆಗಿರಬೇಕು. ಇನ್ನು ಜಂಟಿ ಖಾತೆಯನ್ನು ಗಂಡ-ಹೆಂಡತಿ ಅಥವಾ ಪೋಷಕರು-ಮಕ್ಕಳು ಜಂಟಿಯಾಗಿ ತೆರೆಯುತ್ತಾರೆ ನಮ್ಮ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿ ಇಂತಿಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು ಎನ್ನುವ ಯಾವುದೇ ಕಠಿಣ ನಿಯಮ ಇಲ್ಲ.
ಈ ಕಂಡೀಷನ್ ಪಾಲಿಸಿದ್ರೆ ಮಾತ್ರ ಇನ್ಮುಂದೆ ಗೃಹಲಕ್ಷ್ಮಿ ಯೋಜನೆ 2000 ಹಣ ಬರೋದು.!
ಒಬ್ಬ ವ್ಯಕ್ತಿಯು ಎಷ್ಟು ಬ್ಯಾಂಕ್ ಗಳಲ್ಲಿ ಬೇಕಾದರು ತನ್ನ ಖಾತೆಯನ್ನು ತೆರೆಯಬಹುದು ಆದರೆ ಬ್ಯಾಂಕ್ಗಳ ನಿಯಮದ ಅನುಸಾರವಾಗಿ ನಡೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಕೆಲವು ಬ್ಯಾಂಕ್ ಗಳು ಮಿನಿಮಮ್ ಅಕೌಂಟ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು ಎಂದು ಸೂಚಿಸಿರುತ್ತವೆ. ಇವುಗಳನ್ನು ಪಾಲಿಸದೆ ಇದ್ದಾಗ ದಂಡ ಬಿಡುತ್ತದೆ ಅಥವಾ ಬ್ಯಾಂಕ್ ಗಳ ನಿಯಮದ ಅನುಸಾರವಾಗಿ ಖಾತೆಗಳನ್ನು ಅಪ್ಡೇಟ್ ಮಾಡಿಸದೆ ಹೋದಾಗ ಇನ್ ಆಕ್ಟೀವ್ ಆಗುತ್ತವೆ.
ಬ್ಯಾಂಕ್ ಗಳು ನಮ್ಮ ಖಾತೆಗಳಿಗೆ ನಾವು ಪಡೆಯುವ ಎಟಿಎಂ ಕಾರ್ಡ್ಗಳಿಗೆ ಬಳಕೆ ಶುಲ್ಕ, ಮೆಸೇಜ್ ಅಲರ್ಟ್ ಸರ್ವಿಸಸ್ ಚಾರ್ಜಸ್ ಈ ರೀತಿ ಸೇವೆಗಳಿಗೆ ಶುಲ್ಕ ವಿಧಿಸುವುದರಿಂದ, ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಳ್ಳದೆ ಇದ್ದಾಗ ದಂಡ ವಿಧಿಸುವುದರಿಂದ ಸಾಮಾನ್ಯ ವ್ಯಕ್ತಿಯೊಬ್ಬ ಕಡಿಮೆ ಬ್ಯಾಂಕ್ ಗಳ ಖಾತೆ ಇಟ್ಟುಕೊಂಡರೇ ಬಳಕೆಯಾಗದ ಖಾತೆಗಳನ್ನು ರದ್ದುಪಡಿಸುವುದೇ ಒಳ್ಳೆಯದು.
ಒಬ್ಬ ವ್ಯಕ್ತಿ ಅಕಸ್ಮಾತ್ ಮ’ರ’ಣ ಹೊಂದಿದರೆ ದುಡ್ಡು ಯಾರಿಗೆ ಹೋಗುತ್ತದೆ ಎಂದು ಹೇಳುವುದಾದರೆ ಆ ವ್ಯಕ್ತಿ ಆತನ ಉಳಿತಾಯ ಖಾತೆಗೆ ಯಾರನ್ನು ನಾಮಿನಿ ಮಾಡಿದ್ದಾರೆ ಅವರಿಗೆ ಹೋಗುತ್ತದೆ ಇಲ್ಲವಾದಲ್ಲಿ ಕಾನೂನಿನ ಪ್ರಕಾರವಾಗಿ ಹೋಗಿ ಬಾರಿಸುದಾರರು ವಂಶವೃಕ್ಷ ಮುಂತಾದ ದಾಖಲೆಗಳನ್ನು ಕೊಟ್ಟು ಹಣ ವಿಭಾಗ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಉಳಿತಾಯ ಖಾತೆ ಇರುವುದರಿಂದ ತಮ್ಮ ಖಾತೆಗಳ ಬಗ್ಗೆ ಈ ಕನಿಷ್ಠ ಮಾಹಿತಿ ಗೊತ್ತಿರಲೇಬೇಕು ಹಾಗಾಗಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೂ ಈ ಮಾಹಿತಿ ಹಂಚಿಕೊಳ್ಳಿ.