ಈಗಾಗಲೇ ನಾವು ಆಸ್ತಿಯ ಬಗ್ಗೆ ಹಲವಾರು ಮಾಹಿತಿಗಳನ್ನು ಹೇಳಿದ್ದು ಈ ದಿನ ನಾವು ಒಟ್ಟು ಕುಟುಂಬದ ಆಸ್ತಿಯಲ್ಲಿ ಕಿರಿಯ ತಮ್ಮನಿಗೆ ತನ್ನ ಅಣ್ಣಂದಿರು ಯಾವುದೇ ರೀತಿಯಾದಂತಹ ಪಾಲನ್ನು ಕೊಡುತ್ತಿಲ್ಲ ವಾದಂತಹ ಸಮಯದಲ್ಲಿ ಕಿರಿಯ ಸಹೋದರ ಆಸ್ತಿಯಲ್ಲಿ ಹೇಗೆ ಪಾಲನ್ನು ತೆಗೆದುಕೊಳ್ಳುವುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ. ಈಗ ಒಂದು ಉದಾಹರಣೆಯನ್ನು ಇಟ್ಟುಕೊಂಡು ಈ ದಿನ ಮೇಲಿನ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳೋಣ.
ಒಟ್ಟು ಮೂರು ಜನ ಅಣ್ಣತಮ್ಮಂದಿರು ಇದ್ದಂತಹ ಸಮಯದಲ್ಲಿ ಪಿತ್ರಾರ್ಜಿತ ಆಸ್ತಿ 4 ಎಕರೆ ಇತ್ತು ಎಂದರೆ ಅದು ಮೂರು ಜನ ಅಣ್ಣತಮ್ಮಂದಿರಿಗೂ ಕೂಡ ಹೋಗು ತ್ತದೆ. ಹಾಗೆಯೇ ಈ ಮೂರು ಜನ ಒಟ್ಟಾಗಿ ಸೇರಿ ಸ್ವಯಾರ್ಜಿತವಾಗಿ ಆಸ್ತಿಯನ್ನು ಖರೀದಿ ಮಾಡಿದ್ದು ಇದನ್ನು ಯಾರು ಕೂಡ ಯಾರ ಹೆಸರಿಗೂ ಮಾಡಿಸಿಕೊಂಡಿರುವುದಿಲ್ಲ ಬದಲಿಗೆ ಎಲ್ಲರ ಹೆಸರನ್ನು ಕೂಡ ಸೇರಿಸಿರುತ್ತಾರೆ.
ಅಂತಹ ಸಮಯದಲ್ಲಿ ಕಿರಿಯ ಸಹೋದರನಿಗೆ ಅಣ್ಣ ನಿನಗೆ ಇದರಲ್ಲಿ ಯಾವುದೇ ರೀತಿಯ ಪಾಲು ಇಲ್ಲ ಕೇವಲ ನನಗೆ ಮಾತ್ರ ಈ ಆಸ್ತಿ ಸೇರತಕ್ಕದ್ದು ಆದ್ದರಿಂದ ನೀನು ಇದರಲ್ಲಿ ಪಾಲನ್ನು ಕೇಳುವ ಹಕ್ಕನ್ನು ಹೊಂದಿರುವು ದಿಲ್ಲ ಎಂದು ಹೇಳುತ್ತಿರುತ್ತಾರೆ. ಆ ಸಂದರ್ಭದಲ್ಲಿ ಕಿರಿಯ ಸಹೋದರ ತನ್ನ ಸ್ವಂತ ಆಸ್ತಿ ಅಂದರೆ ಕುಟುಂಬದ ಒಟ್ಟು ಆಸ್ತಿಯನ್ನು ಪಡೆದು ಕೊಳ್ಳುವಂತಹ ಹಕ್ಕನ್ನು ಹೊಂದಿರುತ್ತಾನ ಅಥವಾ ಹೊಂದಿರುವುದಿಲ್ಲವ ಎಂದರೆ, ಕಿರಿಯ ಸಹೋದರ ಕುಟುಂಬದ ಆಸ್ತಿಯಲ್ಲಿ ಪಾಲನ್ನು ಕೇಳುವ ಹಕ್ಕನ್ನು ಹೊಂದಿರುತ್ತಾನೆ ಎಂದೇ ಹೇಳಬಹುದು.
ಏಕೆಂದರೆ ಯಾವುದೇ ಆಸ್ತಿಯನ್ನು ನೀವು ಪಿತ್ರಾರ್ಜಿತ ಆಸ್ತಿಯಾಗಿ ಪಡೆದುಕೊಂಡಿದ್ದರೆ ಅದು ಸಂಪೂರ್ಣವಾಗಿ ಎಲ್ಲರಿಗೂ ಕೂಡ ಭಾಗ ಹೋಗುತ್ತದೆ. ಅದೇ ರೀತಿಯಾಗಿ ಸ್ವಯಾರ್ಜಿತವಾಗಿ ಎಲ್ಲರೂ ಸೇರಿ ತೆಗೆದುಕೊಂಡಂತಹ ಆಸ್ತಿಯಲ್ಲಿಯೂ ಕೂಡ ಪ್ರತಿಯೊಬ್ಬರಿಗೂ ಪಾಲು ಸೇರಲೇಬೇಕು. ಹಾಗೇನಾದರು ಆ ಆಸ್ತಿ ಕೇವಲ ಒಬ್ಬನ ಹೆಸರಿನಲ್ಲಿ ಇದ್ದರೆ ಅವನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದರೆ ಆ ಆಸ್ತಿಯನ್ನು ಉಳಿದ ತಮ್ಮಂದಿರು ಕೇಳುವ ಹಕ್ಕನ್ನು ಹೊಂದಿರುವುದಿಲ್ಲ.
