Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಭೂಮಿ ಸಕ್ರಮ, ಬಗರ್ ಹುಕುಂ ಅರ್ಜಿದಾರರಿಗೆ ಷರತ್ತು, ಸರ್ಕಾರಿ ಭೂಮಿ ಕಾಯಲು ಬೀಟ್ ಆಪ್ ಬಗರ್ ಹುಕುಂ ಎನ್ನುವುದು ಸ್ವಂತ ಭೂಮಿ ಹೊಂದಿರುವ ಆದರೆ ಕೃಷಿ ಮೇಲೆ ಅವಲಂಬಿತವಾಗಿರುವ ರೈತನು ಸರ್ಕಾರಿ ಭೂಮಿಯನ್ನು ಕೃಷಿ ಚಟುವಟಿಕೆಗಾಗಿ ಹಲವು ವರ್ಷಗಳಿಂದ ಬಳಸುತ್ತಿದ್ದರೆ.
ಅದನ್ನು ಕಾನೂನು ಬದ್ಧವಾಗಿ ದಾಖಲೆಗಳೊಂದಿಗೆ ಸಕ್ರಮಗೊಳಿಸಲು ಇರುವ ಅವಕಾಶ ಆದರೆ ಇತ್ತೀಚಿನ ದಿನಗಳಲ್ಲಿ ಬಗರ್ ಹುಕುಂನಲ್ಲಿಯೂ ಅನೇಕರು ಬೋಗಸ್ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಕೆಲವರು ಒಂದೇ ಗ್ರಾಮದಲ್ಲಿ ಐದು, ಹತ್ತು ಕಡೆ ಭೂಮಿಯನ್ನು ಗುರುತಿಸಿಕೊಂಡು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದರೆ.
ಇನ್ನು ಕೆಲವರು ಬೇರೆ ಬೇರೆ ತಾಲೂಕುಗಳಲ್ಲಿಯೂ ಅರ್ಜಿಸಲ್ಲಿಸಿರುವುದು ಇನ್ನು ಮುಂತಾದ ಅಕ್ರಮಗಳು ಬೆಳಕಿಗೆ ಬಂದಿದೆ. ಈ ಕಾರಣದಿಂದ ಇನ್ನು ಮುಂದೆ ಬಗರ್ ಹುಕುಂ ಸಕ್ರಮಕ್ಕೆ ತಂತ್ರಾಂಶದ ಮೂಲಕ ನೈಜ ಉಳುಮೆದಾರರನ್ನು ಪತ್ತೆ ಹಚ್ಚಿ ಅರ್ಹ ರೈತರನಿಗೆ ಮಾತ್ರ ಇದರ ಪ್ರಯೋಜನ ಸಿಗುವಂತೆ ಮಾಡಲು ಕಂದಾಯ ಇಲಾಖೆ ನಿರ್ಧಾರ ಮಾಡಿದೆ.
ಹಲವು ವರ್ಷಗಳಿಂದ ಲಕ್ಷಾಂತರ ರೈತರು ಬಗರ್ಹುಕುಂನಲ್ಲಿ ಸಕ್ರಮಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರಿ ಭೂಮಿಯು ಈಗ ಸಾಕಷ್ಟು ಒತ್ತುವರಿಯಾಗುತ್ತಿರುವುದರಿಂದ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೆ ಸರ್ಕಾರದ ಸದುದ್ದೇಶಗಳಿಗೂ ಭೂಮಿ ಇಲ್ಲದಂತಹ ಪರಿಸ್ಥಿತಿ ಬರುತ್ತದೆ.
ಆದ್ದರಿಂದ ಇರುವ ಭೂಮಿಯನ್ನು ಉಳಿಸಿಕೊಂಡು ಅರ್ಹ ಬಡ ರೈತರಿಗೆ ಮಾತ್ರ ಭೂಮಿ ಸಿಗುವಂತೆ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಒಂದು ಗ್ರಾಮ ವ್ಯಾಪ್ತಿಯಲ್ಲಿ 100 ಜಾನುವಾರುಗಳಿದ್ದರೆ 30 ಎಕರೆ ಗೋಮಾಳ ಇರಬೇಕು ಎನ್ನುವುದು ಕಾನೂನಿನಲ್ಲಿರುವ ನಿಯಮ.
ಆದರೆ ವರ್ಷದಿಂದ ವರ್ಷಕ್ಕೆ ಅನೇಕ ಕಾರಣಗಳಿಂದ ಈ ರೀತಿ ಸರ್ಕಾರಿ ಭೂಮಿ ಕರಗುತ್ತಿದೆ. ಹಾಗಾಗಿ ಶೀಘ್ರವಾಗಿ ಬಗರ್ ಹುಕುಂನಲ್ಲಿ ಸಕ್ರಮಕ್ಕೂ ಕಠಿಣ ನಿಯಮಗಳನ್ನು ತರಲು ಚಿಂತಿಸಲಾಗಿದೆ. ಭೂ ಸುಧಾರಣಾ ಕಾಯ್ದೆಯ ನಿಯಮ 50, 53 ಹಾಗೂ 57ರಲ್ಲಿ ಬಗರ್ ಹುಕುಂನಲ್ಲಿ ಸಕ್ರಮಕ್ಕಾಗಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿತ್ತು.
ಆದರೆ ಈವರೆಗೂ ಭೌತಿಕವಾಗಿಯೇ ಈ ಅರ್ಜಿಗಳ ವಿಲೇವಾರಿಯಾಗುತ್ತಿದ್ದರಿಂದ ಅಕ್ರಮಗಳು ಜರುಗಲು ಹೆಚ್ಚಿನ ಅವಕಾಶ ಸಿಗುತ್ತಿತ್ತು. ಆದ್ದರಿಂದಲೇ ಇನ್ನು ಮುಂದೆ ಸಂಪೂರ್ಣ ತಂತ್ರಜ್ಞಾನ ಬಳಕೆಗೆ ಸರ್ಕಾರ ಮುಂದಾಗಿದೆ.
ಸರ್ಕಾರಿ ಭೂಮಿಯ ಅಕ್ರಮ ಪರಭಾರೆಗೆ ಬ್ರೇಕ್ ಹಾಕಲು ಮುಂದಾಗಿರುವ ಸರ್ಕಾರವು, ಬಗರ್ಹುಕುಂನಲ್ಲಿ ಅರ್ಜಿ ಹಾಕಿರುವವರು 15 ವರ್ಷಗಳಿಂದ ಆ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರೆ ಮಾತ್ರ ಸಕ್ರಮ ಮಾಡಬೇಕು ಅದಕ್ಕೆ ಬೇಕಾದ ದಾಖಲೆಗಳನ್ನು ತಂತ್ರಜ್ಞಾನದ ಮೂಲಕ ಪಡೆದುಕೊಂಡು ಪರಿಶೀಲನೆ ಮಾಡಲು ನಿರ್ಧಾರ ಮಾಡಿದೆ.
ಈ ಬಗ್ಗೆ ಕೈಗೊಂಡಿರುವ ಕೆಲವು ಪ್ರಮುಖ ಕ್ರಮಗಳ ಬಗ್ಗೆ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
* ಬಗರ್ಹುಕುಂ ಅರ್ಜಿಗಳ ವಿಲೇವಾರಿಗಾಗಿಯೇ ಬಗರ್ ಹುಕುಂ ಎನ್ನುವ ಪ್ರತ್ಯೇಕ ತಂತ್ರಾಂಶ ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಕಂದಾಯ ವಿಭಾಗಕ್ಕೂ ಒಂದು ತಾಲೂಕಿನಂತೆ 4ಕಡೆ ಮೊದಲಿಗೆ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ ವಿಲೇವಾರಿ ಮಾಡಲು ಪ್ರಯತ್ನ ಮಾಡಲಾಗುತ್ತದೆ ಇದರಲ್ಲಿ ಯಶಸ್ವಿ ಆದರೆ ನಂತರ ಇದನ್ನು ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲಾಗುತ್ತದೆ.
ಮತ್ತೊಂದು ಮಹತ್ವದ ವಿಚಾರವೇನೆಂದರೆ ಸ್ಯಾಟಲೈಟ್ ಚಿತ್ರಗಳನ್ನು ಈ ಆಪ್ಗೆ ಅಳವಡಿಸುವ ಮೂಲಕ ನಿಜವಾಗಿಯೂ ರೈತ ಆ ಭೂಮಿಯನ್ನು ಕೃಷಿ ಚಟುವಟಿಕೆಗಾಗಿ ಬಳಸಿದ್ದೇನೆ ಎನ್ನುವ ನೈಜತೆಯನ್ನು ಪತ್ತೆ ಹಚ್ಚಲಾಗುತ್ತದೆ. ತಂತ್ರಾಂಶದ ಮೂಲಕವೇ ಸಾಗುವಳಿ ಚೀಟಿಯನ್ನು ನೀಡವಂತೆ ತಂತ್ರಾಂಶವನ್ನು ತಯಾರಿಸಲಾಗಿದೆ.
* ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಭೂಮಿಯಲ್ಲಿ ರೈತನು ವರ್ಷಗಳಿಂದ ಉಳುಮೆ ಮಾಡಲಾಗುತ್ತಿದ್ದನೋ, ಇಲ್ಲವೋ ಎಂಬುದನ್ನು ESRO ಹಾಗೂ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಕ ಕೇಂದ್ರ (KRSAC) ಗಳಿಂದ 15 ವರ್ಷಗಳ ಉಪಗ್ರಹ ಆಧಾರಿತ ಚಿತ್ರಗಳನ್ನು ಪಡೆದು ಪತ್ತೆ ಹಚ್ಚಲಾಗುತ್ತದೆ.
ಅದರಲ್ಲಿ ಸರ್ವೆ ನಂಬರ್ ಮೂಲಕ ಎಷ್ಟು ವರ್ಷದಿಂದ ಉಳುಮೆ ಮಾಡಲಾಗುತ್ತಿದೆ ಎಂಬುದು ಪತ್ತೆಯಾಗುತ್ತದೆ. ಉಪಗ್ರಹದ ಚಿತ್ರಗಳಲ್ಲಿ ಉಳುಮೆಯ ಮಾಹಿತಿ ಲಭ್ಯವಾಗದಿದ್ದಲ್ಲಿ ಅಂತಹ ಅರ್ಜಿಗಳನ್ನು ಮುಲಾಜಿಲ್ಲದೇ ರದ್ದು ಮಾಡಲು ಕಂದಾಯ ಇಲಾಖೆ ನಿರ್ಧರಿಸಿದೆ.
* ಬಗರ್ ಹುಕುಂನಲ್ಲಿ ಸಕ್ರಮಕ್ಕೆ ಫಾರಂ 57ರಲ್ಲಿ ಸಲ್ಲಿಸಿರುವ ಅರ್ಜಿಗಳೇ ಹೆಚ್ಚು ದುರುಪಯೋಗವಾಗಿರುವ ಸಂಶಯ ಇದೆ. ಕೆಲವರು 5 ರಿಂದ 10 ಕಡೆ ಅರ್ಜಿ ಸಲ್ಲಿಸಿರುವುದರಿಂದ ನಿಜವಾದ ಸಾಗುವಳಿದಾರರಿಗೆ ಅನ್ಯಾಯವಾಗಬಾರದು ಎಂದು 15 ವರ್ಷದಿಂದ ಉಳುಮೆಯನ್ನು ಆಪ್ ಮೂಲಕ ಪತ್ತೆ ಮಾಡಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುತ್ತದೆ. ಆದಷ್ಟು ಬೇಗ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.
* ಸಮಿತಿ ಮುಂದೆ ಬಾಕಿ ಇರುವ ಅರ್ಜಿಗಳನ್ನು 6 ತಿಂಗಳ ಒಳಗೆ ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಆಪ್ ಆಧಾರಿತ ಸಮಿತಿಗಳನ್ನು ರಚನೆ ಮಾಡಲು ಪ್ರಕ್ರಿಯೆ ಆರಂಭಿಸಿದದ್ದು ಇಲ್ಲಿಯವರೆಗೆ ಯಶಸ್ವಿಯಾಗಿ 50 ತಾಲೂಕುಗಳಲ್ಲಿ ಸಮಿತಿ ರಚನೆ ಪ್ರಕ್ರಿಯೆ ಪೂರ್ತಿಯಾಗಿತ್ತು ಶೀಘ್ರದಲ್ಲಿ ಈ ಕುರಿತ ಆದೇಶ ಹೊರಬೀಳಲಿದೆ ಹಾಗೆಯೇ ಉಳಿದ ತಾಲೂಕುಗಳಲ್ಲಿಯೂ ಶೀಘ್ರದಲ್ಲೇ ಸಮಿತಿಗಳ ರಚನೆಯಾಗಲಿದೆ ಎನ್ನುವ ಮಾಹಿತಿಯು ತಿಳಿದು ಬಂದಿದೆ.