ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿದ್ದು ಎಲ್ಲಾ ಜಿಲ್ಲೆಗಳ ಒಟ್ಟು 216 ತಾಲೂಕುಗಳ ಬರಪೀಡಿತ ತಾಲೂಕುಗಳು (drought declaired Thaluk) ಎಂದು ಘೋಷಣೆಯಾಗಿದೆ. NDRF ಸಮೀಕ್ಷೆ ಪ್ರಕಾರವಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು ಕೇಂದ್ರದಿಂದ ರೈತರಿಗೆ ಬರ ಪರಿಹಾರ ಹಾಗೂ ಬೆಳೆ ಹಾನಿ ಪರಿಹಾರ ಮೊತ್ತದ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಆರೋಪವಿದೆ.
ಇದರ ನಡುವೆ ರಾಜ್ಯ ಸರ್ಕಾರವು (Government) ಮೊದಲನೇ ಹಂತದ ಪರಿಹಾರ ಬಾಕಿ ರೂ.2,000 ಹಣವನ್ನು ಎಲ್ಲಾ ಅರ್ಹ ರೈತರ ಖಾತೆಗೆ ಬೆಳೆ ಹಾನಿ ಹಣವನ್ನಾಗಿ ನೀಡಲು ನಿರ್ಧಾರ ಮಾಡಿ ಬಿಡುಗಡೆಗೊಳಿಸಿದೆ. ಆದರೆ ಇದಕ್ಕೆ ಕೆಲವು ಕಂಡೀಷನ್ ಗಳನ್ನು ಹಾಕಲಾಗಿದೆ. ಅದರಂತೆಯೇ FRUITS ತಂತ್ರಾಂಶದಡಿ ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದ ರೈತನಿಗಷ್ಟೇ ಬೆಳೆ ಹಾನಿ ಪರಿಹಾರ ಹಣ ವರ್ಗಾವಣೆ ಆಗುವುದು.
ಇದರ ಜೊತೆಗೆ ಹಣ ವರ್ಗಾವಣೆಗೆ ಎದುರಾಗಿರುವ ಮತ್ತೊಂದು ಸಮಸ್ಯೆ ಏನೆಂದರೆ ರೈತರ ಖಾತೆಗಳಿಗೆ DBT ಮೂಲಕ ಹಣ ವರ್ಗಾವಣೆ ಮಾಡಲು ರೈತರ ಖಾತೆಗಳ ಮಾಹಿತಿ ಸರಿಯಾಗಿಲ್ಲದಿರುವುದೇ ಸಮಸ್ಯೆ ಆಗಿದೆ. ಇನ್ನು ಕೆಲವು ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ ಇಲ್ಲದೇ NPCI ಮ್ಯಾಪಿಂಗ್ ಆಗಿಲ್ಲ. ಇಂತಹ ಸಮಸ್ಯೆಗಳ ಪರಿಣಾಮವಾಗಿ ಪರಿಹಾರದ ಹಣ ಪಡೆಯಲಾಗದ ಅನರ್ಹ ರೈತರ ಪಟ್ಟಿ ಬಿಡುಗಡೆ ಆಗಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 2000 ಮತ್ತು ಅಕ್ಕಿ ಹಣ ಪಡೆಯಲಾಗದ ಮಹಿಳೆಯರು ಹೀಗೆ ಮಾಡಿ ಸಂಪೂರ್ಣ ಎಲ್ಲಾ ಕಂತಿನ ಹಣ ಬರುತ್ತೆ.!
ಎಲ್ಲಾ ಜಿಲ್ಲೆಗಳ ಕೃಷಿ ಇಲಾಖೆಯಲ್ಲೂ ಈ ರೀತಿ ಆಧಾರ್ ಲಿಂಕ್ ಆಗಿರದ ರೈತರ ಪಟ್ಟಿ ಇದೆ. ಆನ್ಲೈನ್ ನಲ್ಲಿ ಕೂಡ ಇದನ್ನ ನೀವು ಪರಿಶೀಲಿಸಬಹುದಾಗಿದ್ದು, ನಾವು ಹೇಳುವ ಈ ವಿಧಾನದಲ್ಲಿ ಅದನ್ನು ತಿಳಿದುಕೊಂಡು ತಕ್ಷಣವೇ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಸರಿಪಡಿಸಿಕೊಳ್ಳಿ ಆಗ ಮಾತ್ರ ನಿಮಗೆ ಮುಂದಿನ ಹಂತದಿಂದ ಬೆಳೆಹಾನಿ ಪರಿಹಾರ ಸಿಗಲು ಸಾಧ್ಯವಾಗುವುದು.
https://fruitspmk.karnataka.gov.in/MISReport/AadharNotSeededReport.aspx ಈ ಲಿಂಕ್ ಬಳಸಿ Farmer Registration and Unified beneficiary Information System PM-Kisan ಈ ವೆಬ್ ಸೈಟ್ ಗೆ ಭೇಟಿ ನೀಡಿ.
