ಸಾಮಾನ್ಯವಾಗಿ ಕೃಷಿ ಎಂದರೆ ಆಹಾರಕ್ಕೆ ಅಗತ್ಯವಾಗಿರುವ ಅಕ್ಕಿ, ರಾಗಿ, ಗೋಧಿ, ಭತ್ತ, ಬೇಳೆ ಕಾಳುಗಳು, ಎಣ್ಣೆ ಕಾಳುಗಳು ಬೆಳೆಯುವುದು ಎನ್ನುವುದು ಅನೇಕರ ಭಾವನೆ. ಆದರೆ ಈಗ ಕೃಷಿ ಕೂಡ ಎಷ್ಟು ಲಾಭದಾಯಕವಾಗಿದೆ ಎಂದರೆ ಕಬ್ಬು, ಹತ್ತಿ, ರಬ್ಬರ್ ಮಾತ್ರವಲ್ಲದೆ ಅತಿ ಹೆಚ್ಚು ಬೇಡಿಕೆಯಲ್ಲಿರುವ ವಾಣಿಜ್ಯ ಬೆಳೆಗಳಾದ ಕಾಫಿ, ಟೀ ಎಲೆ, ಮೆಣಸು, ಶುಂಠಿ, ಅರಿಶಿನ ಹಾಗೂ ಔಷಧಿ ಸಸ್ಯಗಳಾದ ಅಲೋವೆರಾ, ತುಳಸಿ ಇತ್ಯಾದಿಗಳನ್ನು ಬೆಳೆಯುವುದರಿಂದ ಯಾವುದೇ ಒಂದು ವ್ಯಾಪಾರಿಗಿಂತಲೂ ಕಡಿಮೆ ಇಲ್ಲದಂತೆ ಕೃಷಿಯಲ್ಲಿಯೇ ಲಾಭ ಮಾಡಬಹುದು.
ರೈತನೊಬ್ಬ ಮನಸ್ಸು ಮಾಡಿದರೆ ಅಸಾಧ್ಯವಾದದ್ದು ಯಾವುದು ಇಲ್ಲ. ಈ ಕೃಷಿ ಮಾಡುವುದರ ಜೊತೆಗೆ ಅನಾದಿಕಾಲದಿಂದಲೂ ಕೂಡ ಭಾರತದಲ್ಲಿ ಬಳಕೆಯಲ್ಲಿದ್ದ ಸಾಂಪ್ರದಾಯಿಕ ಗಿಡಮರ ವನ್ಯ ಸಂಪತ್ತನ್ನು ಉಳಿಸುವ ಜವಾಬ್ದಾರಿ ಕೂಡ ರೈತನದ್ದೇ ಆಗಿದೆ. ಯಾಕೆಂದರೆ ಈಗ ನಮ್ಮೆಲ್ಲರ ನಿರ್ಲಕ್ಷ್ಯದಿಂದ ಕಾಡು ಕ್ರಮೇಣ ನಶಿಸುತ್ತಿದೆ. ಹಾಗೆ ಕಾಡಿನಲ್ಲಿದ್ದ ಅತ್ಯಮೂಲ ವಿಶೇಷ ಔಷಧೀಯ ಗುಣಗಳನ್ನು ಹೊಂದಿದ್ದ ತಳಿಗಳು ಕೂಡ ಇನ್ನಿಲ್ಲವಾಗುತ್ತಿವೆ.
ಇದು ಹೀಗೆ ಮುಂದುವರೆದರೆ ಒಂದಾನೊಂದು ಕಾಲದಲ್ಲಿ ಇಂತಹ ವನ್ಯ ಸಂಪತ್ತಿನಿಂದಲೇ ಔಷಧೀಯ ಗುಣಗಳನ್ನು ಹೊಂದಿದ್ದ ಸಸ್ಯ ಸಮೂಹದಿಂದ ಸಮೃದ್ಧವಾಗಿದ್ದ ನಮ್ಮ ನೆಲದಲ್ಲಿ ಇಂಗ್ಲಿಷ್ ಮೆಡಿಸಿನ್ ಶಾಶ್ವತವಾಗಿ ಮಾರ್ಕೆಟ್ ಉಳಿಸಿಕೊಂಡು ಬಿಡುತ್ತದೆ. ಈ ಬಗ್ಗೆ ಕಾಳಜಿ ಹೊಂದಿರುವ ರೈತರೊಬ್ಬರು ಇದನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ಹಿಂದಿನ ತಲೆಮಾರುಗಳಲ್ಲಿ ಊಟದೊಂದಿಗೆ ತಪ್ಪದೇ ಬಳಸುತ್ತಿದ್ದ ಮಾಕಳಿ ಬೇರನ್ನು ಬೆಳೆದು ಈ ಸಸ್ಯವನ್ನು ಉಳಿಸಿಕೊಳ್ಳುವುದರ ಜೊತೆಗೆ ಅಪಾರ ಲಾಭದಲ್ಲಿದ್ದಾರೆ.
ಈ ಸುದ್ದಿ ಓದಿ:- ನಿಮ್ಮ ಊರಿನಲ್ಲಿ ಸರಕಾರಿ ಭೂಮಿ ಎಲ್ಲೆಲ್ಲಿ ಎಷ್ಟೆಷ್ಟು ಇದೆ ಗುರುತಿಸುವುದು ಹೇಗೆ ನೋಡಿ.!
