ದೇಶದ ಎಲ್ಲಾ ರೈತರಿಗೆ ಇಲ್ಲಿದೆ ಸಿಹಿ ಸುದ್ದಿ. ಕೇಂದ್ರ ಸರ್ಕಾರ ಎಲ್ಲಾ ರೈತರಿ ಈಗ ಕೃಷಿಯಂತ್ರ, ಉಚಿತ ಟ್ರ್ಯಾಕ್ಟರ್ ಹಾಗೂ ಉಚಿತ ಟಾರ್ಪಲಿನ್ ವಿತರಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಕೃಷಿ ಇಲಾಖೆ ಮೂಲಕ ಹಲವಾರು ಯೋಜನೆಗಳು ರೈತರಿಗೆ ಉಪಯೋಗವಾಗಲೆಂದು ಜಾರಿಗೆ ತರುತ್ತವೆ. ಸರ್ಕಾರದಿಂದ ಬರುವಂತಹ ಈ ಎಲ್ಲಾ ಸೌಲಭ್ಯವನ್ನು ಪಡೆಯಲು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಪ್ರತಿಯೊಬ್ಬರೂ ಇದರ ಎಲ್ಲಾ ಸೌಲಭ್ಯವನ್ನು ಪಡೆಯಲು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಸಂಪೂರ್ಣವಾಗಿ ಈ ಲೇಖನವನ್ನು ಓದಿ ಮಾಹಿತಿ ತಿಳಿದುಕೊಳ್ಳಿ. ಎಲ್ಲಾ ರೈತರಿಗೆ ಟಾರ್ಪಲಿನ್ ಅವಶ್ಯಕತೆ ಇದ್ದೇ ಇರುತ್ತದೆ. ಏಕೆಂದರೆ, ಕೃಷಿ ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ, ಹಾಗೂ ಇತರೆ ಹವಾಮಾನ ವೈಪರಿತ್ಯಗಳಿಂದ ಸಂರಕ್ಷಿಸಿ ಆಹಾರ ಧಾನ್ಯಗಳ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ರೈತರಿಗೆ ಕೃಷಿ ಇಲಾಖೆಯಿಂದ ಟಾರ್ಪಾಲಿನ (ತಾಡಪತ್ರಿ) ವಿತರಿಸಲಾಗುತ್ತಿದೆ.
ರೈತರಿಗೆ ಸಬ್ಸಿಡಿ ದರದಲ್ಲಿ ತಾಡಪತ್ರಿ ಅಂದ್ರೆ, ತಾರ್ಪಲಿನ್ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಮೊದಲು ಸಲ್ಲಿಸಿದವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಉಚಿತ ಕೃಷಿಯಂತ್ರ, ಉಚಿತ ಟ್ರ್ಯಾಕ್ಟರ್ ಸಂಬಂಧಿತ ಕೆಲವು ಯಂತ್ರಗಳನ್ನು ನೀಡಲಾಗುತ್ತದೆ. ಇವುಗಳ ಬಗ್ಗೆಒಂದೊಂದಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ…
1. ರೈತರಿಗೆ ಬೆಳೆಗಳ ರಾಶಿ ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗೂ ಇತರೆ ಹವಮಾನ ವೈಪರಿತ್ಯಗಳಿಂದ ಸಂರಕ್ಷಿಸಿ ಆಹಾರ ಧಾನ್ಯಗಳ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಲೆಂದು ಕೃಷಿ ಇಲಾಖೆಯಿಂದ ಇದೀಗ ಟಾರ್ಪಲಿನ್ ವಿತರಣೆ ಮಾಡಲಾಗುತ್ತಿದ್ದು, ಅದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿದ ರೈತರಿಗೆ ಉಚಿತವಾಗಿ ಟಾರ್ಪಲಿನ್ ಅನ್ನು ಸಬ್ಸಿಡಿಯಲ್ಲಿ ನೀಡಲಾಗುತ್ತದೆ.
2. ರೈತರಿಗೆ ಕೃಷಿ ಯಂತ್ರೋಪಕರಣಗಳು ಟ್ರಾಕ್ಟರ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, ನೇಗಿಲು, ಕೇಜ್ ಮಿಲ್, ಬದು ನಿರ್ಮಾಣ ಯಂತ್ರ, ಭತ್ತ ನಾಟಿ ಯಂತ್ರವನ್ನು ವಿವಿಧ ಬಗೆಯ ಯಂತ್ರಗಳನ್ನು ಸರ್ಕಾರವು ಈಗ ರೈತರಿಗೆ ಸಬ್ಸಿಡಿ ಸಹಾಯಧನವನ್ನು ನೀಡಲಾಗುತ್ತದೆ.
