ಸರ್ಕಾರಿ ವಲಯದ ಉದ್ಯೋಗ ಬಯಸುತ್ತಿರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಕೇಂದ್ರ ಸರ್ಕಾರದ ವತಿಯಿಂದ ಮತ್ತೊಂದು ನೇಮಕಾತಿ ಸೂಚನೆ ಬಿಡುಗಡೆ ಆಗಿದ್ದು, ಈ ಕುರಿತಾದ ಮಾಹಿತಿಯನ್ನು ಇಂದು ನಾವು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಪ್ರತಿ ವರ್ಷವೂ ದೇಶದ ವಿವಿಧ ಇಲಾಖೆಯಲ್ಲಿ ತೆರವಾಗುವ ಸ್ಥಾನಗಳನ್ನು ಭರ್ತಿಗೊಳಿಸಲು ಅರ್ಜಿ ಆಹ್ವಾನ ಮಾಡಿ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಆಯ್ಕೆ ಮಾಡುತ್ತದೆ.
ಅಂತೆಯೇ ಮತ್ತೊಮ್ಮೆ SSC ನೇಮಕಾತಿ ನಡೆಯುತ್ತಿದ್ದು 10ನೇ ತರಗತಿ ಉತ್ತೀರ್ಣರಾದವರಿಂದ ಹಿಡಿದು ಸ್ನಾತಕೋತ್ತರ ಪದವಿ ವರೆಗೆ ವಿದ್ಯಾಭ್ಯಾಸ ಮಾಡಿದ ಪ್ರತಿಯೊಬ್ಬರು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಈ ನೋಟಿಫಿಕೇಶನ್ ಕುರಿತಾದ ಹೆಚ್ಚಿನ ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- ನೀವು ಫೋನ್ ಪೇ, ಗೂಗಲ್ ಪೇ ಹೆಚ್ಚಾಗಿ ಯೂಸ್ ಮಾಡುತ್ತಿದ್ದೀರಾ.? ಹುಷಾರ್ ನಿಮಗೆ ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುತ್ತೆ.!
ನೇಮಕಾತಿ ಸಂಸ್ಥೆ:- ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
ಹುದ್ದೆಗಳ ವಿವರ:-
* ಲೈಬ್ರರಿ ಅಟೆಂಡೆಂಟ್
* ಅಕೌಂಟೆಂಟ್
* ಲ್ಯಾಬೋರೇಟರಿ ಅಟೆಂಡೆಂಟ್
* ಜೂನಿಯರ್ ಇಂಜಿನಿಯರ್
* ಡಾಟಾ ಎಂಟ್ರಿ ಆಪರೇಟರ್
* ಟೆಕ್ನಿಕಲ್ ಅಸಿಸ್ಟಂಟ್
* ಸ್ಟಾಫ್ ಕಾರ್ ಡ್ರೈವರ್
* ಕೋರ್ಟ್ ಕ್ಲರ್ಕ್
* ಲೊವರ್ ಡಿವಿಷನ್ ಕ್ಲರ್ಕ್
* ಸ್ಟೋರ್ ಕೀಪರ್
* ಸೆಕ್ಯೂರಿಟಿ ಸೂಪರ್ವೈಸರ್
* ಕುಕ್
* ಫಾರ್ಮಾಸಿಸ್ಟ್
* ಯುಡಿಸಿ
* ನರ್ಸಿಂಗ್ ಆಫೀಸರ್
* ಇನ್ನಿತರೆ ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 2049 ಹುದ್ದೆಗಳು…
ಉದ್ಯೋಗ ಸ್ಥಳ:- ಭಾರತದಾದ್ಯಂತ…
ಶೈಕ್ಷಣಿಕ ವಿದ್ಯಾರ್ಹತೆ:-
ಆಯಾ ಹುದ್ದೆಗಳಿಗೆ ಅನುಸಾರವಾಗಿ 10ನೇ ತರಗತಿ, ದ್ವಿತೀಯ PUC, ITI, ಡಿಪ್ಲೋಮೋ ಪದವಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 32 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* PWD ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತರು SSC ಅಧಿಕೃತ ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* ಅರ್ಜಿ ಸಲ್ಲಿಸಲು ನೀಡಿರುವ ಫಾರ್ಮ್ ನಲ್ಲಿ ಸರಿಯಾದ ವಿವರಗಳನ್ನು ಭರ್ತಿ ಮಾಡಿ ಕೇಳಲಾದ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
* ಅರ್ಜಿ ಶುಲ್ಕ ಭರ್ತಿ ಮಾಡಿ ತಪ್ಪದೇ ಇ-ರಶೀದಿ ಪಡೆಯಿರಿ, ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ.
ಆಯ್ಕೆ ವಿಧಾನ:-
* ಕಂಪ್ಯೂಟರ್ ಬೇಸ್ಡ್ ಸ್ಪರ್ಧಾತ್ಮಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಅರ್ಜಿ ಶುಲ್ಕ:-
* ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.
* SC / ST ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
* ಉಳಿದ ಅಭ್ಯರ್ಥಿಗಳು ರೂ. 100 ಅರ್ಜಿ ಶುಲ್ಕ ಪಾವತಿಸಬೇಕು.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ – ಫೆಬ್ರುವರಿ 26, 2024
* ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – ಮಾರ್ಚ್ 18, 2024
* ಆನ್ಲೈನ್ನಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮಾರ್ಚ್ 19, 2024
* ಕಂಪ್ಯೂಟರ್ ಆಧಾರಿತ ಪರೀಕ್ಷೆ (ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ) – ಮೇ 6-8, 2024.