ಸರ್ಕಾರದಿಂದ ಸಾಲ ಮನ್ನಾ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ ನೋಡಿ.

 

WhatsApp Group Join Now
Telegram Group Join Now

ರಾಜ್ಯದಲ್ಲಿ ಈಗ ವಿಧಾನಸಭಾ ಎಲೆಕ್ಷನ್ ವಾತಾವರಣ ರಂಗೇರುತ್ತಿದೆ. ಸರ್ವ ಪಕ್ಷಗಳು ಕೂಡ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗಾಗಿ ಪ್ರತಿ ವರ್ಗವನ್ನು ಮನದಲ್ಲಿ ಇಟ್ಟುಕೊಂಡು ಒಂದು ವೇಳೆ ಗೆದ್ದರೆ ಅವರಿಗಾಗಿ ಜಾರಿಗೆ ತರುವ ಯೋಚನೆಗಳ ಬಗ್ಗೆ ಮಾತನಾಡಿ ಜನರಿಗೆ ಭರವಸೆ ನೀಡುತ್ತಿವೆ. ಎಲ್ಲಾ ಕಡೆ ಸಮಾವೇಶಗಳು ಜೋರಾಗಿ ನಡೆಯುತ್ತಿತ್ತು ಮುಂದಿನ ತಿಂಗಳಲ್ಲಿ ರಾಜ್ಯದಲ್ಲಿ ಎಲೆಕ್ಷನ್ ನಡೆಯುವ ಸಾಧ್ಯತೆಗಳಿವೆ.

ಕಳೆದ ಬಾರಿ ವಿಧಾನಸಭಾ ಎಲೆಕ್ಷನ್ ನಡೆದ ಸಮಯದಲ್ಲಿ ರೈತರ ಸಾಲ ಮನ್ನ ಘೋಷಣೆ ಮಾಡಿದ್ದು ದೊಡ್ಡ ಘೋಷಣೆ ಆಗಿತ್ತು. ಹಾಗಾಗಿ ಈ ವರ್ಷ ಗೆದ್ದ ಪಕ್ಷಗಳು ರೈತರಿಗಾಗಿ ಏನು ಮಾಡಲಿದ್ದಾರೆ ಈ ಬಾರಿಯೂ ನಮ್ಮ ಕಷ್ಟಕ್ಕೆ ಆಗಲಿದ್ದಾರ ಎಂದು ರೈತ ವರ್ಗವು ಆಸೆ ಗಣ್ಣಿನಿಂದ ನೋಡುತ್ತಿದೆ. ರಾಜ್ಯದಲ್ಲಿ ಈಗಲೂ ಕೂಡ ಸಾಕಷ್ಟು ರೈತರು ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆದಿದ್ದಾರೆ.

ರಾಜ್ಯದಲ್ಲಿ ಆಗುತ್ತಿರುವ ಹವಮಾನ ವೈಪರೀತ್ಯಗಳಿಂದ, ಮಳೆ ಆಡುತ್ತಿರುವ ಜೂಜಾಟದಿಂದ ರೈತರಿಗೆ ತಮ್ಮ ಸಾಲ ತೀರಿಸುವುದು ಕಷ್ಟವಾಗಿ ಇದೊಂದು ಹೊರೆಯಂತಾಗಿದೆ. ಇದನ್ನು ಮನಗಂಡಿರುವ ಸರ್ಕಾರಗಳು ಇದರ ಬಗ್ಗೆ ಏನಾದರೂ ಘೋಷಣೆ ಮಾಡಲಿವೆಯಾ ಎಂದು ರೈತವರ್ಗ ಕಾಯುತ್ತಿದ್ದೆ ಆದರೆ ರಾಜ್ಯದಲ್ಲಿ ಚುನಾವಣೆ ಇರುವುದರಿಂದ ಚುನಾವಣೆ ನೀತಿ ಸಂಹಿತೆಯಿಂದ ಸಾಲ ಮನ್ನಾ ಮಾಡುವ ಪ್ರಕ್ರಿಯೆಗೆ ತಡೆ ಬಿದ್ದಿದೆ.

