ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಕನಸು ತಾನು ವಿದ್ಯಾಭ್ಯಾಸ ಮುಗಿಸಿದ ಮೇಲೆ ಒಂದು ಸರಕಾರಿ ಹುದ್ದೆ ಪಡೆಯಬೇಕು ಎನ್ನುವುದು. IT BT ಪ್ರೊಫೆಷನ್ ಅಬ್ಬರ ಜೋರಾಗಿರುವ ಈ ಕಾಲದಲ್ಲೂ ಕೂಡ ಸರ್ಕಾರಿ ಹುದ್ದೆಗಳ ಮೇಲಿರುವ ಆಸಕ್ತಿ ಕಡಿಮೆ ಆಗಿಲ್ಲ. ಹಾಗಾಗಿ ಪ್ರತಿ ವರ್ಷವೂ ಕೂಡ ಈ ಕ್ಷೇತ್ರದಲ್ಲಿ ಕಾಂಪಿಟೇಶನ್ ಕೊಡುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಮತ್ತು ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಇದಕ್ಕಾಗಿ ತರಬೇತಿ ಪಡೆದು ತಯಾರಾಗುತ್ತಿರುವವರ ಸಂಖ್ಯೆಯು ಜೋರಾಗಿದೆ.
ಆದರೆ ಗ್ರಾಮೀಣ ಭಾಗದಲ್ಲಿ ಈ ಕುರಿತಾದ ಜಾಗೃತಿ ಕಡಿಮೆ, ಸರಿಯಾದ ಮಾರ್ಗದರ್ಶನವೂ ಕೂಡ ದೊರೆತಿರುವುದಿಲ್ಲ, ಇನ್ನು ಲಕ್ಷಾಂತರ ಹಣ ಸುರಿದು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿಗೆ ಸೇರಿಸುವ ಶಕ್ತಿಯು ಪೋಷಕರಿಗೆ ಇರುವುದಿಲ್ಲ. ಈ ಕಾರಣದಿಂದ ರಾಜ್ಯದ ಪ್ರತಿಭಾವಂತ ಗ್ರಾಮೀಣ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳು ಅವಕಾಶ ವಂಚಿತವಾಗಿರಬಾರದು ಎನ್ನುವ ಉದ್ದೇಶದಿಂದ ರಾಜ್ಯದ ಕೆಲವು ಸಂಸ್ಥೆಗಳು ಉಚಿತವಾಗಿ ತರಬೇತಿ ನೀಡುತ್ತಿವೆ.
ಇವುಗಳಲ್ಲಿ ಒಂದು ಬೆಂಗಳೂರು ಸಮೀಪದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಭಾಗದಲ್ಲಿರುವ ಆರ್ ಎಲ್ ಜಾಲಪ್ಪ ಅಕಾಡೆಮಿ. ಈ ಅಕಾಡೆಮಿಯಲ್ಲಿ ಗ್ರಾಮೀಣ ಭಾಗದಿಂದ ಬರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅರ್ಹ ಅಭ್ಯರ್ಥಿಗಳ ಉಚಿತವಾಗಿ ಪ್ರತ್ಯೇಕ ವಸತಿ ಊಟದ ವ್ಯವಸ್ಥೆಯೊಂದಿಗ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು (KPSC) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಾದ KAS, FDA, SDA, PSI ಮುಂತಾದ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ.
ಈ ಸುದ್ದಿ ಓದಿ:- ಎಲ್ಲಾ ವಿದ್ಯಾರ್ಥಿಗಳಿಗೆ ₹10,000 ಪ್ರೋತ್ಸಾಹ ಧನ ಆಸಕ್ತರು ಅರ್ಜಿ ಆಹ್ವಾನ.!
ಆಸಕ್ತಿ ಇರುವವರು ಆನ್ಲೈನಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಈ ಕುರಿತಾದ ಪೂರ್ತಿ ವಿವರ ಹೀಗಿದೆ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ತರಬೇತಿ ನೀಡುತ್ತಿರುವ ಸಂಸ್ಥೆ:- ಆರ್. ಎಲ್ ಜಾಲಪ್ಪ ಅಕಾಡೆಮಿ (R L Jalappa Academy)
ಉದ್ದೇಶ:-
* ಹಿಂದುಳಿದ ವರ್ಗಗಳ ಯುವ ಜನತೆಗೆ ಆಡಳಿತ ಹುದ್ದೆಗಳನ್ನು ಅಲಂಕರಿಸುವಂತಾಗಲು ತರಬೇತಿ ನೀಡಿ ಸನ್ನದ್ಧರಾಗಿಸುವುದು
* ಹಿಂದುಳಿದ ವರ್ಗಗಳ ಯುವಕ ಯುವತಿಯರ ವ್ಯತ್ತಿ ನೈಪುಣ್ಯತೆಯನ್ನು ಹೆಚ್ಚಿಸುವುದು.
ಈ ಸುದ್ದಿ ಓದಿ:- ಗೋಲ್ಡ್, ಸೈಟ್ ಅಥವಾ ಮ್ಯೂಚುವಲ್ ಫಂಡ್ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ ನೋಡಿ.!
ತರಬೇತಿ ಅವಧಿ:- ನಾಲ್ಕು ತಿಂಗಳುಗಳು
ಸ್ಥಳ:-
ಸೋಲೂರು (ರಾಮನಗರ ಜಿಲ್ಲೆ ಮಾಗಡಿ ತಾಲೂಕು, ನೆಲಮಂಗಲದಿಂದ 15 ಕಿ.ಮೀ ಅಂತರದಲ್ಲಿದೆ)
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಗಧಿ ಪಡಿಸಿರುವ ವಯೋಮಿತಿಯನ್ನು ಹೊಂದಿರುವ ಯಾವುದೇ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು
* ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಪೂರ್ತಿಗೊಳಿಸಬೇಕು ಆದರೆ ಪದವಿಯಲ್ಲಿ ಇಂತಿಷ್ಟೇ ಅಂಕಗಳನ್ನು ಹೊಂದಿರಬೇಕು ಎನ್ನುವ ಯಾವುದೇ ಕಂಡೀಶನ್ ಇಲ್ಲ
* ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ
* ಜೂನ್ 31, 2024 ಅರ್ಜಿ ಸಲ್ಲಿಸಲು ಕಡೆಯ ದಿನಾಂಕ, ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ
* ಒಂದು ಬಾರಿ ಈ ಅಕಾಡೆಮಿಯಲ್ಲಿ ಉಚಿತ ತರಬೇತಿ ಪಡೆದು ಮತ್ತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* https://www.rljacademy.in/about.html ಈ ವೆಬ್ ಸೈಟ್ ಲಿಂಕ್ ಮಾಡಿ
* ಕೇಳಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ, ದಾಖಲೆ ಪ್ರತಿಗಳನ್ನು ಕೂಡ ಲಗತ್ತಿಸಿ
* ಮತ್ತೊಮ್ಮೆ ಅರ್ಜಿಯನ್ನು ಪರಿಶೀಲನೆ ಮಾಡಿ ಎಲ್ಲವೂ ಸರಿ ಇದ್ದರೆ ಸಬ್ಮಿಟ್ ಮಾಡಿ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಸಹಾಯವಾಣಿ ಸಂಖ್ಯೆಗಳು:
9731480759
7337705513