ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಆಡಳಿತಕ್ಕೆ ಬಂದ ಮೇಲೆ ತನ್ನ ಮಹತ್ವಕಾಂಕ್ಷೆಯ ಪಂಚಖಾತ್ರಿ ಯೋಜನೆಗಳನ್ನು (Guaranty Schemes) ಹಂತ ಹಂತವಾಗಿ ಜಾರಿಗೆ ತಂದಿದ್ದು ಆ ಪ್ರಕಾರವಾಗಿ ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ಕುಟುಂಬದ ಮುಖ್ಯಸ್ಥೆಯಾದ ಮಹಿಳೆಯರು.
ಸರ್ಕಾರದಿಂದ ಪ್ರತಿ ತಿಂಗಳು ರೂ.2000 ಸಹಾಯಧನ, ಅನ್ನ ಭಾಗ್ಯ ಯೋಜನೆ ಮೂಲಕ ಕುಟುಂಬದ ಇಲ್ಲ ಸದಸ್ಯರ 5Kg ಹೆಚ್ಚುವರಿ ಅಕ್ಕಿ ಹಣವನ್ನು ಕೂಡ ಕುಟುಂಬದ ಮುಖ್ಯಸ್ಥೆ DBT ಮೂಲಕ ತಮ್ಮ ಖಾತೆಗೆ ಪಡೆಯುತ್ತಿದ್ದಾರೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಮತ್ತು ಅನ್ನ ಭಾಗ್ಯ ಯೋಜನೆಯ 7ನೇ ಕಂತಿನ ಹಣವು ಅರ್ಹ ಪಲಾನುಭವಿಗಳ ಖಾತೆಗೆ ವರ್ಗಾವಣೆ ಆಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ಅಂಕಿ ಅಂಶಗಳ ಪ್ರಕಾರವಾಗಿ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದಾರೆ ಮತ್ತು ಆಹಾರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇದಕ್ಕಿಂತ ಹೆಚ್ಚು ಫಲಾನುಭವಿಗಳು ಅನ್ನಭಾಗ್ಯ ಯೋಜನೆಗೆ ಅರ್ಹರಾಗಿದ್ದಾರೆ.
ಈ ಸುದ್ದಿ ಓದಿ:- ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ – ಒಟ್ಟು 2049 ಹುದ್ದೆಗಳ ಭರ್ತಿ, 10ನೇ ತರಗತಿ ಆಗಿದ್ದರು ಸಾಕು ಅರ್ಜಿ ಸಲ್ಲಿಸಿ…
ಆದರೂ ಕೂಡ 90% ಫಲಾನುಭವಿಗಳಿಗೆ ಮಾತ್ರ ಪ್ರತಿ ತಿಂಗಳು ಸರಿಯಾಗಿ ಹಣ ತಲುಪುತ್ತಿದೆ ಉಳಿದ 10% ಮಹಿಳೆಯರಿಗೆ ಅವರ ದಾಖಲೆಗಳಲ್ಲಿ ಸಮಸ್ಯೆ ಆಗಿರುವುದು ಮತ್ತು ಕೆಲ ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ ಒಂದು ಕಂತಿನ ಹಣ ಕೂಡ ಬಂದಿಲ್ಲ ಇನ್ನೂ ಕೆಲವರಿಗೆ ಒಂದೆರಡು ಕಂತುಗಳ ಹಣ ಬಂದು ನಿಂತು ಹೋಗಿದೆ.
ಗೃಹಲಕ್ಷ್ಮಿ ಯೋಜನೆಗಳ ಕುಂದು ಕೊರತೆ ನಿವಾರಣೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ (Gruhalakshmi Camp) ಏರ್ಪಡಿಸಲಾಗಿತ್ತು ಮತ್ತು ಅನ್ನ ಭಾಗ್ಯ ಯೋಜನೆ ಹಣ ಪಡೆಯಲಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ನ್ಯಾಯ ಬೆಲೆ ಅಂಗಡಿಗಳಲ್ಲಿ ಕೂಡ ಶಿಬಿರಗಳನ್ನು ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯತಿ ಸದಸ್ಯರು, ಹತ್ತಿರದ ಬ್ಯಾಂಕ್ ಮತ್ತು ಅಂಚೆ ಕಚೇರಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಹಾರ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಈ ಕಾರ್ಯಕ್ರಮಗಳಲ್ಲಿ ಹಣ ಪಡೆಯಲು ಮಹಿಳೆಯರಿಗೆ ಆಗಿರುವ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿಕೊಡಲಾಗಿತ್ತು.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಕೇವಲ 25,000 ಹೂಡಿಕೆ ಮಾಡಿ 18 ಲಕ್ಷ ಪಡೆಯಿರಿ.!
ಇಷ್ಟೆಲ್ಲ ನಡೆದು ಕೂಡ ಇನ್ನು ಯಾರಾದರೂ ಇದೇ ರೀತಿ ಸಮಸ್ಯೆ ಪಡುತ್ತಿದ್ದಾರೆ ಎಂದರೆ ಸರ್ಕಾರ ಈಗ ಅವರಿಗೆ ಮತ್ತೊಂದು ಅವಕಾಶವನ್ನು ನೀಡುತ್ತಿದೆ. ಈ ರೀತಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲಾಗದ ಮಹಿಳೆಯರು ನಿಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಛೇರಿಗೆ ಹೋಗಿ CDPO ಅಧಿಕಾರಿಗಳನ್ನು ಭೇಟಿಯಾಗಿ.
ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ರೇಷನ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ಪೀಕೃತಿ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಸ್ಥಳದಲ್ಲಿಯೇ ಅವರು ನಿಮ್ಮ ದಾಖಲೆಗಳನ್ನು ನೋಡಿ ಏನು ಸಮಸ್ಯೆ ಆಗಿದೆ ಅದನ್ನು ಸರಿಪಡಿಸಿಕೊಳ್ಳಲು ಸಲಹೆ ಕೊಡುತ್ತಾರೆ.
ಮತ್ತು ಈ ರೀತಿ ಸಮಸ್ಯೆ ಸರಿಪಡಿಸಿಕೊಂಡ ನಂತರ ಒಟ್ಟಾರೆಯಾಗಿ ಎಲ್ಲಾ ಕಂತುಗಳ ಹಣ ಕೂಡ ತಲುಪಲಿದೆ. ಪ್ರತಿ ತಿಂಗಳು 20ನೇ ತಾರೀಖಿನಿಂದ ಮುಂದಿನ ತಿಂಗಳ 15ನೇ ತಾರೀಕಿನ ಒಳಗೆ ಈ ಎರಡು ಯೋಜನೆಯ ಹಣ ವರ್ಗಾವಣೆಯಾಗುತ್ತಿದೆ.
ಹಣ ಬರದೇ ಇರಲು ಕಾರಣಗಳು:-
* ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಇಲ್ಲದೆ ಇರುವುದು, ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗದೇ ಇರುವುದು
* ರೇಷನ್ ಕಾರ್ಡ್ ನಲ್ಲಿ ಇ-ಕೆವೈಸಿ ಅಪ್ಡೇಟ್ ಆಗದೆ ಇರುವುದು, ರೇಷನ್ ಕಾರ್ಡ್ ಆಕ್ಟಿವ್ ಇಲ್ಲದೆ ಇರುವುದು
* ನೀಡಿರುವ ದಾಖಲೆಗಳಲ್ಲಿ ಫಲಾನುಭವಿಯ ಹೆಸರಿನಲ್ಲಿ ವ್ಯತ್ಯಾಸ ಮತ್ತು ಗೊಂದಲಗಳಾಗಿರುವುದು.