3. ಕರ್ನಾಟಕ ರಾಜ್ಯ ಸರ್ಕಾರದ ರೈತರಿಗೆ ಜಮೀನಿಗೆ ಬೇಕಾದ ಸ್ಪಿಂಕ್ಲರ್ ಹಾಗೂ ಪೈಪ್ ಲೈನ್‌ಗೆ ಶೇಕಡಾ 80% ರಷ್ಟು ಸಬ್ಸಿಡಿ ಹಣ ಸಹಾಯಧನವನ್ನು ಒದಗಿಸಲಾಗುತ್ತಿದೆ. ಎಲ್ಲಾ ಯೋಜನೆಗಳ ಲಾಭವನ್ನು ನೀವು ನಿಮ್ಮ ವಲಯದ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದುಕೊಳ್ಳಬಹುದಾಗಿದೆ.
ಹೌದು, ಕೆಲವು ಕೃಷಿ ಉಪಕರಣಗಳನ್ನು ನೀವು ಕೊಳ್ಳಬೇಕಾದರೆ ಕೇವಲ 20% ಮಾತ್ರ ವಂತಿಕೆ ಕಟ್ಟಬೇಕಾಗುತ್ತದೆ. ಇನ್ನುಳಿದ 80% ಸಬ್ಸಿಡಿಯನ್ನು ಸರ್ಕಾರ ಕಟ್ಟಿಕೊಡುತ್ತದೆ.
20% ಹಣವನ್ನು ನೀವು ಕಟ್ಟಿದರೆ ಈ ಸೌಲಭ್ಯ ಪಡೆಯಬಹುದು. ಹಾಗಾದ್ರೆ, ಇಂದಿನ ಲೇಖನದಲ್ಲಿ ನಾವು ಕೃಷಿ ಇಲಾಖೆಯಿಂದ ಸಿಗುವ ಪೈಪುಗಳು ಹಾಗೂ ಸ್ಪ್ರಿಂಕ್ಲರ್‌ಗಳಿಗೆ ಸಂಬಂಧಪಟ್ಟ ಉಪಕರಣಗಳನ್ನು ಹೇಗೆ ಪಡೆಯಬೇಕು ಹಾಗೂ 80% ಹಣವನ್ನು ಸರ್ಕಾರ ಕೊಡುತ್ತೆ, ಇನ್ನುಳಿದ 20% ಹಣವನ್ನು ನೀವು ನೀಡಬೇಕಾಗುತ್ತದೆ.
ಇದಕ್ಕೆ ಬೇಕಾಗುವ ಪ್ರಮುಖ ದಾಖಲೆಗಳು
* ಆಧಾರ್ ಕಾರ್ಡ್
* ಇ- ಸ್ಟ್ಯಾಂಪ್ ಪೇಪರ್ ಮೇಲೆ ಮುಚ್ಚಳಿಕೆ ಪತ್ರ ಬರೆದು ಕೊಡಬೇಕು. ಅಂದ್ರೆ ನಾನು ನಿಮ್ಮ ಇಲಾಖೆಯಿಂದ ಈ ಹಿಂದೆ ಯಾವುದೇ ರೀತಿಯ ಸೌಲಭ್ಯ ಪಡೆದಿರುವುದಿಲ್ಲ ಎಂದು ಇ-ಸ್ಟ್ಯಾಂಪ್ ಪೇಪರ್ ಮೇಲೆ ಬರೆದು ಸಹಿ ಮಾಡಬೇಕು .
* ನೀರು ಬಳಕೆ ಪ್ರಮಾಣ ಪತ್ರ. ಇದನ್ನು ನೀವು ಗ್ರಾಮ ಲೆಕ್ಕಿಗರ ಬಳಿ ಪಡೆಯಬಹುದು. ಅವರ ಬಳಿ ಈ ಪ್ರಮಾಣ ಪತ್ರ ಸಿಗುತ್ತದೆ.
* ಪಹಣಿ
* ಎಫ್ಐಡಿ ಅಂದರೆ ಫಾರ್ಮರ್ ಐಡೆಂಟಿಫಿಕೇಶನ್ ಕಾರ್ಡ್.
* ನಿಮ್ಮ ಬ್ಯಾಂಕ್ ಪಾಸ್ ಬುಕ್
ಈ ಮೇಲೆ ಹೇಳಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹೋಬಳಿಯಲ್ಲಿರುವ ಕೇಂದ್ರಕ್ಕೆ ಕೊಟ್ಟು ರಶೀದಿ ಪಡೆದುಕೊಳ್ಳಬೇಕು.