ಮಲೆನಾಡು, ಕರಾವಳಿ ಭಾಗ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಕೃಷಿ (agriculture purpose) ಉದ್ದೇಶಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ( forest land occupy ) ಕರ್ನಾಟಕ ಸರ್ಕಾರ ಅರಣ್ಯ ಇಲಾಖೆ (forest department) ವತಿಯಿಂದ ಸಿಹಿ ಸುದ್ದಿ ಸಿಕ್ಕಿದೆ.
ಇತ್ತೀಚಿಗೆ ಜನವರಿ 2ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾನ್ಯ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ (Minister Eshwar Khandre) ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಅದರಲ್ಲೂ ಜನವರಿ ಅಂತ್ಯದ ಒಳಗಡೆ ಅರಣ್ಯ ಭೂಮಿ ಹಕ್ಕು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಹಕ್ಕು ವರ್ಗಾವಣೆ ಪತ್ರ ವಿತರಿಸುವ ಬಗ್ಗೆಯೂ ಕೂಡ ಭರವಸೆ ನೀಡಿದ್ದಾರೆ.
ಸರ್ಕಾರದಿಂದ 4000 ಉಚಿತ ಬೈಕ್ ವಿತರಣೆ, ಆಸಕ್ತರು ಅರ್ಜಿ ಸಲ್ಲಿಸಿ.!
ಈಗಾಗಲೇ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ತಿಳಿದು ಬಂದಿದೆ ಹಾಗಾದರೆ ಎಲ್ಲರಿಗೂ ಅಕ್ರಮ ಸಕ್ರಮಕ್ಕೆ ಅವಕಾಶ ಸಿಗಲಿದೆಯ ಅಥವಾ ಇದಕ್ಕಿರುವ ನಿಯಮಗಳೇನು ಎನ್ನುವ ಮಾಹಿತಿ ಹೀಗಿದೆ ನೋಡಿ.
ಈ ಮೇಲೆ ತಿಳಿಸಿದಂತೆ ರಾಜ್ಯ ಅರಣ್ಯ ಸಂಪತ್ತು ಒತ್ತುವರಿ ಆಗಿರುವುದನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೂಡ ಸಿಕ್ಕಿದ್ದು ಆ ಕಾರ್ಯ ಭರದಲ್ಲಿ ಸಾಗುತ್ತಿದೆ. ಅದರಲ್ಲಿ 2000 ಎಕರೆ ಒತ್ತುವರಿ ತೆರವು ಕಾರ್ಯ ಯಶಸ್ವಿಯಾಗಿದ್ದು ಕಾರ್ಯಚರಣೆ ಮುಂದುವರಿದಿದೆ.
ಆಸ್ತಿ ಮತ್ತು ಜಮೀನು ರಿಜಿಸ್ಟರ್ ಆಗಿದ್ರೆ ಸಾಲದು, J Form ಕಂಪ್ಲೀಟ್ ಮಾಡಬೇಕು, ಈ ಪ್ರಕ್ರಿಯೆ ಹೇಗಿರುತ್ತದೆ ನೋಡಿ.! ಮನೆ, ಜಮೀನು, ಸೈಟ್ ಇದ್ದವರು ನೋಡಿ
ಬೆಂಗಳೂರು ಸಮೀಪದ ಕೊತ್ತೂರಿನಲ್ಲಿಯೇ 400 ಎಕರೆ ಅರಣ್ಯ ಭೂಮಿಯನ್ನು ಸಂರಕ್ಷಿಸಲಾಗಿದೆ ಎನ್ನುವ ವಿಚಾರವನ್ನು ಸಚಿವರು ಹಂಚಿಕೊಂಡಿದ್ದಾರೆ. ಪ್ರಭಾವಿಗಳು ಈ ಅರಣ್ಯ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿದ್ದರು.
ಈಗ ಈ ರೀತಿ ಮಾಡಿದ ಉಪತಹಶೀಲ್ದಾರ್ ಹಾಗೂ ತಹಶೀಲ್ದಾರ್ ಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎನ್ನುವ ವಿಚಾರವನ್ನು ಕೂಡ ಸಚಿವರು ಹಂಚಿಕೊಂಡಿದ್ದಾರೆ. ಆದರೆ ಕೃಷಿ ಉದ್ದೇಶಕ್ಕಾಗಿ ಅನೇಕ ಕೃಷಿರಹಿತ ರೈತರು ಕೂಡ ಅರಣ್ಯ ಭೂಮಿಯನ್ನು ಅವಲಂಬಿಸಿದ್ದಾರೆ. ಅಂತಹ 7000 ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಹಕ್ಕುಪತ್ರ ವಿತರಣೆ ಮಾಡುವ ಬಗ್ಗೆ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಇನ್ಮುಂದೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಪಡೆಯಲು e-KYC ಕಡ್ಡಾಯ.! ನಿಮ್ಮ ಖಾತೆಗೆ e-KYC ಆಗಿದಿಯೋ ಇಲ್ಲವೋ ಎನ್ನುವುದನ್ನು ಈ ರೀತಿ ಚೆಕ್ ಮಾಡಿ.!
ಈ ಅರಣ್ಯ ಭೂಮಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸುವವರ ಪೈಕಿ ಕೃಷಿಯೇತರ ಚಟುವಟಿಕೆ ಬಳಸುವವರು ಈಗಾಗಲೇ ತಮ್ಮ ಹೆಸರಿನಲ್ಲಿ ಸ್ವಂತ ಜಮೀನು ಹೊಂದಿರುವವರು, ಕಳೆದ ಎರಡು ಮೂರು ವರ್ಷಗಳಿಂದ ಅರಣ್ಯ ಭೂಮಿ ಆಕ್ರಮಿಸಿ ಅವಲಂಬಿಸಿರುವವರು ಮುಂತಾದವರು ಸೇರಿದ್ದಾರೆ.
ಆದರೆ ಸಚಿವರು ಅಧಿಕಾರಿಗಳಿಗೆ ಕುಲಂಕುಶವಾಗಿ ಅರ್ಜಿಗಳ ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರಂತೆ ಮತ್ತು ಯಾರು ಮೂರು ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಗೆ ಮಾತ್ರ ಬಳಕೆ ಮಾಡುತ್ತಿದ್ದಾರೆ ಅದರಲ್ಲೂ 1980ರ ಹಿಂದಿನಿಂದ ಅಂದರೆ ಮೂರು ತಲೆಮಾರಿನಿಂದ ಈ ರೀತಿ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಮತ್ತು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.
ಹೊಸ ಲೇಬರ್ ಕಾರ್ಡ್ ಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ ಸರ್ಕಾರದ ಈ ಸವಲತ್ತು ಉಚಿತವಾಗಿ ಪಡೆಯಿರಿ.!
ಅಂತಹ ಕುಟುಂಬಗಳಿಗೆ ಮಾತ್ರ ಈ ಹಕ್ಕು ವರ್ಗಾವಣೆ ಭಾಗ್ಯ ಸಿಗಲಿದೆ ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ. ಅರಣ್ಯ ಸಂಪತ್ತಿನ ನಾಶವನ್ನು ನಿಯಂತ್ರಿಸುವ ಸಲುವಾಗಿ ಜಾರಿಗೆ ತಂದಿರುವ 1980ರ ಅರಣ್ಯ ರಕ್ಷಣೆ ಕಾಯ್ದೆಯು (Forest Conservation Act- 1980 – FCA) ಐದು ವಿಭಾಗಗಳಲ್ಲಿ ಕಠಿಣ ನಿಯಮಗಳನ್ನು ಹೊಂದಿದೆ.
ಈ ಕಾಯ್ದೆ ಅನ್ವಯ ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಮತ್ತು ಅದರಲ್ಲಿ ವಿನಾಯಿತಿ ನೀಡಿರುವ ರೀತಿ ಈ ಮೇಲೆ ತಿಳಿಸಿದಂತೆ ಕೃಷಿ ಚಟುವಟಿಕೆಗಾಗಿ 1980 ಅಂದರೆ ಕಾಯ್ದೆ ಅಂಗೀಕಾರಕ್ಕೆ ಬರುವ ಮುನ್ನವೇ ಈ ಭೂಮಿಯನ್ನು ಅವಲಂಬಿಸಿದವರಿಗೆ ಈಗ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆರವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ 5 ಹೊಸ ರೂಲ್ಸ್ ಜಾರಿ.!