ಬೇಸಾಯ ನಮ್ಮ ದೇಶದಲ್ಲಿ ಕೋಟ್ಯಾಂತರ ಕುಟುಂಬಗಳು ಅವಲಂಬಿಸಿರುವ ಕಸುಬಾಗಿದೆ. ಹಾಗಾಗಿ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿಯೇ ಆಗಿದ್ದು ಇದು ಆದಾಯ ಉತ್ಪಾದನೆಯಲ್ಲಿ ಮೊದಲನೇ ವಲಯದಲ್ಲಿದೆ.
ಕಮರ್ಷಿಯಲ್ ಆಗಿ ಯೋಚಿಸುವುದು ಹೊರತು ಪಡಿಸಿ ನಮ್ಮ ದೇಶದ ಜನಸಂಖ್ಯೆಗೆ ಆಹಾರ ಉತ್ಪಾದನೆ ಉದ್ದೇಶದಿಂದ ಯೋಚಿಸಿದರು ಕೃಷಿ ಉಳಿದ ಎಲ್ಲಾ ಕ್ಷೇತ್ರಕ್ಕಿಂತಲೂ ಮನುಷ್ಯನ ಜೀವನಕ್ಕೆ ಉಸಿರಾಟದಷ್ಟೇ ಮುಖ್ಯ ಎಂದು ಹೇಳಬಹುದು. ಆದರೆ ಭಾರತದಲ್ಲಿನ ಕೃಷಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ನಮ್ಮ ದೇಶದಲ್ಲಿ ವ್ಯವಸಾಯವು ಮಳೆ ಜೊತೆ ಆಡುವ ಜೂಜಾಟ ಎಂದು ಆರ್ಥಿಕ ತಜ್ಞರೇ ಹೇಳಿದ್ದಾರೆ.
ಈ ಸುದ್ದಿ ಓದಿ:- ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 12,000 ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!
ನಮ್ಮ ದೇಶದಲ್ಲಿ ಕೃಷಿ ಮಾಡಿ ಯಶಸ್ವಿಯಾಗಲು ಸಾಕಷ್ಟು ಸವಾಲುಗಳನ್ನು ಎದುರಿಸಲೇ ಬೇಕಾಗಿದೆ ದೇಶ ಎಷ್ಟೇ ಮುಂದುವರೆದಿದ್ದರೂ ಕೃಷಿ ಪದ್ಧತಿಯಲ್ಲಿ ಕೂಡ ಆಧುನಿಕ ಯಂತ್ರೋಪಕರಣಗಳ ಬಳಕೆ ಮತ್ತು ಟೆಕ್ನಾಲಜಿ ಬಳಕೆ ಅನುಸರಿಸಿಯು ಕೂಡ ಬಂಡವಾಳ ಸಂಪನ್ಮೂಲಗಳ ಕೊರತೆ, ಕೂಲಿ ಕಾರ್ಮಿಕರ ಕೊರತೆ, ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಇರುವುದು, ಇತ್ಯಾದಿ ಇತ್ಯಾದಿಯಾಗಿ ಇನ್ನು ಅನೇಕ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ.
ಇದೆಲ್ಲದಕ್ಕೂ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರತಿ ಬಾರಿ ಬಜೆಟ್ ಮಂಡನೆ ಆದಾಗಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರಕ್ಕಾಗಿ ಬಹಳ ದೊಡ್ಡ ಮೊತ್ತದ ಅನುದಾನವನ್ನೇ ಎತ್ತಿಡುತ್ತಿದೆ. ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳನ್ನು ರೈತನಿಗಾಗಿಯೇ ರೂಪಿಸಿವೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬಡ್ಡಿರಹಿತ ಸಾಲ ಅಥವಾ ಕಡಿಮೆ ಬಡ್ಡಿ ಅಥವಾ ಸಬ್ಸಿಡಿ ರೂಪದಲ್ಲಿ ಕೃಷಿ ಕ್ಷೇತ್ರಕ್ಕೆ ಸಾಲ ನೀಡುವುದನ್ನು ಹೆಸರಿಸಬಹುದು.