ಆದರೆ ಇಲ್ಲಿ ಕುಟುಂಬದ ಆಸ್ತಿಯನ್ನು ಕೇವಲ ಒಬ್ಬರ ಹೆಸರಿನಲ್ಲಿ ಯಾವುದೇ ರೀತಿಯಾದಂತಹ ಹಕ್ಕು ಪತ್ರವನ್ನು ಮಾಡಿಸಿರುವುದಿಲ್ಲ ಆದ್ದರಿಂದ ಆ ಕುಟುಂಬದ ಆಸ್ತಿ ಎಲ್ಲರಿಗೂ ಕೂಡ ಸೇರುತ್ತದೆ ಎಂದೇ ಹೇಳಬಹುದು. ಹಾಗೆಯೇ ಈ ಸಂದರ್ಭದಲ್ಲಿ ಅವರ ಅಣ್ಣಂದಿರು ಆಸ್ತಿಯನ್ನು ಕೊಡುವುದಿಲ್ಲ ಎಂದು ವಾದ ಮಾಡುತ್ತಿದ್ದರೆ. ನೀವು ಈ ಸಮಯದಲ್ಲಿ ಕೋರ್ಟ್ ಮೂಲಕ ಹೋಗಿ ಅರ್ಜಿಯನ್ನು ಹಾಕುವುದರ ಮೂಲಕ ನೀವು ನಿಮಗೆ ಸೇರುವಂತಹ.
ಆಸ್ತಿಯನ್ನು ಪಾಲು ತೆಗೆದುಕೊಳ್ಳಬಹುದಾಗಿರುತ್ತದೆ. ಇದಕ್ಕೆ ಸಂಬಂಧಿಸಿ ದಂತೆ ಕೆಲವೊಂದಷ್ಟು ದಾಖಲಾತಿ ಪತ್ರಗಳನ್ನು ಕೋರ್ಟ್ ಗೆ ಒಪ್ಪಿಸುವು ದರ ಮೂಲಕ ನೀವು ಒಟ್ಟು ಕುಟುಂಬದ ಆಸ್ತಿಯಲ್ಲಿ ಪಾಲನ್ನು ಪಡೆದು ಕೊಳ್ಳಬಹುದಾಗಿರುತ್ತದೆ. ಹಾಗೂ ಇದರಲ್ಲಿ ಒಟ್ಟು ಕುಟುಂಬದ ಆಸ್ತಿ ಎನ್ನುವುದಕ್ಕೆ ಸರಿಯಾದ ದಾಖಲಾತಿಗಳು ಇದ್ದರೆ ಮಾತ್ರ ನೀವು ಈ ಆಸ್ತಿಯಲ್ಲಿ ಪಾಲನ್ನು ಪಡೆದುಕೊಳ್ಳಬಹುದು ಹಾಗೂ ಪಿತ್ರಾರ್ಜಿತ ಆಸ್ತಿ ಏನಾದರೂ ಇದ್ದರೆ ಅದನ್ನು ನೀವು ಈಗಾಗಲೇ ಹಂಚಿಕೊಂಡಿದ್ದೀರಿ ಎಂದರೆ ಅದಕ್ಕೂ ಕೂಡ ನೀವು ಕೋರ್ಟ್ ಗೆ ಸರಿಯಾದಂತಹ ದಾಖಲಾತಿಗಳನ್ನು ತೋರಿಸುವುದು ಬಹಳ ಮುಖ್ಯವಾಗಿರುತ್ತದೆ.
ಒಟ್ಟಾರೆಯಾಗಿ ನಿಮ್ಮ ಕುಟುಂಬದ ಆಸ್ತಿಯಲ್ಲಿ ನೀವು ಯಾವುದೇ ರೀತಿಯ ಪಾಲನ್ನು ಪಡೆದುಕೊಂಡಿಲ್ಲ ಎನ್ನುವುದಕ್ಕೆ ಸರಿಯಾದ ದಾಖ ಲಾತಿಗಳನ್ನು ಕೊಟ್ಟರೆ ನೀವು ಕಡ್ಡಾಯವಾಗಿ ನಿಮ್ಮ ಒಟ್ಟು ಕುಟುಂಬದ ಆಸ್ತಿಯಲ್ಲಿ ಪಾಲನ್ನು ಪಡೆದುಕೊಳ್ಳುವ ಹಕ್ಕನ್ನು ಪಡೆಯುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.