ಸರ್ಕಾರದಿಂದ ರೈತರಿಗೆ ಮತ್ತೊಂದು ಸಿಹಿಸುದ್ದಿ, ರಾಜ್ಯದ ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ವಿತರಣೆ.!

 

ಕೇಂದ್ರ ಸರ್ಕಾರದಿಂದ ದೇಶದ ಎಲ್ಲಾ ರೈತರಿಗೂ ಕೂಡ ಸಿಹಿಸುದ್ದಿ ಸಿಕ್ಕಿದೆ. ಅದೇನೆಂದರೆ ಈಗಾಗಲೇ ದೇಶದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭವಾಗಿದೆ. ಈಗ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಬಿತ್ತನೆ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳು ಮುಂತಾದ ಸಾಮಾಗ್ರಿಗಳ ಅವಶ್ಯಕತೆ ಇದೆ.

ಈಗಾಗಲೇ ದೇಶದಾದ್ಯಂತ ಎಲ್ಲಾ ರೈತರಿಗೂ ಅನುಕೂಲವಾಗಿ ಈ ಮೂಲಕ ರೈತನ ಕೂಡ ಅಭಿವೃದ್ಧಿ ಆಗಲಿ ಎನ್ನುವ ಕಾರಣದಿಂದ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಸೇರಿ ಸಾಕಷ್ಟು ಯೋಜನೆಗಳ ಮೂಲಕ ಸಹಾಯ ಮಾಡುತ್ತಿವೆ. ರೈತರಿಗೆ ರಿಯಾಯಿತಿ ಬಡ್ಡಿದರದಲ್ಲಿ ಅಥವಾ ಬಡ್ಡಿ ರಹಿತವಾಗಿ ಸಾಲ ಸೌಲಭ್ಯ, ಕಿಸಾನ್ ಸಮ್ಮಾನ್ ಯೋಜನೆಯಂತಹ ಯೋಜನೆಗಳ ಮೂಲಕ ಸಹಾಯಧನ ಮತ್ತು ಫಸಲ್ ಭೀಮಾ ಯೋಜನೆಗಳ ಮೂಲಕ ಬೆಳೆ ವಿಮೆ ಯೋಜನೆ ಇನ್ನೂ ಮುಂತಾದ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರವು ರಸಗೊಬ್ಬರಗಳ ವಿಚಾರದಲ್ಲಿ ರೈತರಿಗೆ ಮಾರಾಟಗಾರರಿಗೆ ಆದೇಶವೊಂದನ್ನು ನೀಡಿದೆ. ಈಗ ಪ್ರತಿಯೊಬ್ಬ ರೈತನು ಕೂಡ ತನ್ನ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ರಸಗೊಬ್ಬರವನ್ನು ಬಳಸುತ್ತಾನೆ. ಹೀಗಾಗಿ ರಸಗೊಬ್ಬರದ ಅವಶ್ಯಕತೆ ಇರುವ ಇಂತಹ ಸಮಯಗಳಲ್ಲಿ ಇವುಗಳನ್ನು ಅಡ್ವಾಂಟೇಜ್ ಆಗಿ ತೆಗೆದುಕೊಂಡು ದಲ್ಲಾಳಿಗಳು ಕೃತಕ ಯಾವ ಅಭಾವ ಸೃಷ್ಟಿಸಿ ಸಮಸ್ಯೆ ಉಂಟು ಮಾಡುತ್ತಾರೆ.

