ನೋಡ ನೋಡುತ್ತಿದ್ದಂತೆ ನಮ್ಮ ಕಣ್ಣ ಮುಂದೆ ಹೊಸ ವರ್ಷದ ಎರಡು ತಿಂಗಳುಗಳು ಮುಗಿದು ಹೋದವು. ಪ್ರತಿ ಹೊಸ ವರ್ಷದ ಆರಂಭ ಅದು ಕ್ಯಾಲೆಂಡರ್ ಬದಲಾವಣೆ ಆಗಲಿ ಅಥವಾ ಬಜೆಟ್ ಮಂಡನೆ ಆಗಲಿ ಅಥವಾ ನೂತನ ಆರ್ಥಿಕ ವರ್ಷದ ಪ್ರಾರಂಭವೇ ಆಗಲಿ ಸಾಕಷ್ಟು ಬದಲಾವಣೆಯನ್ನು ತರುತ್ತದೆ. ನಮ್ಮ ಜೀವನದ ಮೇಲೆ ಮಾತ್ರವಲ್ಲದೆ ಕಾನೂನಿನ ಚೌಕಟ್ಟಿಗೆ ಸಂಬಂಧಪಟ್ಟ ಹಲವಾರು ಬದಲಾವಣೆಗಳು ನಡೆಯುತ್ತವೆ ಮತ್ತು ಕೆಲ ಬದಲಾವಣೆಗಳು ಪ್ರತಿ ತಿಂಗಳು ಕೂಡ ನಡೆಯುತ್ತಿರುತ್ತವೆ.
ಈ ಸುದ್ದಿ ಓದಿ:- ರೈತರ ಖಾತೆಗೆ ಇಂದು 2,000 ಜಮೆ ಆಗಿದೆ.! ನಿಮ್ಮ ಖಾತೆಗೂ ಹಣ ಬಂದಿದೆಯೇ ಎಂದು ಈ ರೀತಿ ಚೆಕ್ ಮಾಡಿ.!
ಉದಾಹರಣೆಗೆ ಗ್ಯಾಸ್ ಸಿಲಿಂಡರ್ ಬೆಲೆ, GST ಸಂಬಂಧಿಸಿದ ನಿಯಮಗಳು. ಹೊಸ ಸಂಚಾರಿ ನಿಯಮಗಳು ಅಥವಾ ಸರ್ಕಾರ ರೂಪಿಸಿದ ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅಥವಾ ಮುಕ್ತಾಯವಾಗಲು ಕೊನೆ ಇಂತಹ ನೂರಾರು ವಿಷಯಗಳಿಗೆ ತಿಂಗಳ ಆರಂಭ ಹಾಗೂ ಅಂತ್ಯ ಗಡುವಾಗಿರುತ್ತದೆ. ಅದೇ ರೀತಿ ಈಗ ಹೊಸ ವರ್ಷದ ಮೂರನೇ ತಿಂಗಳು ಮಾರ್ಚ್ ಆರಂಭಗೊಳ್ಳುತ್ತಿದೆ ಇದು ಏನೆಲ್ಲಾ ಬದಲಾವಣೆ ತರುತ್ತಿದೆ ಎನ್ನುವ ಕೆಲ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಪ್ರಸ್ತಾಪಿಸಲು ಹೆಚ್ಚಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಸಾರ್ವಜನಿಕರಿಗೆ ಸಿಹಿ ಸುದ್ದಿ, ವಿದ್ಯುತ್ ದರ ಮತ್ತಷ್ಟು ಇಳಿಕೆ ಎಷ್ಟು ಅಂತ ನೋಡಿ.!
* LPG ಗ್ಯಾಸ್ ಬೆಲೆ ಬದಲಾವಣೆ:-
ಪ್ರತಿ ತಿಂಗಳ 1ನೇ ತಾರಿಕು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price) ಪರಿಷ್ಕೃತಗೊಳಿಸುತ್ತವೆ. ಕೆಲವೊಂದು ಸಂದರ್ಭದಲ್ಲಿ ಮಾತ್ರ ತಿಂಗಳ ಮಧ್ಯದಲ್ಲಿ ಈ ಬದಲಾವಣೆಯಾಗುವುದು. ಫೆಬ್ರವರಿ ತಿಂಗಳ ಆರಂಭದಲ್ಲಿ ವಾಣಿಜ್ಯ ಸಿಲಿಂಡರ್ ಗಳ ಮೇಲಿನ ಬೆಲೆ ಏರಿಕೆಯಾಗಿತ್ತು ಗೃಹ ಉಪಯೋಗಿ ಗ್ಯಾಸ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ ಹಾಗಾಗಿ ಈ ತಿಂಗಳಿನಲ್ಲಿ ಡೊಮೆಸ್ಟಿಕ್ ಗ್ಯಾಸ್ ಬೆಲೆ (Domestic Gas Price hike) ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಊಹಿಸಿದ್ದಾರೆ.
* GST ಹೊಸ ನಿಯಮಗಳು:-
ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದ ಹೊಸ ನಿಯಮಗಳು ಮಾರ್ಚ್ 1ರಿಂದ ಜಾರಿಗೆ ಬರಲಿದೆ. ವ್ಯಾಪಾರಿಗಳು ಕಡ್ಡಾಯವಾಗಿ ಮಾರ್ಚ್ 1ನೇ ತಾರೀಖಿನಿಂದ ಈ ಇನ್ವಾಯ್ಸ್ ಗಳನ್ನು ನೀಡಲೇಬೇಕಾಗುತ್ತದೆ. 5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟು, ಒಂದು ರಾಜ್ಯದಿಂದ ಮತ್ತು ರಾಜ್ಯಕ್ಕೆ ರಫ್ತು ಮತ್ತು ಆಮದು ಮಾಡಿಕೊಳ್ಳುವ ವ್ಯಾಪಾರಿಗಳು ಇ-ಪೇ ಜೊತೆಗೆ ಇನ್ ಬಾಯ್ಸ್ ಗಳನ್ನು ಕೂಡ ನೀಡಲೇಬೇಕು ಎಂದು ಕೇಂದ್ರ ಸರ್ಕಾರವೇ ಆದೇಶಿಸಿದೆ. ಇನ್ ವಾಯ್ಸ್ ಗಳು ಇಲ್ಲದೆ ಇ-ಪೇ ಮಾಡುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರವು ಇನ್ವ್ಯ್ಸ್ ಮಾಡಿದರೆ ಮಾತ್ರ ಇ-ಬಿಲ್ ನೀಡುವುದು ಎಂಬಂತೆ ನಿಯಮ ತಂದಿದೆ.
* SBI ಕ್ರೆಡಿಟ್ ಕಾರ್ಡ್ ನಿಯಮಗಳು:-
SBI ನಲ್ಲಿ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿದ ಹಾಗೆ ಸಾಕಷ್ಟು ಬದಲಾವಣೆಗಳನ್ನು ಕೂಡ ಜಾರಿಗೆ ತರಲಾಗುತ್ತದೆ ಇದೆಲ್ಲವೂ ಮಾರ್ಚ್ 1ರಿಂದ ಅನ್ವಯವಾಗಲಿದೆ ಎಂದು SBI ತನ್ನ ಪ್ರಕಟಣೆಯಲ್ಲಿ ತಿಳಿಸಿದೆ
ಪೇಟಿಎಂ Pay TM
ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ RBI ನಿಬಂಧನೆ ಹೇಳಿರುವುದು ಗೊತ್ತೇ ಇದೆ. ಇದೇ ಮಾರ್ಚ್ 1ರಿಂದ ಇದು ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ ಬಗ್ಗೆ ಪೇಟಿಎಂ, ಬ್ಯಾಂಕಿಂಗ್ ಗಳು ಇನ್ನು ಮುಂದೆ ಕಾರ್ಯನಿರ್ವಹಿಸಲು ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಮಾರ್ಚ್ 15 ರವರೆಗೆ ಈ ರೀತಿಯ ನಿರ್ಬಂಧ ಹೇರಲಾಗುತ್ತದೆ ಆ ಸಂದರ್ಭದಲ್ಲಿ ಪೇಟಿಎಂ ಪೇಮೆಂಟ್ ಬ್ಯಾಂಕ್ ತನ್ನ ಗ್ರಾಹಕರು ಯಾವುದೇ ಸೇವೆ ನೀಡಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ, ನಂತರ ತೆರವುಗೊಳಿಸುವ ಸಾಧ್ಯತೆ ಇದೆ.