ಈ ಸುದ್ದಿ ಓದಿ:- 1 ಮರದಲ್ಲಿ 300 ಕಾಯಿವರೆಗೂ ಫಲ ಸಿಗುತ್ತೆ.! ತೆಂಗಿನ ಮರ ಇರುವವರು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು ಅಧಿಕ ಲಾಭ ಪಡೆಯಬಹುದು.!
ಇದರ ಪಟ್ಟಿಗೆ ಈ ವರ್ಷ ಹೊಸತಾಗಿ ರೈತನಿಗೆ ವಾರ್ಷಿಕವಾಗಿ ರೂ.25,000 ಸಹಾಯಧನವನ್ನು ನೀಡುವಂತಹ ಮತ್ತೊಂದು ಯೋಜನೆ ಕೂಡ ಸೇರುತ್ತಿದೆ. ವಾರ್ಷಿಕವಾಗಿ ಮೂರು ಕಂತುಗಳಲ್ಲಿ ತಲಾ ರೂ.2000 ದಂತೆ ರೂ.6,000 ನೀಡುವ ಯೋಜನೆ ಬಗ್ಗೆ ಎಲ್ಲರಿಗೂ ತಿಳಿದಿದೆ.
ಆದರೆ ಇದು ಎಕರೆಗೆ ಅನ್ವಯವಾಗಿ ಗರಿಷ್ಠ 5 ಎಕರೆವರೆಗೆ ವಾರ್ಷಿಕ 25,000 ನೀಡುವಂತಹ ಹೊಸ ಯೋಜನೆ ಯಾಗಿದ್ದು ಇದರ ಹೆಸರು ಕಿಸಾನ್ ಆಶೀರ್ವಾದ ಯೋಜನೆ (Kisan Ashirvad Scheme) ಎನ್ನುವುದಾಗಿದೆ. ಯೋಜನೆಗೆ ಯಾರು ಅರ್ಹರು? ಎಷ್ಟು ಅನುದಾನ ಸಿಗುತ್ತದೆ? ಬೇಕಾಗುವ ದಾಖಲೆಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ? ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ.
ಈ ಸುದ್ದಿ ಓದಿ:- BMTC ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷಾ ಪ್ರಾಧಿಕಾರದಿಂದ ಡೈರೆಕ್ಟ್ ಅರ್ಜಿ ಲಿಂಕ್ ಬಿಡುಗಡೆ, ಮೊಬೈಲ್ ನಲ್ಲೇ ಹೀಗೆ ಅರ್ಜಿ ಸಲ್ಲಿಸಿ.!
ಯೋಜನೆಯ ಹೆಸರು:- ಕಿಸಾನ್ ಆಶೀರ್ವಾದ ಯೋಜನೆ
ಸಿಗುವ ಸಹಾಯಧನ:-
ಎಕರೆಗೆ ಅನ್ವಯವಾಗಿ ಗರಿಷ್ಠ ರೂ.25,000
* 1.ಎಕರೆಗೆ ರೂ.5,000
* 2 ಎಕರೆಗೆ ರೂ.10,000
* 3 ಎಕರೆಗೆ ರೂ.15,000
* 4 ಎಕರೆಗೆ ರೂ.20,000
* 5 ಎಕರೆಗೆ ರೂ.25,000
ಕಂಡೀಷನ್ ಗಳು:-
* 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತನಾಗಿರಬೇಕು
* ರೈತನ ಹೆಸರಿನಲ್ಲಿ ಎಲ್ಲಾ ದಾಖಲೆಗಳು ಇದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು
* ಪ್ರಸ್ತುತವಾಗಿ ಈ ಯೋಜನೆಯು ಜಾರ್ಖಂಡ್ ರಾಜ್ಯದ ರೈತರಿಗೆ ಮಾತ್ರ ಅನ್ವಯಿಸುತ್ತಿದೆ, ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯಿಸುವ ನಿರೀಕ್ಷೆ ಇದೆ.
ಅರ್ಜಿ ಸಲ್ಲಿಸುವ ವಿಧಾನ:-
* ರೈತನು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್ ಮತ್ತು ರೈತನ ಐಡಿ
* ಭೂಮಿಗೆ ಸಂಬಂಧಿತ ದಾಖಲೆಗಳು
* ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