ಆದರೆ ಈ ಹಿಂದೆ ಸಾಲ ಮನ್ನಾ ಸೌಲಭ್ಯ ಪಡೆದಿದ್ದ ರೈತರಗಳ ಪಟ್ಟಿಯನ್ನು ಬಿಡುಗಡೆ ಮಾಡಿ ತಮ್ಮ ಸಾಲ ಎಷ್ಟು ಮನ್ನಾಗಿದೆ ಅಥವಾ ಸಂಪೂರ್ಣ ಮನ್ನಾ ಆಗಿದೆಯಾ ಎಂದು ವಿವರಗಳ ವಿಷಯವನ್ನು ಆನ್ಲೈನಲ್ಲಿ ಚೆಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅದನ್ನು ಚೆಕ್ ಮಾಡಿಕೊಳ್ಳಬೇಕಾದ ವಿಧಾನ ಈ ರೀತಿಯಾಗಿ ಇರಲಿದೆ.

ಕಿಸಾನ್ ಸಮಾಧಾನ ಎನ್ನುವ ಯೋಜನೆ ಮೂಲಕ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಆ ಮೂಲಕ ಈಗಾಗಲೇ ಹಲವು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಘೋಷಣೆಯನ್ನು ಕೂಡ ಮಾಡಿದೆ. ಈ ಕಿಸಾನ್ ಸಮಾಧಾನ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ರೈತರುಗಳು ಅವರ ರಾಜ್ಯ ಜಿಲ್ಲೆ ತಾಲೂಕು ಮತ್ತು ರೈತರ ಹೆಸರು, ರೈತರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಸಾಲದ ಮೊತ್ತ ಇತ್ಯಾದಿ ಸ್ವ ವಿವರಗಳನ್ನು ತುಂಬಿ ತಾವು ರೈತರ ಸಾಲ ಮನ್ನಾ ಆಗಿರುವ ಲಿಸ್ಟ್ ಅಲ್ಲಿ ಇದ್ದೇವೆಯೇ ಮತ್ತು ಎಷ್ಟು ಸಾಲ ಮನ್ನಾ ಆಗಿದೆ ಎನ್ನುವುದರ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿದೆ.

ಸದ್ಯಕ್ಕೆ ಈಗ ಬಿಡುಗಡೆ ಆಗಿರುವ ಪಟ್ಟಿಯು ಮಧ್ಯಪ್ರದೇಶ ರಾಜ್ಯದಾಗಿದೆ. ಮಧ್ಯಪ್ರದೇಶದ ರೈತರುಗಳು ಈ ವೆಬ್ಸೈಟ್ ಭೇಟಿ ಕೊಡುವ ಮೂಲಕ ಈ ಕ್ರಮವಾಗಿ ಲಿಸ್ಟ್ ಚೆಕ್ ಮಾಡಬಹುದಾಗಿದೆ. ಮಧ್ಯಪ್ರದೇಶದ ಸಾಗರ, ಶಿಯೋಪುರ, ಮಂಡ್ಲ, ನರಸಿಂಹಪುರ, ಅಶೇಕ್ ನಗರ, ಶಿವಪುರಿ, ದೇವಾಸ್ ಈ ಭಾಗದ ರೈತರುಗಳ ಸಾಲ ಮನ್ನಾ ಪಟ್ಟಿ ಬಿಡುಗಡೆ ಆಗಿದೆ. ಕೇಂದ್ರ ಸರ್ಕಾರದ ಈ ಸ್ಕೀಮ್ ನ ಫಲಾನುಭವಿಗಳು ಆಗಿರುವ ರೈತರುಗಳು ಈಗ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಈ ವೆಬ್ ಸೈಟ್ ಗೆ ಭೇಟಿ ಕೊಟ್ಟು ತಮ್ಮ ಹೆಸರು ಈ ಫಲಾನುಭವಿಗಳಲ್ಲಿ ಇದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು. ಈ ವಿಷಯವನ್ನು ಹೆಚ್ಚಿನ ರೈತರಿಗೆ ತಲುಪಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now