ಆ ಕಾರಣಕ್ಕಾಗಿ ಸರ್ಕಾರ ಈ ಸಮಸ್ಯೆಯನ್ನು ನಿವಾರಣೆ ಮಾಡಲು ಒಂದು ಮಹತ್ತರದ ನಿರ್ಧಾರಕ್ಕೆ ಬಂದಿದೆ. ಇದರ ಕುರಿತು ಕೇಂದ್ರ ಕೃಷಿ ಇಲಾಖೆಯ ಅಧಿಕಾರಿಗಳೊಬ್ಬರು ಮಾತನಾಡಿ ರಸಗೊಬ್ಬರಗಳ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಮತ್ತು ಒಂದು ವೇಳೆ ಸಮಸ್ಯೆ ಉಂಟಾದರೆ ರೈತರು ಏನು ಮಾಡಬೇಕು ಎನ್ನುವುದನ್ನು ಸವಿವರವಾಗಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೂಡ ಆಯಾ ಜಿಲ್ಲೆಗಳಿಗೆ ಅಗತ್ಯವಿರುವಷ್ಟು ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳ ದಾಸ್ತಾನು ಆಗಿರುವ ಕುರಿತು ಎಲ್ಲಾ ಮಾರಾಟಗಾರರಿಗೆ ಮತ್ತು ರೈತರಿಗೆ ಮಾಹಿತಿ ನೀಡಿ ಸರ್ಕಾರವೇ ಬೆಲೆ ನಿಗದಿ ಮಾಡಿರುವ ಬಗ್ಗೆ ತಿಳಿಸಿದೆ. ಮುಂಗಾರು ಕೃಷಿ ಚಟುವಟಿಕೆಗೆ ರೈತರು ಬಳಸುವಂತಹ ಯೂರಿಯರ್, DAP ಮತ್ತು ಪೊಟ್ಯಾಷಿಯಂ ರಸಗೊಬ್ಬರಗಳಿಗೆ ಬೆಲೆಯನ್ನು ನಿಗದಿ ಮಾಡಿದೆ.

ಅದರ ಪ್ರಕಾರ ಯೂರಿಯಾ ರಸಗೊಬ್ಬರ ಪ್ರತಿ ಚೀಲಕ್ಕೆ 266ರೂ, DAP ಪ್ರತಿ ಚೀಲಕ್ಕೆ 1350ರೂ, ಮತ್ತು ಪೊಟ್ಯಾಶಿಯಂ ಪ್ರತಿ ಚೀಲಕ್ಕೆ 1800 ಎಂದು ಸರ್ಕಾರವೇ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ. ರೈತರು ತಮ್ಮ ಆಧಾರ್ ಕಾರ್ಡ್ ನೀಡಿ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಮಾರಾಟಗಾರರು ಅಥವಾ ಯಾವುದೇ ಅಂಗಡಿಯವರು ಈ ಬೆಲೆಗಿಂತ ಹೆಚ್ಚು ಬೆಲೆ ಕೇಳಿದರೆ.

ಅಥವಾ ಸರಕು ಲಭ್ಯವಿದ್ದರೂ ಕೂಡ ಕೃತಕ ಅಭಾವ ಸೃಷ್ಟಿಸಿ ತೊಂದರೆ ಮಾಡಿದರೆ, ಕೇಳಿದ ರಸಗೊಬ್ಬರ ಬಿಟ್ಟು ಬೇರೆ ರಸಗೊಬ್ಬರಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರೆ ಅಥವಾ ಕೇಳಿದ ರಸಗೊಬ್ಬರಗಳನ್ನು ಕೊಡದೆ ಇದ್ದರೆ ರೈತರು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅವರ ವಿರುದ್ಧ ದೂರು ಕೊಡಲು ಸೂಚಿಸಿದೆ. ಅಂತಹ ಅಂಗಡಿ ಹಾಗೂ ಮಾರಾಟಗಾರರ ಮೇಲೆ ಕ್ರಿಮಿನಲ್ ಮೊಖದ್ದಮೆ ದಾಖಲಿಸಲಾಗುವುದು ಒಂದು ವೇಳೆ ಅಪರಾಧ ಸಾಬೀತಾದರೆ ಅಂತಹ ಅಂಗಡಿಗಳ ಲೈಸೆನ್ಸ್ ಅನ್ನು ರದ್ದು ಮಾಡುವಂತಹ ಕ್ರಮವನ್ನು ಕೂಡ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನು ಸರ್ಕಾರದ ಅಧಿಕಾರಿಗಳು ಕೊಟ್ಟಿದಾರೆ.

Leave a Comment

%d bloggers like this: