Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಮನೆ ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ. ಆದರೆ ಎಲ್ಲರಿಗೂ ಕೂಡ ಸ್ವಂತ ಮನೆ ಖರೀದಿಸುವ ಅಥವಾ ನಿರ್ಮಾಣ ಮಾಡಿಕೊಳ್ಳುವ ಶಕ್ತಿ ಇರುವುದಿಲ್ಲ. ಈ ರೀತಿ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರವು ಸಹಾಯ ಹಸ್ತ ಚಾಚುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಅನೇಕ ಯೋಜನೆಗಳನ್ನು ರೂಪಿಸಿ, ಎಲ್ಲರಿಗೂ ಸ್ವಂತ ಸೂರಿನಡಿ ಜೀವಿಸುವ ಅವಕಾಶ ಸಿಗಲಿ ಎಂದು ಬಯಸುತ್ತದೆ.
ಈಗಾಗಲೇ ದೇಶದಾದ್ಯಂತ ವಸತಿ ಯೋಜನೆ ಹೆಸರಿನಲ್ಲಿ ಅನೇಕ ಯೋಜನೆಗಳು ಜಾರಿ ಬಂದಿರುವುದನ್ನು ನಾವು ಇದಕ್ಕೆ ಉದಾಹರಿಸಬಹುದು. ಈಗ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರವು ಬೀದಿ ಬಳಿ ವ್ಯಾಪಾರಿಗಳಿಗೆ ಸ್ವಂತ ಮನೆ ಕಲ್ಪಿಸುವ ನಿಟ್ಟಿನಲ್ಲಿ ಹೊಸದೊಂದು ನಿರ್ಧಾರಕ್ಕೆ ಕೈ ಹಾಕಿದೆ. ಇತರ ಕುರಿತ ವಿವರಗಳು ಈ ಅಂಕಣದಲ್ಲಿ ಇದೆ ನೋಡಿ.
ಕೇಂದ್ರ ಸರ್ಕಾರದಿಂದ ಗೃಹ ನಿರ್ಮಾಣ ಮಾಡಿಕೊಳ್ಳುವವರಿಗೆ ಸಿಗುತ್ತಿರುವ ಅನುದಾನದ ಯೋಜನೆಗಳಾದ NMDC ಹಾಗೂ CSR ಅನುದಾನದ ಅಡಿಯಲ್ಲಿ ಬೀದಿ ಬಳಿ ವ್ಯಾಪಾರಿಗಳು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಅಗತ್ಯವಾದ ಪ್ರೋತ್ಸಾಹ ಧನವನ್ನು ನೀಡಲು ನಿರ್ಧರಿಸಿದೆ. ಇದರೊಂದಿಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯವನ್ನು ಕೂಡ ಒದಗಿಸಿಕೊಡುತ್ತಿದೆ.
ಈ ಸದಾವಕಾಶವನ್ನು ವಸತಿರಹಿತ ಬೀದಿ ಬಳಿ ವ್ಯಾಪಾರಿಗಳು ಸದುಪಯೋಗಪಡಿಸಿಕೊಂಡು ಕೇಂದ್ರ ಸರ್ಕಾರವು ಸೂಚಿಸುವ ಮಾರ್ಗದರ್ಶಿ ಪ್ರಕಾರ ಅರ್ಜಿ ಸಲ್ಲಿಸಿ ತಮ್ಮ ಸ್ವಂತ ಮನೆಯ ಕನಸನ್ನು ಮನಸು ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರದ PMAY ಮತ್ತು HFA ಪಾಲದಾರಿಕೆಯಲ್ಲಿ ಕೈ ಗೆಟಕುವ ವಸತಿ ಯೋಜನೆಯಡಿ ಜಿ+2 ಮಾದರಿಯ 5616 ಮನೆಗಳ ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈಗಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡವರು ಈ ಯೋಜನೆಯಲ್ಲಿ ಸ್ವಂತ ಮನೆ ಹೊಂದಬಹುದು.
ಷರತ್ತುಗಳು:-
● ನಗರ ಪ್ರದೇಶದಲ್ಲಿರುವ ಇದುವರೆಗೂ ತಮ್ಮ ಹೆಸರಿನಲ್ಲಿ ಸ್ವಂತ ಮನೆಯನ್ನು ಹೊಂದಿರದ ಬೀದಿ ಬಳಿ ವ್ಯಾಪಾರಿಗಳು ಈ ಯೋಜನೆಯಡಿ ವಸತಿ ಸೌಲಭ್ಯ ಪಡೆಯಬಹುದು.
ಮತ್ತು ಅವರು ನಗರ ನಿವಾಸಿಗಳಾಗಿರಬೇಕು ಈ ಬಗ್ಗೆ ವಿಳಾಸದ ಪುರಾವೆಯನ್ನು ಕೂಡ ಒದಗಿಸಬೇಕಾಗುತ್ತದೆ.
● ಬೀದಿ ಬಳಿ ವ್ಯಾಪಾರಸ್ಥರು ಎನ್ನುವುದಕ್ಕೆ ಪ್ರಮಾಣ ಪತ್ರ ಹೊಂದಿರಬೇಕು ಅಥವಾ LOR ಪ್ರಮಾಣ ಪತ್ರವನ್ನು ನಗರ ಪಾಲಿಕೆಯಿಂದ ಪಡೆದಿರಬೇಕು.
● ಕುಟುಂಬದ ವಾರ್ಷಿಕ ಆದಾಯವು 3 ಲಕ್ಷದ ಒಳಗಿರಬೇಕು. ಇದಕ್ಕೆ ಪುರಾವೆಯಾಗಿ ಸಕ್ಷಮ ಪ್ರಾಥಿಕಾರದಿಂದ ಪಡೆದ ಆದಾಯ ಪ್ರಮಾಣ ಪತ್ರವನ್ನು ಒದಗಿಸಬೇಕು
● ಈ ಯೋಜನೆಯ ಪ್ರಯೋಜನ ಪಡೆಯುವ ಫಲಾನುಭವಿಗಳು ವಸತಿ ನಿವೇಶನಕ್ಕೆ ವಿಧಿಸುವ ವಂತಿಕೆ ಹಾಗೂ ಬ್ಯಾಂಕ್ ಸಾಲ ಸೌಲಭ್ಯವನ್ನು ಮರು ಪಾವತಿಸಲು ಸಮರ್ಥರಾಗಿರಬೇಕು.
● ಈ ಮೇಲೆ ತಿಳಿಸಿದ ಎಲ್ಲಾ ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನವೆಂಬರ್ 3ರ ಒಳಗೆ ಆಸಕ್ತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ವಸತಿ ಯೋಜನೆ ಅಧಿಕೃತ ವೆಬ್ಸೈಟ್ ಗಳನ್ನು ಸರ್ಚ್ ಮಾಡಿ, ಸೂಚಿಸಿರುವ ನಿಯಮಗಳ ಪ್ರಕಾರ ಅರ್ಜಿ ಪಾರಂ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಸಹ ತಪ್ಪದೇ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ನಿಮ್ಮ ಅರ್ಜಿ ಪರಿಶೀಲನೆ ನಡೆದು ಅನುಮೋದನೆಯಾದ ಮೇಲೆ ಅದಕ್ಕೆ ಸಂಬಂಧಿಸಿದ ನೋಟಿಫಿಕೇಶನ್ ಗಳು ನಿಮಗೆ ಬರುತ್ತವೆ ನಂತರ ನೀವು ಅದಕ್ಕೆ ಪ್ರತಿಕ್ರಿಯಬಹುದು.