ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಕುರಿತು ಮತ್ತೊಂದು ಮಾಹಿತಿಯನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ರವರು ಹಂಚಿಕೊಂಡಿದ್ದಾರೆ.
ಅದೇನೆಂದರೆ, ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಯನ್ನು ಪಡಿತರ ಚೀಟಿ ಹೊಂದಿರುವ ಕುಟುಂಬದ ಹಿರಿಯ ಮಹಿಳೆಯ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಆದರೆ e-KYC ಸಮಸ್ಯೆ ಮತ್ತು ಬ್ಯಾಂಕ್ ಖಾತೆ ಆಕ್ಟಿವ್ ಆಗಿರದ, ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರದ ಇನ್ನಿತರ ತಾಂತ್ರಿಕ ಸಮಸ್ಯೆಯಿಂದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ 20 ಲಕ್ಷ ಮಹಿಳೆಯರು ಮೊದಲನೇ ಕಂತಿನ ಹಣವನ್ನು ಪಡೆಯಲಾಗಿರಲಿಲ್ಲ.
ಈಗ ಹಂತ ಹಂತವಾಗಿ ಸಮಸ್ಯೆಯನ್ನು ಪರಿಹರಿಸುವುದಾಗಿ ಸಚಿವೆ ಹೇಳಿದ್ದಾರೆ ಇದರೊಂದಿಗೆ ಹಂಚಿಕೊಂಡ ಮತ್ತೊಂದು ಪ್ರಮುಖದ ಮಾಹಿತಿ ಏನೆಂದರೆ, ಗೃಹಲಕ್ಷ್ಮಿ ಯೋಜನೆ ಹಣವು ನಿಗದಿತ ಸಮಯದಂದು ಫಲಾನುಭವಿಗಳಿಗೆ ತಲುಪುತ್ತಿಲ್ಲ, ಹೀಗಾಗಿ ಮಹಿಳೆಯರು ಗೊಂದಲಕ್ಕೀಡಾಗಿದ್ದಾರೆ ಮತ್ತು ಬ್ಯಾಂಕುಗಳ ಮುಂದೆ ತಮ್ಮ ಬ್ಯಾಂಕ್ ಖಾತೆ ವಿವರ ಚೆಕ್ ಮಾಡಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಈ ರೀತಿ ಆಗುತ್ತಿರುವ ಅವ್ಯವಸ್ಥೆಯ ತಡೆಗಟ್ಟಲು ಒಂದು ನಿಗದಿತ ದಿನಾಂಕದಂದು ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಮಾಡಲು ಚಿಂತನೆ ನಡೆಯುತ್ತಿದೆ ಎನ್ನುವ ಬಗ್ಗೆ ಅವರು ವಿಷಯ ಹಂಚಿಕೊಂಡಿದ್ದಾರೆ. ಈ ಪ್ರಕಾರವಾಗಿ ಈವರೆಗೆ ನಡೆದಿರುವ ಚರ್ಚೆಯ ಪ್ರಕಾರ ಪ್ರತಿ ತಿಂಗಳ 15-20ನೇ ತಾರೀಖಿನ ಒಳಗಡೆ ಎಲ್ಲ ಮಹಿಳಾ ಫಲಾನುಭವಿಗಳ ಖಾತೆಗೂ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೂ ಕೂಡ DBT ಮೂಲಕ ಹಣ ವರ್ಗಾವಣೆ ಮಾಡಲು ಅನುಸರಿಸಬೇಕಾಗಿದ್ದ ಹಂತಗಳನ್ನು ದಾಟಲು ವಿಳಂಬವಾಗುತ್ತಿತ್ತು. ಈಗ ಒಮ್ಮೆ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರಿಗೆ ಎರಡನೇ ಅಥವಾ ಮೂರನೇ ತಿಂಗಳ ಹಣ ವರ್ಗಾವಣೆ ಮಾಡಲು ಹೆಚ್ಚು ಸಮಸ್ಯೆಯಾಗುವುದಿಲ್ಲ.
ಜೊತೆಗೆ ಸರ್ಕಾರವು ಹಣ ಬಿಡುಗಡೆ ಮಾಡಿ ಫಲಾನುಭವಿಗಳು ಹಣ ಪಡೆಯುವವರೆಗೂ 25 ದಿನಗಳು ಸಮಯವಾಗುತ್ತಿತ್ತು. ಈಗ ಅದನ್ನು ಇನ್ನಷ್ಟು ಶೀಘ್ರವಾಗಿ ಮುಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇದಕ್ಕಾಗಿ ಆಗುತ್ತಿದ್ದ ಹೆಚ್ಚಿನ ಸಮಯವಕಾಶವನ್ನು ತಪ್ಪಿಸಲು ಇನ್ನು ಮುಂದೆ ಸರಕಾರ ಟ್ರೆಶರಿಗೆ ಹಣ ಕಳುಹಿಸಿ ಅಲ್ಲಿಂದ ನಮ್ಮ ಇಲಾಖೆಯ ಪ್ರಧಾನ ಕಚೇರಿಯಿಂದ ಎಲ್ಲರಿಗೂ ಹಣ ಹೋಗುವಂತೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಾಗಾಗಿ ಇನ್ನು ಮುಂದೆ ಮಹಿಳೆಯರು ತಮಗೆ ಹಣ ವರ್ಗಾವಣೆ ಆಗಿಲ್ಲ ಎಂದು ಚಿಂತೆಗೀಡಾಗುವುದು ಬೇಡ. ಗೃಹಲಕ್ಷ್ಮಿ ಹಣ ಬಿಡುಗಡೆಗೆ ಒಂದು ನಿಗದಿತ ದಿನಾಂಕ ಗೊತ್ತಾದರೆ ಈ ಸಮಸ್ಯೆಗೆಲ್ಲ ಮುಕ್ತಿ ಸಿಗಲಿದೆ ಯೋಜನೆ ಬಗ್ಗೆ ಪ್ಲಾನ್ ಮಾಡಿದಾಗಲೂ ಇದೆ ವಿಚಾರ ಇತ್ತು. ಆದರೆ ಜಾರಿಗೆ ತರಲು ಅಡೆತಡೆಗಳಿತ್ತು ಈಗ ಅದನ್ನು ನಿವಾರಿಸಿ ಇನ್ನು ಮುಂದೆ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದಿದ್ದಾರೆ.
ನವೆಂಬರ್ 6ರಂದು ನಡೆದ ಗೃಹಲಕ್ಷ್ಮಿ ಯೋಜನೆ ಪ್ರಗತಿ ಪರಿಶೀಲರ ಸಭೆಯಲ್ಲಿ ಈ ರೀತಿಯ ಒಂದು ಚರ್ಚೆ ನಡೆದಿದ್ದು ಇಲಾಖೆಯು ಗೃಹಲಕ್ಷ್ಮಿ ಯೋಜನೆ ಕುರಿತು ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕ್ರಮ ಕೈಗೊಂಡಿದೆ ಎನ್ನುವುದು ತಿಳಿದು ಬಂದಿದೆ ಮತ್ತು ಇದುವರೆಗೂ ಕೂಡ ಅರ್ಹರಾಗಿದ್ದರು ಯೋಜನೆ ಹಣ ಪಡೆಯಲಾಗದೆ ವಂಚಿತರಾಗಿದ್ದರೆ ಅವರ ಮನೆ ಬಾಗಿಲೆಗಳಿಗೆ ಹೋಗಿ ಸರ್ವೆ ನಡೆಸಿ ಇಲಾಖೆಯ ಸಿಬ್ಬಂದಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಬಗ್ಗೆ ಹರಿಸಲಿದ್ದಾರೆ ಎನ್ನುವುದನ್ನು ಕೂಡ ತಿಳಿಸಿದ್ದಾರೆ.