ಹೆಣ್ಣು ಮಕ್ಕಳಿಗೆ ಆಸ್ತಿ ಭಾಗ ಮಾಡುವಾಗ ಪಾಲು ಕೊಡಬೇಕಾಗುತ್ತಾ.? ಇಲ್ಲವಾ.? ಇದೊಂದು ದಿನಾಂಕದ ಬಗ್ಗೆ ತಿಳಿದ್ರೆ ನೀವೇ ನಿರ್ಧರಿಸಬಹುದು.

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಹಿಳೆಯ ಪಾಲು.! ಮಹಿಳೆಯರಿಗೆ ‌ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಯಾವಾಗ.? ಹೇಗೆ.? ಕೊಡಬೇಕು ನೋಡಿ. ಇತ್ತೀಚಿನ ದಿನಗಳಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಪಾಲು ತೆಗೆದುಕೊಳ್ಳುತ್ತಿರುವುದು ಸಾಮಾನ್ಯ ವಿಷಯವಾಗಿದೆ. ಆದರೆ ಆಸ್ತಿ ಪಾಲು ಮಾಡುವ ವಿಷಯದಲ್ಲಿ ಬಹುತ್ತೇಕರು ಜಗಳ ಮಾಡಿಕೊಂಡು ಸಂಬಂಧಗಳನ್ನು ಹಾಳು ಮಾಡಿಕೊಂಡು ನ್ಯಾಯಾಲಯದ ಮೆಟ್ಟಿಲು ಏರಿರುವಂತಹ ಹಲವಾರು ದೃಶ್ಯಗಳನ್ನು ಸಹ ನಾವು ಕಾಣಬಹುದಾಗಿದೆ.

WhatsApp Group Join Now
Telegram Group Join Now

ದಿನೇಶ್ ಎಂ. ಹೊಸಳ್ಳಿ, ವಕೀಲರು ಅವರು ಹಿಂದೂ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಯಾವಾಗ ಸಿಗುತ್ತದೆ ಹಾಗೂ ಯಾವ ಸಂದರ್ಭದಲ್ಲಿ ಸಿಗುವುದಿಲ್ಲ ಎಂಬುದರ ಬಗ್ಗೆ ಈ ಕೆಳಗೆ ವಿವರಿಸಿದ್ದಾರೆ.ಪಿತ್ರಾರ್ಜಿತ, ಸ್ವಯಾರ್ಜಿತ ಅಥವಾ ಇನ್ಯಾವುದೇ ತರಹ ಪಡೆದಂತಹ ಆಸ್ತಿಗಳಿಗೆ ಉತ್ತರಾಧಿಕಾರಿ ಯಾರು ಎಂಬುದನ್ನು ನೇಮಿಸಲು ಕಾನೂನಿನಲ್ಲಿ ಹಿಂದೂ ಉತ್ತರಾಧಿಕಾರ ಅಧಿನಿಯಮ 1956 ರಲ್ಲಿ ಜಾರಿಗೆ ತಂದಿತ್ತು. ಈ ಅಧಿನಿಯಮದಲ್ಲಿ ಲಿಂಗ ತಾರತಮ್ಯ ಅಂದರೆ ಹೆಣ್ಣು ಮಕ್ಕಳಿಗೆ ಯಾವುದೆ ಆಸ್ತಿಯಲ್ಲಿ ಪಾಲು ಇರುವುದಿಲ್ಲ ಎಂಬುದಾಗಿತ್ತು.

ಅದನ್ನು ಪರಿಗಣಿಸಿದ ರಾಜ್ಯ ಸರ್ಕಾರವು 20.12.2004 ರಲ್ಲಿ ಒಂದು ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದಿಸಿ ರಾಷ್ಟ್ರಪತಿಯವರ ಅಂಕಿತವನ್ನು ಪಡೆದು 09.09.2005 ರಂದು ಅಧಿನಿಯಮವನ್ನು ಜಾರಿಗೊಳಿಸಿತು. ಆ ಹೆಣ್ಣು ಮಗಳು ಪಿತ್ರಾರ್ಜಿತ ಆಸ್ತಿಯಲ್ಲಿ ಯಾವ ಸಂದರ್ಭದಲ್ಲಿ ಪಾಲು ಪಡೆಯಬಹುದು ಎಂಬುದನ್ನು ಈ ಕೆಳಕಂಡಂತೆ ವಿವರಿಸಿದ್ದಾರೆ.

1. ಈ ಅಧಿನಿಯಮದ ಅನ್ವಯ ಹೆಣ್ಣು ಮಗಳು ಹುಟ್ಟಿದ ದಿನದಿಂದಲೂ ಕೂಡ ಪಿತ್ರಾರ್ಜಿತ ಆಸ್ತಿಗೆ ಗಂಡು ಮಗನಷ್ಟೆ ಹಕ್ಕುದಾರಳಾಗಿರುತ್ತಾಳೆ ಹಾಗೂ ಜವಾಬ್ದಾರಿ ಮತ್ತು ಹೊಣೆಯನ್ನು ಹೊಂದಿರುತ್ತಾಳೆ. 2.2005 ರ ಅಧಿನಿಯಮದ ಅನ್ವಯ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಬಯಸುವ ಹೆಣ್ಣು ಮಕ್ಕಳ ತಂದೆಯು ಜೀವಂತವಾಗಿರಬೇಕು ಎಂಬ ಅವಶ್ಯಕತೆ ಇರುವುದಿಲ್ಲ. ಆದರೆ 09.09.2005 ರವರೆಗೆ ಆಸ್ತಿಯು ತಂದೆಯ ಹೆಸರಿನಲ್ಲಿ ಇರಬೇಕು.

3. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲಿಚ್ಚಿಸುವ ಹೆಣ್ಣು ಮಕ್ಕಳು ಜೀವಂತವಾಗಿರಬೇಕು ಎಂಬ ಅವಶ್ಯಕತೆ ಇರುವುದಿಲ್ಲ ಬದಲಾಗಿ ಅಂತಹ ಹೆಣ್ಣು ಮಗಳ ಮಕ್ಕಳು ಈ ಆಸ್ತಿಯಲ್ಲಿ ಹಕ್ಕನ್ನು ಹೊಂದಿರುತ್ತಾರೆ. 4. ಹೆಣ್ಣು ಮಗಳು ವಿವಾಹವಾಗಿದ್ದರು ಆಗದಿದ್ದರೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕನ್ನು ಹೊಂದಿದ್ದು ಪಾಲು ಕೇಳಬಹುದಾಗಿದೆ. 4. 20.12. 2004ರ ಪೂರ್ವದಲ್ಲಿ ಜನಿಸಿದ ಹೆಣ್ಣು ಮಕ್ಕಳು ಸಹ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಹೊಂದಿದ್ದು ಪಾಲುದಾರರಾಗಿರುತ್ತಾರೆ.

ಅಲ್ಲದೆ ಯಾವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಲು ಆಗುವುದಿಲ್ಲ ಎಂಬುದನ್ನು ಈ ಕೆಳಗಿನಂತೆ ತಿಳಿಸಲಾಗಿದೆ. 1. 2004 ರ ತಿದ್ದುಪಡಿ ಮಸೂದೆಯ ಪೂರ್ವದಲ್ಲಿ ಹೆಣ್ಣುಮಗಳ ಸಹೋದರರು ಪಿತ್ರಾರ್ಜಿತ ಆಸ್ತಿಯಲ್ಲಿ ನೋಂದಾಯಿತ ಪತ್ರದಂತೆ ಆಸ್ತಿ ಪಾಲು ಮಾಡಿಕೊಂಡು ಆ ಪತ್ರದ ಅನ್ವಯ ಸಹೋದರರು ತಮ್ಮ ತಮ್ಮ ಹೆಸರಿಗೆ ಖಾತೆಯನ್ನು ಮಾಡಿಸಿಕೊಂಡಿದ್ದಂತಹ ಸಂದರ್ಭದಲ್ಲಿ ಹೆಣ್ಣುಮಗಳು ಪಾಲು ಕೇಳಲು ಅವಕಾಶವಿಲ್ಲ.

2. 2004 ರ ಪೂರ್ವದಲ್ಲಿ ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ಸಹೋದರರಲ್ಲಿ ವಿವಾದ ಉಂಟಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಅದಕ್ಕೆ ಸಂಬಂಧಿಸಿದಂತೆ ಪ್ರಾರ್ಥಮಿಕ ಡಿಗ್ರಿ ಆಗಿ ನಂತರ ಅಂತಿಮ ತೀರ್ಪಿನ ಅನ್ವಯ ಸಹೋದರರು ಅವರವರ ಪಾಲುಗಳನ್ನು ತಮ್ಮ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಲು ಅವಕಾಶ ಇರುವುದಿಲ್ಲ.

3. ಸಹೋದರರು ಮೌಖಿಕವಾಗಿ ಆಸ್ತಿಯನ್ನು ಹಂಚಿಕೊಂಡು ಕಂದಾಯ ಇಲಾಖೆಯಲ್ಲಿ ನೋಂದಾಯಿಸಿ ತಮ್ಮ ತಮ್ಮ ಹೆಸರಿಗೆ ಖಾತೆಯನ್ನು ಮಾಡಿಸಿಕೊಂಡಿದ್ದಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಲು ಅವಕಾಶ ಇರುವುದಿಲ್ಲ. ಅಲ್ಲದೆ ಸಹೋದರರು ಆಸ್ತಿಯನ್ನು ಪಾಲು ಮಾಡಿಕೊಂಡು ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ನೋಂದಾಯಿಸಿ ತಮ್ಮ ತಮ್ಮ ಹೆಸರಿಗೆ ಖಾತೆ ಮಾಡಿಸಿ ಕೊಂಡಿರದ ಸಂದರ್ಭದಲ್ಲಿ ಆ ಆಸ್ತಿಯಲ್ಲಿ ಹೆಣ್ಣು ಮಗಳು ಪಾಲು‌ ಕೇಳಬಹುದಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now