ಇದರ ಬಗ್ಗೆ ಈ ಲೇಖನದಲ್ಲಿ ಕೆಲ ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತಿದ್ದೇವೆ ಮಾಕಳಿ ಬೇರು ಎನ್ನುವುದರ ಬಗ್ಗೆ ಹಳ್ಳಿಗಳಲ್ಲಿ ಹಿಂದೆ ಪ್ರತಿಯೊಂದು ಮನೆಯ ಮಕ್ಕಳಿಗೂ ಗೊತ್ತಿತ್ತು. ಆದರೆ ಕಳೆದ ಒಂದೆರಡು ದಶಕಗಳಿಂದ ಇದು ಸಂಪೂರ್ಣವಾಗಿ ನಮ್ಮಿಂದ ದೂರವಾಗಿ ಹೋಗಿದೆ ಮಾಕಳಿ ಬೇರಿನಲ್ಲಿ ಉಪ್ಪಿನಕಾಯಿ ಮಾಡುತ್ತಿದ್ದರು.
ಈ ಉಪ್ಪಿನಕಾಯಿ ಊಟದ ರುಚಿ ಹೆಸರು ಹೆಚ್ಚಿಸುತ್ತಿತ್ತು ಮತ್ತು ಇದರ ಘಮವು ಮರೆತುಂಬ ಹರಡಿಕೊಂಡು ಆಹಾರದ ಬಗ್ಗೆ ಆಸಕ್ತಿ ತರುತ್ತಿತ್ತು. ಮಕ್ಕಳಿಂದ ಹಿರಿಯರವರಿಗೆ ಪ್ರತಿಯೊಬ್ಬರಿಗೂ ಊಟದ ಜೊತೆ ಔಷಧಿಯಾಗಿ ಇದು ದೇಹ ಸೇರುತ್ತಿತ್ತು . ಈ ಉಪ್ಪಿನಕಾಯಿಯನ್ನು ಎರಡು ಮೂರು ವರ್ಷ ಇಟ್ಟರೂ ಕೂಡ ಕೆಡುತ್ತಿರಲಿಲ್ಲ ಉಪ್ಪಿನಕಾಯಿ ಮಾತ್ರವಲ್ಲದೆ ಇದರ ಬೇರಿನಿಂದ ಜಜ್ಜಿ ಕಷಾಯ ಶರಬತ್ತು ತಯಾರಿಸುತ್ತಿದ್ದರು.
ಹೀಗೆ ಮಕ್ಕಳಿಗೆ ಯಾವುದೇ ರೂಪದಲ್ಲಿ ಸೇವಿಸಿದರು ಅಜೀರ್ಣ ಮಲಬದ್ಧತೆ ಕಡಿಮೆ ಆಗುವುದು, ದೇಹದ ಉಷ್ಣ ಕಡಿಮೆ ಆಗುವುದು, ಮಕ್ಕಳ ಬುದ್ಧಿ ಚುರುಕಾಗುವುದು, ರೋಗನಿರೋಧಕ ಶಕ್ತಿ ಹೆಚ್ಚಾಗುವುದು, ಇಂತಹ ಎನರ್ಜಿಯುಕ್ತ ಆಹಾರ ಆಗಿತ್ತು.
ಈ ಸುದ್ದಿ ಓದಿ:- ಅನ್ನ ಭಾಗ್ಯ ಅಕ್ಕಿ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!
ಆದರೆ ಈಗ ಇದು ಬಲು ಅಪರೂಪದ ಹೆಸರಾಗಿ ಹೋಗಿದೆ ಮತ್ತು ಹೀಗಾಗಬಾರದೆಂದು ಹಠ ಮಾಡಿ ರೈತನೊಬ್ಬ ಇದನ್ನು ಬೆಳೆದ ಕಾರಣಕ್ಕಾಗಿ ವರ್ಷಕ್ಕೆ 2.5 ಲಕ್ಷ ಖರ್ಚು ಮಾಡಿದ ಒಂದು ಎಕರೆಯಲ್ಲಿ ಇಂದು 8-10 ಲಕ್ಷ ಲಾಭ ಪಡೆದಿದ್ದಾರೆ. ಹೆಸರೇ ಹೇಳುವಂತೆ ಇದರ ಬೇರಿಗೆ ಬೆಲೆ ಇರುವುದು ಇದು ಗಿಡ ಹಾಗೂ ಬಳ್ಳಿ ರೀತಿ ಹಬ್ಬಿಕೊಳ್ಳುತ್ತದೆ ಆದರೆ ಒಂದು ವರ್ಷದವರೆಗೆ ಇದನ್ನು ಕಟಾವು ಮಾಡಲು ಬರುವುದಿಲ್ಲ.
ಒಂದು ವರ್ಷ ಆದ ನಂತರ ಒಂದು ಗಿಡದಲ್ಲಿ 5KG ಆದರೂ ಬೇರು ಸಿಗುತ್ತದೆ ಇದನ್ನು ಒಣಗಿಸಿದರೆ ಇದು 1 KG ಬರುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆ ಇದೆ ಹೀಗಾಗಿ ಔಷಧಿ ಕಂಪನಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ಖರೀದಿಸಿ ಹೋಗುತ್ತವೆ. ಈ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದರೆ ಈ ಕೃಷಿ ಮಾಡಲು ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ತಿಳಿದುಕೊಳ್ಳಿ.