ಗಂಡ ಸ-ತ್ತಿದ್ದರೆ ಅತ್ತೆ ಮಾವ ಮನೆಯಿಂದ ಹೊರ ಹಾಕಿದ್ದರೆ. ಗಂಡನ ಆಸ್ತಿಯಲ್ಲಿ ಪಾಲು ಪಡೆಯುವುದು ಹೇಗೆ.

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಆಸ್ತಿಗಾಗಿ ಜಗಳ ವ್ಯಾಜ್ಯ ಎಲ್ಲಾ ಕಡೆ ಸರ್ವೆ ಸಾಮಾನ್ಯವಾಗಿ ಹೋಗಿದೆ. ಎಷ್ಟೋ ಜನರು ತಮಗಾದ ಅ’ನ್ಯಾ’ಯಕ್ಕೆ ಯಾವ ರೀತಿ ನ್ಯಾಯ ಪಡೆದುಕೊಳ್ಳಬೇಕು ಎನ್ನುವ ಕನಿಷ್ಠ ಕಾನೂನು ಕೂಡ ತಿಳಿದುಕೊಂಡಿಲ್ಲ. ಅಂತವರಿಗೆ ಈ ಲೇಖನದ ಮೂಲಕ ಕೆಲ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗಿದೆ. ಅದರಲ್ಲಿ ಮೊದಲನೆಯದಾಗಿ ಗಂಡ ಸ’ತ್ತಿ’ದ್ದು ಅತ್ತೆ ಮಾವ ಮನೆಯಿಂದ ಹೊರ ಹಾಕಿದ್ದರೆ ಗಂಡನ ಆಸ್ತಿಯಲ್ಲಿ ಅವರಿಗೆ ಪಾ’ಲು ಸಿಗುತ್ತದೆ ಇಲ್ಲವೋ ಎನ್ನುವ ಅನುಮಾನ ಇದ್ದೇ ಇರುತ್ತದೆ. ಅಂತಹ ಅನುಮಾನ ನಿಮ್ಮಲ್ಲೂ ಇದ್ದರೆ ಇದನ್ನು ಓದಿ.

ಇದನ್ನು ಎಲ್ಲಮ್ಮ ಎನ್ನುವ ಒಬ್ಬ ಮಹಿಳೆಯ ಉದಾಹರಣೆಯೊಂದಿಗೆ ವಿವರಿಸಲಾಗುತ್ತದೆ. ಎಲ್ಲಮ್ಮ ಎನ್ನುವವರು ವಿವಾಹವಾಗಿ 14 ವರ್ಷದ ಮಗಳಿರುತ್ತಾಳೆ. ಆದರೆ ಇವರಿಗೆ ಮದುವೆ ಆದ ಕೆಲ ವರ್ಷಗಳಲ್ಲಿ ಗಂಡನ ಜೊತೆ ವೈಮನಸ್ಸು ಬರುತ್ತದೆ. ಗಂಡ ಅತ್ತೆ ಮಾವ ಎಲ್ಲರೂ ಸೇರಿ ಮನೆಯಿಂದ ಆಚೆಗೆ ಅಟ್ಟಿರುತ್ತಾರೆ. ಇವರು ಮಗಳು ಬಹಳ ಚಿಕ್ಕವರಿದ್ದಾಗಲೇ ಗಂಡನಿಂದ ದೂರಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಇದಾದ ಬಳಿಕ ಗಂಡ ಸ.ತ್ತು ಏಳೆಂಟು ವರ್ಷಗಳು ಆಗುತ್ತದೆ ಆಗಲು ಸಹ ಅತ್ತೆಮಾವ ಇವರನ್ನು ಮನೆಗೆ ಸೇರಿಸಿಕೊಳ್ಳುವ ಮನಸ್ಸು ಮಾಡುವುದಿಲ್ಲ.

ಕೊನೆಗೆ 3 ವರ್ಷಗಳ ಹಿಂದೆ ಗಂಡನ ತಂದೆ ಅಂದರೆ ಮಾವ ಸಹ ತೀರಿಕೊಂಡಾಗ ಇವರ ಗಂಡನ ಮತ್ತು ಮಾವನ ಆಸ್ತಿಯನ್ನೆಲ್ಲ ಮಾವನ ಅಣ್ಣನ ಮಕ್ಕಳು ಅನುಭವಿಸುತ್ತಿರುತ್ತಾರೆ. ಅವರಿಗೆ ಹೋಗಿ ತಮ್ಮ ಪಾಲಿದ್ದನ್ನು ಕೊಡಿ ಎಂದು ಎಲ್ಲಮ್ಮ ಬೇಡಿಕೊಂಡಾಗ ಅವರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿ. ಇಲ್ಲಿ ನಿನಗೆ ಯಾವುದೇ ಹಕ್ಕು ಇಲ್ಲ ಮತ್ತೊಮ್ಮೆ ಈ ಕಡೆ ಬರಬೇಡ ಎಂದು ಅವಮಾನ ಮಾಡಿ ಕಳುಹಿಸಿರುತ್ತಾರೆ.

ಎಲ್ಲಮ್ಮ ಉದಾಹರಣೆ ಅಷ್ಟೇ, ಆದರೆ ಇದೇ ರೀತಿಯಾಗಿ ಎಷ್ಟೋ ಹೆಣ್ಣುಮಕ್ಕಳ ಪರಿಸ್ಥಿತಿ ಹೀಗೇ ಇದೆ. ಅಂತವರಿಗೆಲ್ಲ ಮುಂದೇನು ಮಾಡುವುದು ಎನ್ನುವ ಗೊಂದಲ ಇದ್ದರೆ ಕಾನೂನು ಅಡಿಯಲ್ಲಿ ಅದಕ್ಕೆ ಈ ರೀತಿ ಪರಿಹಾರ ಇದೆ. ಅದೇನೆಂದರೆ ಮೊದಲನೆಯದಾಗಿ ಒಬ್ಬ ಒಳ್ಳೆಯ ಲಾಯರ್ ಅನ್ನು ಸಂಪರ್ಕಿಸಿ ಅವರಿಗೆ ನಿಮ್ಮ ಸಮಸ್ಯೆ ಎಲ್ಲವನ್ನು ವಿವರಿಸಿ. ಅವರ ಮೂಲಕ ಈಗ ನಿಮ್ಮ ಗಂಡನ ಹಾಗೂ ಮಾವನ ಆಸ್ತಿಯನ್ನು ಯಾರು ಅನುಭವಿಸುತ್ತ ಇರುವರು ಅವರಿಗೆ ನೀವು ಒಂದು ನೋಟಿಸ್ ಕೊಡಬೇಕು, ಆಸ್ತಿಯಲ್ಲಿ ಭಾಗ ಬೇಕು ಎಂದು ನೋಟಿಸ್ ಕಳುಹಿಸಿ ಅವರ ರೆಸ್ಪಾನ್ಸ್ ನೋಡಬೇಕು.

ಅಥವಾ ನಿಮಗೆ ಅವರು ಸಾಕಷ್ಟು ಅವಮಾನ ಮಾಡಿದ್ದಾರೆ ಕಣ್ಣೀರು ಹಾಕಿಸಿದ್ದಾರೆ ಅವರ ಜೊತೆ ಮಾತುಕತೆ ಕೂಡ ಮಾಡುವ ಮನಸ್ಸು ಇಲ್ಲ ಅಂದರೆ ನೇರವಾಗಿ ಮತ್ತೊಂದು ಮಾರ್ಗದ ಮೂಲಕ ನಿಮ್ಮ ಹಕ್ಕನ್ನು ಪಡೆಯಬಹುದು. ಮಹಿಳೆ ಮದುವೆ ಆದಾಗಲೇ ಆ ಮನೆಗೆ ಸಂಬಂಧ ಪಟ್ಟವರು. ಅವರ ಮಾವನದು ಪಿತ್ರಾರ್ಜಿತ ಆಸ್ತಿ ಆಗಿದ್ದರೆ ಆ ಹಕ್ಕು ಅವಳ ಪತಿಗೂ ಕೂಡ ಇರುತ್ತದೆ. ಜೊತೆಗೆ ಪತಿ ನಿಧನ ಅದಾಗಲೇ ಪತಿ ಪಾಲಿನ ಆಸ್ತಿಯ ಹಕ್ಕು ಮಹಿಳೆಗೆ ಮತ್ತು ಆಕೆಯ ಮಗಳಿಗೆ ಬಂದಿರುತ್ತದೆ. ಆದ್ದರಿಂದ ಆಕೆ ಇಲ್ಲಿಯತನಕ ಏನೇನು ಆಗಿದೆಯೋ ಅದನ್ನೆಲ್ಲ ಒಂದು ವಾದ ಪತ್ರದಲ್ಲಿ ಬರೆಯಬೇಕು.

ಜೊತೆಗೆ ಗಂಭೀರವಾಗಿ ಒಂದು ಪಾರ್ಟಿಶನ್ ಹಾಕಬೇಕು. ಈ ಮೂಲಕ ಹೇಗೆ ತಮ್ಮ ಹಕ್ಕನ್ನು ಪಡೆಯಬಹುದು ಎನ್ನುವುದನ್ನು ಬಹಳ ಸರಳವಾಗಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಎಂಆರ್ ಸತ್ಯನಾರಾಯಣ್ ಅವರು ತಿಳಿಸಿದ್ದಾರೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮಗೆ ಬೇಕಾದ ಮಾಹಿತಿ ತಿಳಿದುಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now