ಕಣ್ಣುಗಳನ್ನು ನಮ್ಮ ದೇಹದ ಅತ್ಯಂತ ಮುಖ್ಯವಾದ ಭಾಗವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಕಣ್ಣುಗಳಿಂದಲೇ ನಾವು ಈ ಸುಂದರವಾದಂತಹ ಪ್ರಪಂಚವನ್ನು ನೋಡಲು ಸಾಧ್ಯವಾಗುವುದು. ಆದ್ದರಿಂದ ನಮ್ಮ ಕಣ್ಣುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನಾವು ನೀಡಬೇಕಾಗುತ್ತದೆ ಆದರೆ ಬದಲಾಗುತ್ತಿರುವಂತಹ ಜೀವನ ಶೈಲಿ ಇಂದಾಗಿ ನಮ್ಮ ದೃಷ್ಟಿ ದುರ್ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಆರೋಗ್ಯವಾದಂತಹ ಆಹಾರವನ್ನು ಸೇವನೆ ಮಾಡಿ ಅವರ ಕಣ್ಣಿನ ದೃಷ್ಟಿಯು ತುಂಬಾ ದಿನದ ವರೆಗೆ ಚೆನ್ನಾಗಿ ಇರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ದೃಷ್ಟಿ ಕಡಿಮೆಯಾಗುತ್ತದೆ ಅಂದರೆ ನಾನಾ ರೀತಿಯಾದಂತಹ ಕಣ್ಣಿನ ಸಮಸ್ಯೆಗಳು ಉಂಟಾಗಿ ಕನ್ನಡಕಗಳನ್ನು ಧರಿಸುವಂತಹ ಸಂಭವವು ಕಂಡುಬರುತ್ತಿದೆ.
ನಾವು ಪ್ರತಿದಿನ ಕಡೆಗಣಿಸದೆ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬೇಕು ಹಾಗೆಯೇ ನಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಇದರಿಂದ ನಮ್ಮ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ ಹಾಗೆಯೇ ಯಾವುದೇ ರೀತಿಯಾದಂತಹ ಕಣ್ಣಿನ ಸಮಸ್ಯೆಗಳು ನಮಗೆ ಬಾರದಂತೆ ಕಾಪಾಡುತ್ತದೆ. ಇತ್ತೀಚಿನ ಮಕ್ಕಳು ಜಾಸ್ತಿ ಮೊಬೈಲ್ ಗಳನ್ನು ಬಳಕೆ ಮಾಡುತ್ತಿರುವುದು ಹಾಗೂ ಲ್ಯಾಪ್ ಟಾಪ್, ಟಿವಿಯನ್ನು ನೋಡಲು ಈ ರೀತಿಯಾದಂತಹ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡೆಗಿಕೊಂಡಿರುತ್ತಾರೆ ಇದರಿಂದ ಅವರ ಕಣ್ಣಿನ ಮೇಲೆ ತೊಂದರೆಯನ್ನು ಉಂಟುಮಾಡಬಹುದು ಆದ್ದರಿಂದ ಈ ರೀತಿಯಾದಂತಹ ಉಪಕರಣಗಳಿಂದ ಆದಷ್ಟು ದೂರ ಇರುವುದು ತುಂಬಾ ಒಳ್ಳೆಯದು ಅವಶ್ಯಕತೆ ಇದ್ದಾಗ ಬಳಕೆ ಮಾಡುವುದು ಉತ್ತಮ.
ಅನವಶ್ಯಕವಾಗಿ ನಾವು ಯಾವುದನ್ನು ಹೆಚ್ಚಾಗಿ ಬಳಕೆ ಮಾಡಿದ್ದೆ ಆದಲ್ಲಿ ಅದು ನಮ್ಮ ಆರೋಗ್ಯದ ಮೇಲೆ ಹೆಚ್ಚು ಕೆಟ್ಟ ಪರಿಣಾಮವನ್ನು ಬೀರುತ್ತದೆ. ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ನಾವಿಲ್ಲಿ ತಿಳಿಸುವಂತಹ ಈ ಒಂದು ಪೌಡರ್ ನೀವು ದೈನಂದಿನ ವಾಗಿ ಬಳಕೆ ಮಾಡಿದರೆ ಸಾಕು ನಿಮ್ಮ ದೃಷ್ಟಿ ಉತ್ತಮವಾಗುತ್ತದೆ. ಹಾಗೆಯೇ ನಿಮ್ಮ ಕಣ್ಣಿನ ನರಗಳ ಶಕ್ತಿಯನ್ನು ಸಹ ಇದು ಹೆಚ್ಚಿಸುತ್ತದೆ ಇದನ್ನು ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು 50 ಗ್ರಾಂ ನಷ್ಟು ಕೊತ್ತಂಬರಿ ಬೀಜವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹುರಿದು ಇಟ್ಟುಕೊಳ್ಳಬೇಕು ನಂತರ ಒಂದು ಟೇಬಲ್ ಸ್ಪೂನ್ ನಷ್ಟು ಸೋಂಪು ಕಾಳು ತೆಗೆದುಕೊಂಡು ಅದನ್ನು ಸಹ ಹುರಿದು ಇಟ್ಟುಕೊಳ್ಳಿ, ನಂತರ ಇದಕ್ಕೆ 100 ಗ್ರಾಂ ನಷ್ಟು ಬಾದಾಮಿಯನ್ನು ತೆಗೆದುಕೊಂಡು ಅದನ್ನು ಹುರಿದುಕೊಳ್ಳಿ ನಂತರ ಇದಕ್ಕೆ ಕಲ್ಲುಸಕ್ಕರೆಯನ್ನು ಸೇರಿಸಿ ಒಂದು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ,
ನೀವು ರೆಡಿ ಮಾಡಿಕೊಂಡಿರುವಂತಹ ಪೌಡರ್ ಅನ್ನು ನೀವು ಒಂದು ಏರ್ ಟೈಟ್ ಕಂಟೇನರ್ ನಲ್ಲಿ ಹಾಕಿ ಇಟ್ಟುಕೊಂಡು ಇದನ್ನು ನೀವು ದಿನನಿತ್ಯ ಬಳಕೆ ಮಾಡಬಹುದು. ನಾವಿಲ್ಲಿ ಬಳಕೆ ಮಾಡಿರುವಂತಹ ಎಲ್ಲಾ ಪದಾರ್ಥಗಳು ನಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವಂತಹ ಹಾಗೆಯೆ ಆರೋಗ್ಯಕ್ಕೆ ಉತ್ತಮವಾದಂತಹ ಪದಾರ್ಥಗಳು ಆಗಿದೆ ಇದನ್ನು ನಾವು ದೈನಂದಿನವಾಗಿ ಸೇವಿಸಿದ್ದೆ ಆದಲ್ಲಿ ಇದರ ಪ್ರಯೋಜನ ನಮಗೆ ಸಿಗುತ್ತದೆ. ಈ ಒಂದು ಪೌಡರ್ ಅನ್ನು ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನೀವು ಕುಡಿದು ಮಲಗುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ.