ಗೃಹಜ್ಯೋತಿ ಯೋಜನೆಯಡಿ ನಿಮ್ಮ ಮನೆಯ ವಿದ್ಯುತ್ ಬಿಲ್ ಹೇಗೆ ಲೆಕ್ಕಾಚಾರ ಮಾಡ್ತಾರೆ ಗೊತ್ತಾ.?

ಸದ್ಯಕ್ಕೀಗ ಕರ್ನಾಟಕ ರಾಜ್ಯದಾದ್ಯಂತ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿದೆ. ಐದಕ್ಕೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಪಕ್ಕ ಆಗಿದ್ದು ಅವುಗಳ ಆದೇಶ ಪತ್ರವೂ ಕೂಡ ಹೊರಬಿದ್ದಿದೆ. ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿದ್ದ ಗೃಹ ಜ್ಯೋತಿ ಯೋಜನೆಯಡಿ ಕರ್ನಾಟಕದ ಎಲ್ಲಾ ಕುಟುಂಬಗಳವರೆಗೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿದೆ.

WhatsApp Group Join Now
Telegram Group Join Now

ಜೂನ್ 18 ರಿಂದ ಗ್ರಾಹಕರು ಅವರ ಕಸ್ಟಮರ್ ಐಡಿ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಗೃಹಜ್ಯೋತಿ ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಲು ಚಾಲನೆ ದೊರೆತಿದೆ. ಜುಲೈ ತಿಂಗಳಲ್ಲಿ ಕರ್ನಾಟಕದ ಕುಟುಂಬಗಳು ಬಳಸುವ ವಿದ್ಯುತ್ ಗೆ ಆಗಸ್ಟ್ ತಿಂಗಳಲ್ಲಿ ಬರುತ್ತಿದ್ದ ಬಿಲ್ ಅನ್ನು ಸರ್ಕಾರವೇ ಭರಿಸುವುದಾಗಿ ಒಪ್ಪಿಕೊಂಡಿದ್ದು ಯಾರಿಗೆ ಈ ಯೋಜನೆಯ ಫಲಾನುಭವಿಗಳಾಗುವ ಅರ್ಹತೆ ಇದೆ ಮತ್ತು ಅವರಿಗೆ ಇರುವ ನಿಬಂಧನೆಗಳು ಏನು ಎನ್ನುವುದನ್ನು ವಿವರವಾಗಿ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಅದರಲ್ಲಿ ಅನೇಕರಿಗೆ ಗೊಂದಲ ಇರುವುದು ಸರ್ಕಾರವು ಕಳೆದ ಆರ್ಥಿಕ ವರ್ಷದ ಸರಾಸರಿಯ ಬಳಕೆ ಮೇಲೆ 10% ಉಚಿತ ಕೊಟ್ಟು ಅದಕ್ಕಿಂತ ಹೆಚ್ಚು ಬಳಕೆಗೆ ವಿದ್ಯುತ್ ಬಳಕೆಗೆ ಬಳಕೆದಾರರು ಬಿಲ್ ಪಾವತಿ ಮಾಡಬೇಕು ಎನ್ನುವ ಕಠಿಣವಾದ ಷರತ್ತನ್ನು ವಿಧಿಸಿರುವ ಬಗ್ಗೆ. ಹಾಗಾಗಿ ಎಲ್ಲರೂ ಕೂಡ ಈಗ ನಮ್ಮ ಮನೆಗೆ ಎಷ್ಟು ವಿದ್ಯುತ್ ಉಚಿತ ಎಂದು ಬಹಳ ಗೊಂದಲಕ್ಕೆ ಒಳಗಾಗಿದ್ದಾರೆ ಹಾಗೂ ಇದನ್ನು ಹೇಗೆ ಲೆಕ್ಕಾಚಾರ ಹಾಕಿ ತಿಳಿದುಕೊಳ್ಳುವುದು ಎನ್ನುವ ವಿಷಯದ ಬಗ್ಗೆ ಯೋಚಿಸುತ್ತಿದ್ದಾರೆ ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