* ರಾಜ್ಯದ ಎಲ್ಲಾ ಜಿಲ್ಲೆಗಳ ಲಿಸ್ಟ್ ಬರುತ್ತದೆ, ಇದರಲ್ಲಿ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಜಿಲ್ಲೆಗೆ ವ್ಯಾಪ್ತಿಗೆ ಬರುವ ಎಲ್ಲಾ ತಾಲ್ಲೂಕುಗಳ ಲಿಸ್ಟ್ ಬರುತ್ತದೆ, ಅದರಲ್ಲಿ ನಿಮ್ಮ ತಾಲ್ಲೂಕಿನ ಹೆಸರನ್ನು ಸೆಲೆಕ್ಟ್ ಮಾಡಿ
* ನಿಮ್ಮ ತಾಲ್ಲೂಕನ್ನು ಸೆಲೆಕ್ಟ್ ಮಾಡಿದ ಮೇಲೆ ಆ ತಾಲೂಕಿನ ವ್ಯಾಪ್ತಿಗೆ ಬರುವ ಹೋಬಳಿಗಳ ಲಿಸ್ಟ್ ಬರುತ್ತದೆ ನಿಮ್ಮ ಹೋಬಳಿ ಹೆಸರನ್ನು ಸೆಲೆಕ್ಟ್ ಮಾಡಿ.
ಈ ಸುದ್ದಿ ಓದಿ:- ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ – ಒಟ್ಟು 2049 ಹುದ್ದೆಗಳ ಭರ್ತಿ, 10ನೇ ತರಗತಿ ಆಗಿದ್ದರು ಸಾಕು ಅರ್ಜಿ ಸಲ್ಲಿಸಿ…
* ನಂತರ ನಿಮ್ಮ ಹೋಬಳಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಲಿಸ್ಟ್ ಬರುತ್ತದೆ ನಿಮ್ಮ ಗ್ರಾಮವನ್ನು ಸೆಲೆಕ್ಟ್ ಮಾಡಿ. ನಿಮ್ಮ ಗ್ರಾಮದಲ್ಲಿ ಎಷ್ಟು ರೈತರ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಮತ್ತು NPCI ಮ್ಯಾಪಿಂಗ್ ಆಗಿಲ್ಲ ಎನ್ನುವ ಮಾಹಿತಿ ಸಿಗುತ್ತದೆ.
* https://fruits.karnataka.gov.in/OnlineUserLogin.aspx ಲಿಂಕ್ ಬಳಸಿ NPCI ಮ್ಯಾಪಿಂಗ್ ಆಗಿದೆಯೇ ಇಲ್ಲವೇ ಎನ್ನುವುದನ್ನು ನೇರವಾಗಿ ಚೆಕ್ ಮಾಡಬಹುದು.
* FID ಮಾಡಿಸಿರದ ರೈತರು ಕೂಡಲೇ ಹತ್ತಿರದ ಸೇವಾ ಸಿಂಧು ಕೇಂದ್ರ / ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಭೇಟಿ ಕೊಟ್ಟು ತಮ್ಮ ಆಧಾರ್ ಕಾರ್ಡ್, ಜಮೀನಿನ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ವಿವರ ಮತ್ತು ಮೊಬೈಲ್ ಸಂಖ್ಯೆ ಹಾಗೂಇತ್ತೀಚಿನ ಭಾವಚಿತ್ರಗಳನ್ನು ಕೊಟ್ಟು FID ಮಾಡಿಸಿಕೊಳ್ಳಬೇಕು.
ಈ ಸುದ್ದಿ ಓದಿ:- ನೀವು ಫೋನ್ ಪೇ, ಗೂಗಲ್ ಪೇ ಹೆಚ್ಚಾಗಿ ಯೂಸ್ ಮಾಡುತ್ತಿದ್ದೀರಾ.? ಹುಷಾರ್ ನಿಮಗೆ ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುತ್ತೆ.!