ಕಾಂಗ್ರೆಸ್ ಪಕ್ಷವು ಚುನಾವಣೋತ್ತರವಾಗಿ ನೀಡಿದ್ದ ಭರವಸೆಯಂತೆ ತನ್ನ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಕರ್ನಾಟಕದ ಎಲ್ಲಾ ಕುಟುಂಬಗಳಿಗೂ ಉಚಿತ ವಿದ್ಯುತ್ ನೀಡಿ ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುತ್ತೇವೆಂದು ಭರವಸೆ ಕೊಟ್ಟಿದ್ದ ರೀತಿಯಲ್ಲಿಯೇ ಈಗ ಜೂನ್ 18ರಿಂದ ಗೃಹಜೋತಿ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ.
ಆನ್ಲೈನ್ ನಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಮತ್ತು ಆಫ್ಲೈನ್ ನಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಹೋಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ನೂತನ ಸರ್ಕಾರದ ಈ ಗೃಹಜ್ಯೋತಿ ಯೋಜನೆಗೆ ಯಾರೆಲ್ಲಾ ಅರ್ಹರು ಎನ್ನುವ ಬಗ್ಗೆ ಸಂಪೂರ್ಣ ವಿವರಗಳನ್ನು ಒಳಗೊಂಡ ಆದೇಶ ಪತ್ರವೂ ಕೂಡ ಹೊರ ಬಿದ್ದಿದೆ.
ಅರ್ಜಿ ಆಹ್ವಾನ ಮಾಡುವುದಕ್ಕೆ ಕೊನೆ ದಿನಾಂಕವನ್ನು ನಿರ್ಧರಿಸದೆ ಇದ್ದರೂ ಕೂಡ ಸರ್ಕಾರ ಹೇಳಿರೋ ಪ್ರಕಾರ ಗೃಹಜ್ಯೋತಿ ಯೋಜನೆಗೆ ಅರ್ಹರಾಗುವವರಿಗೆ ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್ ಬಳಕೆಗೆ ಮಾರ್ಚ್ ತಿಂಗಳಲ್ಲಿ ಬರುವ ಬಿಲ್ ಅನ್ನು ಸರ್ಕಾರ ನೀಡಿರುವ ನಿಬಂಧನೆಗಳ ಅನುಸಾರ ಬಳಸಿದವರಿಗೆ ಸರ್ಕಾರವೇ ಪಾವತಿ ಮಾಡಲಿದೆ.
ಹಾಗಾಗಿ ಎಲ್ಲೆಡೆ ಅರ್ಜಿ ಸಲ್ಲಿಕೆಗೆ ಜನಸಂದಣಿ ಶುರು ಆಗಿದೆ, ಆದೇಶ ಪತ್ರದಲ್ಲಿ ಅರ್ಜಿ ಸಲ್ಲಿಕೆ ಕುರಿತು ಹಾಗೂ ಫಲಾನುಭವಿಗಳ ಆಗುವವರಿಗೆ ಇರುವ ಕಂಡೀಶನ್ಗಳ ಕುರಿತು ವಿವರವಾಗಿ ತಿಳಿಸಿದ್ದರೂ ಕೂಡ ಮತ್ತೊಂದು ಗೊಂದಲ ಈಗ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ತಲೆದೋರಿದೆ. ಯಾಕೆಂದರೆ ಸರ್ಕಾರದ ನಿಯಮದ ಅನುಸಾರ ಗೃಹಜ್ಯೋತಿ ಯೋಜನೆಗೆ ಫಲಾನುಭವಿಗಳಾಗಲು ಇಚ್ಚಿಸುವವರು ಜೂನ್ ತಿಂಗಳಿನವರೆಗೆ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಳ್ಳದೆ ಪಾರ್ವತಿಸಿರಬೇಕು.
ಆದರೆ ಮೇ ತಿಂಗಳಿನಲ್ಲಿ ಬಳಸಿದ ವಿದ್ಯುತ್ ಗೆ ಜ್ಯೂನ್ ತಿಂಗಳಿನಲ್ಲಿ ಕೊಟ್ಟಿರುವ ವಿದ್ಯುತ್ ಬಿಲ್ ಅಲ್ಲಿ ಭಾರಿ ವ್ಯತ್ಯಾಸವಾಗಿದೆ. ಇದಕ್ಕೆ ಇಂಧನ ಇಲಾಖೆ ಕೂಡ ಪ್ರತಿಕ್ರಿಯೆ ನೀಡಿದ್ದು ತಾಂತ್ರಿಕ ದೋಷದಿಂದಾಗಿ ಈ ರೀತಿ ವ್ಯತ್ಯಾಸವಾಗಿದೆ ಎನ್ನುವ ಸ್ಪಷ್ಟನೆ ಕೊಟ್ಟಿದೆ. ಆದರೆ ಅನೇಕರಿಗೆ ಬಂದಿರುವ ವಿದ್ಯುತ್ ಬಿಲ್ ಅಲ್ಲಿ ಇರುವ ದರಕ್ಕೂ ಹಾಗೂ ಆಪ್ ಗಳಲ್ಲಿ ತೋರುತ್ತಿರುವ ವಿದ್ಯುತ್ ಬಿಲ್ಗು ಭಾರಿ ವ್ಯತ್ಯಾಸ ಕಂಡುಬರುತ್ತಿದೆ.
ಹೀಗಾಗಿ ಕಡಿಮೆ ವಿದ್ಯುತ್ ಬಿಲ್ ತೋರಿಸುತ್ತಿರುವುದಿಂದ ಅಷ್ಟೇ ಪಾವತಿ ಮಾಡಬೇಕಾ ಅಥವಾ ಹೆಚ್ಚು ಹಣ ಪಾವತಿ ಮಾಡಿ ಮುಂದಿನ ತಿಂಗಳಿಗೂ ಆಗುತ್ತದೆ ಎಂದು ಸುಮ್ಮನಿರಬೇಕಾ ಎನ್ನುವ ಗೊಂದಲ ಶುರು ಆಗಿದೆ. ಜೊತೆಗೆ ಈ ವಿದ್ಯುತ್ ಬಿಲ್ ಅನ್ನು ಪಾವತಿಸದೆ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ.
ಹಾಗಾಗಿ ವಿದ್ಯುತ್ ಬಿಲ್ ಪಾವತಿ ಮಾಡುವುದು ಹೇಗೆ ಯಾವುದು ಸರಿಯಾದ ಮಾಹಿತಿ ಎಂದು ತಿಳಿಯದೆ ಕರ್ನಾಟಕದ ನಿವಾಸಿಗಳು ಗೊಂದಲಕ್ಕೀಡಾಗಿದ್ದಾರೆ. ಒಂದು ವೇಳೆ ಈ ರೀತಿ ಸಮಸ್ಯೆ ನಿಮಗೂ ಆಗಿದ್ದರೆ ನಿಮ್ಮ ಮೇ ತಿಂಗಳ ವಿದ್ಯುತ್ ಬಿಲ್ ಅಲ್ಲಿ ಈ ರೀತಿ ವ್ಯತ್ಯಾಸ ಕಂಡು ಬಂದಿದ್ದರೆ ನೀವು ಸರಿಯಾದ ರೀತಿಯಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದಿದ್ದರೆ ಹತ್ತಿರದಲ್ಲಿರುವ ವಿದ್ಯುತ್ ಕಛೇರಿಗೆ ಹೋಗಿ ಬಿಲ್ ಪಾವತಿ ಮಾಡುವುದು ಉತ್ತಮ.
ಯಾಕೆಂದರೆ ವಿದ್ಯುತ್ ಕಚೇರಿಯಲ್ಲಿ ನಿಮ್ಮ ವಿದ್ಯುತ್ ಬಿಲ್ ಎಷ್ಟು ಬಂದಿದೆ ಎನ್ನುವುದರ ನಿಖರ ಮಾಹಿತಿ ಇರುತ್ತದೆ. ಅದನ್ನು ಒಮ್ಮೆ ಪರಿಶೀಲಿಸಿ ನಂತರ ವಿದ್ಯುತ್ ಬಿಲ್ ಪಾವತಿ ಮಾಡಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ, 200 ಯೂನಿಟ್ ವಿದ್ಯುತ್ ಒಳಗೆ ನೀವು ಬಳಕೆ ಮಾಡಿದರೆ ಯಾವುದೇ ರೀತಿಯಾದಂತಹ ಹಣವನ್ನು ಪಾವತಿಸಬೇಕಿಲ್ಲ ಆದರೆ 200 ಯೂನಿಟ್ ಕಿಂತ ಒಂದು ಯೂನಿಟ್ ಹೆಚ್ಚಾದರೂ ಕೂಡ ನೀವು 201 ಯೂನಿಟ್ ಗೆ ತಗಲುವಂತಹ ಮೊತ್ತವನ್ನು ಪಾವತಿಸಲೇ ಬೇಕಾಗುತ್ತದೆ.
ಹಾಗಾಗಿ ನಿಮ್ಮ ಮನೆಯ ಕರೆಂಟ್ ಬಿಲ್ ಇನ್ನೂರು ಯೂನಿಟ್ ನ ಒಳಗೆ ಬರುವಂತೆ ನೋಡಿಕೊಳ್ಳಿ ಈ ಉಚಿತ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಫಲಾನುಭವಿಗಳಾಗಿ ಮತ್ತು ಈ ಉಪಯುಕ್ತ ಮಾಹಿತಿಯ ಬಗ್ಗೆ ನಿಮ್ಮ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೂ ತಿಳಿಸಿ.