2022-23ನೇ ಆರ್ಥಿಕ ವರ್ಷದಲ್ಲಿ ನೀವು ನಿಮ್ಮ ಮನೆಗೆ ಬಳಕೆ ಮಾಡಿರುವ ವಿದ್ಯುತ್ ಅನ್ವಯ ನಿಮಗೆ ಉಚಿತವಾಗಿ ಎಷ್ಟು ಯೂನಿಟ್ ಸಿಗುತ್ತದೆ ಎನ್ನುವುದನ್ನು ಈ ರೀತಿ ಲೆಕ್ಕ ಹಾಕಬಹುದು. ಉದಾಹರಣೆ ನೀವು ಒಂದು ತಿಂಗಳು 48 ಮತ್ತೊಂದು ತಿಂಗಳು 52 ಯೂನಿಟ್ ಈ ರೀತಿ 12 ತಿಂಗಳುಗಳು ವಿದ್ಯುತ್ ಖರ್ಚು ಮಾಡಿದ್ದರೆ ಆ ಒಟ್ಟು ಮೊತ್ತವನ್ನು 12 ರಿಂದ ಭಾಗಿಸಿದರೆ ನಿಮಗೆ ಎಷ್ಟು ಸರಾಸರಿ ವಿದ್ಯುತ್ ಎನ್ನುವ ಸಿಗುತ್ತದೆ ಎನ್ನುವುದನ್ನು ನೋಡಿ.

48+52+48+52+48+52+48+52+48+52+48+52 = 600÷12= 50 ಎಂದು ಬರುತ್ತದೆ. ಈಗ ಹೆಚ್ಚುವರಿ 10% ನೀಡುವುದಾಗಿ ಸರ್ಕಾರ ಹೇಳಿರುವುದರಿಂದ ನಿಮಗೆ 100 ಯೂನಿಟ್ ಗೆ 10% ಆದರೆ ನಿಮ್ಮ 50 ಯೂನಿಟ್ ಬಳಕೆಗೆ 5% ಅಂದರೆ ಒಟ್ಟು 55 ಯೂನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ಸಿಗುತ್ತದೆ. ಇದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಈ ಮೊತ್ತವನ್ನು ಮೈನಸ್ ಮಾಡಿ ಹೆಚ್ಚುವರಿ ಬಿಲ್ಲನ್ನು ನೀಡಲಾಗುತ್ತದೆ. ಅದನ್ನು ಮಾಲೀಕರು ತಪ್ಪದೆ ಪಾವತಿ ಮಾಡಲೇಬೇಕು.

ಒಂದು ಮಧ್ಯಮ ವರ್ಗದ ಕುಟುಂಬ 70-80 ಯೂನಿಟ್ ವಿದ್ಯುತ್ ಖರ್ಚು ಮಾಡುತ್ತದೆ ಹಾಗಾಗಿ ಅವರಿಗೆ ಈ ಸರಾಸರಿ ಲೆಕ್ಕದಲ್ಲಿ 77% ಯೂನಿಟ್ ವರೆಗೆ ಉಚಿತ ವಿದ್ಯುತ್ ಸಿಗುತ್ತದೆ ಎಂದು ಲೆಕ್ಕ ಹಾಕಬಹುದು. ಒಂದು ವೇಳೆ ಭವಿಷ್ಯದಲ್ಲಿ ನೀವು ವಿದ್ಯುತ್ ಉಪಕರಣಗಳನ್ನು, ಎಲೆಕ್ಟ್ರಿಕಲ್ ಕಾರು ಬೈಕ್ ಗಳನ್ನು ಖರೀದಿಸಿ ಅದನ್ನು ಚಾರ್ಜ್ ಮಾಡಿದರೆ ಆಗ ನಿಮ್ಮ ಮನೆಯ ವಿದ್ಯುತ್ ಬಳಕೆ 200 ಯೂನಿಟ್ ದಾಟುತ್ತದೆ. 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವವರಿಗೆ ಮಾತ್ರ ಉಚಿತ ಇರುವುದರಿಂದ ಆಗ ಸಂಪೂರ್ಣವಾದ ಬಿಲ್ ಅನ್ನು ನೀವು ಪಾವತಿ ಮಾಡಲೇಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now