ಈಕೆನ ಕಾಲದಲ್ಲಿ ಹೂಡಿಕೆ ಎಂದ ತಕ್ಷಣ ನೆನಪಾಗುವುದು ಚಿನ್ನ ಖರೀದಿಸುವುದು, ಆಸ್ತಿ ಖರೀದಿಸುವುದು ಮತ್ತು ಈಗಿನ ಜನರೇಶನ್ ನಲ್ಲಿ ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್ ಗಳಲ್ಲಿ ಇನ್ವೆಸ್ಟ್ ಮಾಡುವುದು. ಆದರೆ ಸಾಂಪ್ರದಾಯಿಕವಾಗಿ ಹೂಡಿಕೆ ಎಂದರೆ ನಮ್ಮ ಹಿರಿಯರು ಹೇಳಿ ಕೊಟ್ಟಿರುವುದು ಚಿನ್ನ ಖರೀದಿಸುವುದು ಅಥವಾ ಸೈಟ್ ಮಾಡುವುದು.
ಇದುವರೆಗೂ ಹೆಚ್ಚಿನ ಜನ ಅದನ್ನೇ ಲಾಭ ಎಂದುಕೊಂಡಿದ್ದಾರೆ. ಆದರೆ ಚಿನ್ನ, ಸೈಟ್ ಅಥವಾ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ನಿಜಕ್ಕೂ ಸೇಫಾ? ಯಾವುದು ಎಷ್ಟು ಲಾಭದಾಯಕ? ಯಾವುದರಲ್ಲಿ ಎಷ್ಟು ರಿಸ್ಕ್ ಇದೆ? ಎಂಬುದರ ಬಗ್ಗೆ ಎಲ್ಲರಿಗೂ ಉಪಯುಕ್ತ ವಾಗುವಂತಹ ಕೆಲವು ಸಲಹೆಗಳನ್ನು ಆರ್ಥಿಕ ತಜ್ಞರ ಅಭಿಪ್ರಾಯದೊಂದಿಗೆ ಈ ಲೇಖನದ ಮೂಲಕ ಹಂಚಿಕೊಳ್ಳಲು ಇಚ್ಚಿಸುತ್ತೇವೆ.
ಈಗಿನ ಕಾಲಕ್ಕೆ ಚಿನ್ನದ ಮೇಲೆ ಇನ್ವೆಸ್ಟ್ ಮಾಡುವುದು ಅಷ್ಟು ಲಾಭದಾಯಕ ಅಲ್ಲ ಎನ್ನುವುದೇ ಇವರ ಅಭಿಪ್ರಾಯ ಯಾಕೆಂದರೆ ಈಗಾಗಲೇ ಚಿನ್ನದ ಮೇಲೆ ಮೇಕಿಂಗ್ ಚಾರ್ಜಸ್ ಮತ್ತು GST ಎಂದು ಹೇಳಿ ನಮ್ಮ ಹೂಡಿಕೆ 30% ಹೊರಟೇ ಹೋಗುತ್ತದೆ, ಇದನ್ನು ಕಳೆದು ನಾವು ಹೂಡಿಕೆ ಮಾಡಿದ ಹಣವು ನಮಗೆ ಅದೇ ರೂಪದಲ್ಲಿ ವಾಪಸ್ ಸಿಗುತ್ತದೆ ಹೊರತು ಐದು ವರ್ಷಗಳಲ್ಲಿ ಹಣ ದುಪ್ಪಟ್ಟಾಗುವ ಯಾವುದೇ ಭರವಸೆ ಇಲ್ಲ.
ಈ ಸುದ್ದಿ ಓದಿ:- ಮಾಕಳಿ ಬೇರಿನ ಕೃಷಿ ಎಷ್ಟು ಲಾಭದಾಯಕ ಗೊತ್ತಾ.? 1 ಎಕರೆಗೆ 8-10 ಲಕ್ಷ ಲಾಭ ಸಿಗುತ್ತೆ.! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!
ಇನ್ನು ಅಲಂಕಾರಕ್ಕಾಗಿ ಈಗ ಚಿನ್ನ ಬಳಸುವ ರೂಢಿಯು ಹೆಣ್ಣು ಮಕ್ಕಳಿಗೆ ತಪ್ಪಿ ಹೋಗಿದೆ, ಹಾಗಾಗಿ ಚಿನ್ನಕ್ಕಿಂತಲೂ ಬೇರೆ ಇನ್ವೆಸ್ಟ್ಮೆಂಟ್ ಕಡೆ ನೋಡಬಹುದು. ಒಂದು ವೇಳೆ ಚಿನ್ನವನ್ನೇ ಖರೀದಿಸುವುದಾದರೆ RBI ಮಾರಾಟ ಮಾಡುವ ಚಿನ್ನದ ಬಾಂಡ್ ಗಳು ಹೆಚ್ಚು ಲಾಭದಾಯಕವಾಗಿವೆ.
ಇನ್ನು ಎರಡನೇ ಆಪ್ಷನ್ ಆಗಿ ಸೈಟ್ ಖರೀದಿ ಮಾಡುವುದು ಬೆಸ್ಟ್ ಎಂದು ನೋಡುವುದಾದರೆ ನಾವು ಮನೆ ಕಟ್ಟಿಕೊಳ್ಳುವ ಉದ್ದೇಶಕ್ಕಾಗಿ ಸೈಟ್ ಖರೀದಿಸುತ್ತಿದ್ದೇವೆಯೇ ಅಥವಾ ಮುಂದೆ ಒಂದು ದಿನ ಇದನ್ನು ಮಾರುವ ಉದ್ದೇಶದಿಂದಲೇ ಖರೀದಿಸುತ್ತಿದ್ದೇವೆಯೇ? ಅಥವಾ ಸಾಲ ಮಾಡಿ ಖರೀದಿಸುತ್ತಿದ್ದೇವೆಯೇ? ಇದೆಲ್ಲ ವಿಚಾರದ ಮೇಲೆ ಇದು ನಿರ್ಧಾರ ಆಗುತ್ತದೆ.
ನಾವು ಯಾವ ಏರಿಯಾದಲ್ಲಿ ಮೇಲೆ ಸೈಟ್ ಮಾಡುತ್ತಿದ್ದೇವೆ ಎನ್ನುವುದು ಮೊದಲು ನೋಡಬೇಕು, ಸಾಮಾನ್ಯವಾಗಿ ಅಕ್ಕಪಕ್ಕದವರು ಹೇಳುವ ರೇಟ್ ಬೇರೆ ಇರುತ್ತದೆ ಅಥವಾ ಬ್ರೋಕರ್ ಹೇಳಿದ ಮಾತುಗಳನ್ನು ಬ್ಲೈಂಡ್ ಆಗಿ ನಂಬುತ್ತೇವೆ. ಇದರ ಬದಲು ಸ್ವಂತ ಬುದ್ಧಿ ಉಪಯೋಗಿಸಿ ನೋಡಬೇಕು ನಾವು ಬ್ಯಾಂಕ್ ಲೋನ್ ತೆಗೆದುಕೊಂಡು ಸೈಟ್ ಖರೀದಿಸುವುದಾದರೆ ಅದರ ಬಡ್ಡಿಯೇ ಹೆಚ್ಚು ಇರುತ್ತದೆ.
ಈ ಸುದ್ದಿ ಓದಿ:- ನಿಮ್ಮ ಊರಿನಲ್ಲಿ ಸರಕಾರಿ ಭೂಮಿ ಎಲ್ಲೆಲ್ಲಿ ಎಷ್ಟೆಷ್ಟು ಇದೆ ಗುರುತಿಸುವುದು ಹೇಗೆ ನೋಡಿ.!
ಹಾಗಾಗಿ ಇಷ್ಟೆಲ್ಲಾ ರಿಸ್ಕ್ ಆಗಿ ಆಸ್ತಿ ಮಾಡಿದ್ದೆ ಆದರೂ ಮಾರುವ ದಿನಕ್ಕೆ ತೊಂದರೆ ಇಲ್ಲವೇ ಐದು ವರ್ಷಗಳಲ್ಲಿ ಇದು ಹೆಚ್ಚು ಲಾಭಕ್ಕೆ ಹೋಗುತ್ತದೆಯೇ ಎನ್ನುವುದನ್ನು ಲೆಕ್ಕಾಚಾರ ಮಾಡಿ ನೋಡಬೇಕು. ಸದ್ಯಕ್ಕೆ ಅಲ್ಲಿ ಯಾರು ಪ್ರಾಪರ್ಟಿ ಖರೀದಿಸಿದ್ದಾರೆ ಮತ್ತು ಯಾರು ತುಂಬಾ ಹಳೆ ವರ್ಷಗಳಿಂದ ಇದ್ದಾರೆ ಅವರು ಎಷ್ಟಕ್ಕೆ ಖರೀದಿಸಿದ್ದರು ಈ ಮಾಹಿತಿ ಸಿಕ್ಕರೆ ಒಂದು ಸ್ಪಷ್ಟ ಚಿತ್ರಣ ಬರುತ್ತದೆ.
ಈ ಎರಡನ್ನು ಹೊರತು ಪಡಿಸಿ ನೋಡುವುದಾದರೆ ಈಗ ಮ್ಯೂಚುವಲ್ ಫಂಡ್, ಸ್ಟಾಕ್ ಮಾರ್ಕೆಟ್, ಇಕ್ವಿಟಿಗಳು ಹೆಚ್ಚು ಲಾಭದಾಯಕವಾಗಿವೆ. ನಾವು ಯಾವ ಕಂಪನಿ ಮೇಲೆ ಹೂಡಿಕೆ ಮಾಡುತ್ತಿದ್ದೇವೆ ಯಾವ ಶೇರ್ ಖರೀದಿಸಿದ್ದೇವೆ? ಎನ್ನುವುದರ ಮೇಲೆಯೂ ಲಾಭ ನಿರ್ಧಾರ ಆಗುತ್ತದೆ.
ಆದರೆ ಐದು ವರ್ಷಗಳಲ್ಲಿ ಉಳಿದ ಇತರೆ ಇನ್ವೆಸ್ಟ್ ಗಳು ಕಿಂತಲೂ ಲಾಭದಾಯಕವಾಗಿ ಇರುತ್ತವೆ ಎನ್ನುವುದಂತೂ ಗ್ಯಾರಂಟಿ ಎನ್ನುತ್ತಾರೆ ಆರ್ಥಿಕ ತಜ್ಞರು. ಈಗ ಇವುಗಳನ್ನು ಕಲಿಯುವುದಕ್ಕೆ ಟ್ರೈನಿಂಗ್ ಕ್ಲಾಸ್ ಗಳು ಇದೆ, ಇವುಗಳನ್ನು ಅಟೆಂಡ್ ಮಾಡಿ ಈ ಬಗ್ಗೆ ತಿಳಿದು ಕೊಳ್ಳಬಹುದು ಎನ್ನುವ ಸಲಹೆಯನ್ನು ಕೂಡ ಕೊಡುತ್ತಿದ್ದಾರೆ ಇದೆಲ್ಲವನ್ನು ಯೋಚಿಸಿ ಯಾವ ಇನ್ವೆಸ್ಟ್ಮೆಂಟ್ ಬೆಟರ್ ಎನ್ನುವುದನ್ನು ತೀರ್ಮಾನಿಸಿ.