ಶಿಕ್ಷಣ ಹಕ್ಕು ಕಾಯ್ದೆ (RTE) ಮೂಲಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನ ಮಾಡಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪೋಷಕರು ತಾವು ಇರುವ ವ್ಯಾಪ್ತಿಯಿಂದ ಸರ್ಕಾರಿ ಶಾಲೆಗಳು ದೂರವಿದ್ದ ಪಕ್ಷದಲ್ಲಿ ತಮ್ಮ ಮಕ್ಕಳಿಗೆ ಹತ್ತಿರದಲ್ಲಿರುವ ಯಾವುದೇ ಅನುದಾನಿತ ಅಥವಾ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿ, ಸೀಟ್ ಪಡೆದುಕೊಳ್ಳಬಹುದು.
2024-25 ನೇ ಶೈಕ್ಷಣಿಕ ಸಾಲಿನಲ್ಲಿ 1 – 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 22 2024ರವರೆಗೂ ಕೂಡ ಕಾಲಾವಕಾಶ ನೀಡಲಾಗಿದೆ ಇದರ ಸಂಬಂಧಿತ ವೇಳಾಪಟ್ಟಿಯನ್ನು ಕೂಡ ಇಲಾಖೆ ಬಿಡುಗಡೆ ಮಾಡಿದೆ. ಸದ್ಯಕ್ಕೆ ಈಗ ಈ ವಿಚಾರದಲ್ಲಿ ಆಸಕ್ತಕದ ಸಂಗತಿ ಏನೆಂದರೆ, ಶಿಕ್ಷಣ ಹಕ್ಕು ಕಾಯ್ದೆಯಡಿ ರೈತರ ಮಕ್ಕಳಿಗೂ (RTE facility for farmers Childrens) ಕೂಡ ವಿಶೇಷ ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಸುದ್ದಿ ಓದಿ:- ಸಾರ್ವಜನಿಕರಿಗೆ ಸಿಹಿ ಸುದ್ದಿ, ಅಡುಗೆ ಸಿಲಿಂಡರ್ ಬೆಲೆ ಇಳಿಕೆ.!
ರೈತರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ ಅರ್ಹ ರೈತರು ತಮ್ಮ ಮಕ್ಕಳನ್ನು ತಮಗಿಷ್ಟವಾದ ಉತ್ತಮ ಶಾಲೆಗಳಲ್ಲಿ ಅಡ್ಮಿಶನ್ ಮಾಡಿಸಬಹುದು ಆದರೆ ಇದಕ್ಕೆ ಕೆಲವು ಕಂಡಿಶನ್ ಗಳಿವೆ ಆ ಮನದಂಡಗಳನ್ನು ಪೂರೈಸುವ ರೈತರ ಕುಟುಂಬದ ಮಕ್ಕಳಿಗೆ ಮಾತ್ರ ಈ ಅವಕಾಶ ಸಿಗಲಿದೆ. ಇದರ ಸಂಬಂಧಿತವಾಗಿ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಏನೇನಿದೆ ಎನ್ನುವ ಪ್ರಮುಖ ಸಂಗತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಅರ್ಜಿ ಸಲ್ಲಿಸಲು ಮಾನದಂಡಗಳು:-
* 2015ರ ನಂತರ ಸಾಲಭಾದೆ ಅಥವಾ ಇನ್ನಿತರ ಕಾರಣಗಳಿಂದಾಗಿ ಮೃ’ತ ಪಟ್ಟ ರೈತರ ಮಕ್ಕಳಿಗೆ ಈ ವಿಶೇಷ ಯೋಜನೆಯಡಿ ಅವಕಾಶ ಕಲ್ಪಿಸಿಕೊಡಲಾಗಿದೆ.
ಯಾವೆಲ್ಲ ಶಾಲೆಗಳಲ್ಲಿ ಪ್ರವೇಶಾತಿ ಕೋರಿ ಅರ್ಜಿ ಸಲ್ಲಿಸಬಹುದು:-
* ನೆರೆಹೊರೆ ಶಾಲೆಗಳಲ್ಲಿ ಯಾವುದೇ ಶಾಲೆಯನ್ನು ಕೈಬಿಡದಂತೆ ಸೇರಿಸಿ ಇದರೊಂದಿಗೆ ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ನಗರ ಸಭೆ ಮತ್ತು ಎಲ್ಲಾ ಸರ್ಕಾರಿ, BBMP ಶಾಲೆಗಳು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿವೆ.
ಈ ಸುದ್ದಿ ಓದಿ:- ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ.! ಆಸಕ್ತರು ಈ ರೀತಿ ಅರ್ಜಿ ಸಲ್ಲಿಸಿ…
* ಅಲ್ಪಸಂಖ್ಯಾತ ಶಾಲೆಗಳು ಎಂದು ಘೋಷಣಾ ಪತ್ರ ಪಡೆದಿರುವ ಅಥವಾ ಈಗಾಗಲೇ ಮುಚ್ಚಲ್ಪಟ್ಟಿರುವ ಅಥವಾ ನ್ಯಾಯಾಲಯದಿಂದ ತಡೆಯಾಜ್ಞೆ ಹೊಂದಿರುವ ಶಾಲೆಗಳನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ
* LKG, UKG ಮಾತ್ರ ನಡೆಸುತ್ತಿರುವ ಶಾಲೆಗಳನ್ನು ಕೂಡ ಈ ಪಟ್ಟಿಯಿಂದ ಕೈ ಬಿಡಲಾಗಿದೆ
ಬೇಕಾಗುವ ದಾಖಲೆಗಳು:-
* ಪೋಷಕರ ಹಾಗೂ ವಿದ್ಯಾರ್ಥಿಯ ಆಧಾರ್ ಕಾರ್ಡ್
* ಪೋಷಕರ ಆದಾಯ ಪ್ರಮಾಣ ಪತ್ರ
* ರೇಷನ್ ಕಾರ್ಡ್
* ಮಗುವಿನ ಜನನ ಪ್ರಮಾಣ ಪತ್ರ
* ಈ ಮೀಸಲಾತಿಗೆ ಸಂಬಂಧಿಸಿದ ಇನ್ನಿತರ ಪ್ರಮುಖ ದಾಖಲೆಗಳು
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:-
* ಪೋಷಕರು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕಛೇರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿಗೆ ಭೇಟಿಕೊಟ್ಟು ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು
* ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದಾದರೆ ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
* ವಿಶೇಷ ಪ್ರವರ್ಗಗಳ ಅಡಿಯಲ್ಲಿ ಅರ್ಜಿ ಸಲ್ಲಿಸುವ ಪೋಷಕರು ಸೂಕ್ತ ಕಾಲಂನಲ್ಲಿ ನಿರ್ದಿಷ್ಟವಾಗಿ ಮೀಸಲಾತಿ ಕೋರಿರುವ ಪ್ರವರ್ಗವನ್ನು ನಮೂದಿಸಿ ಸದರಿ ವರ್ಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ ಇತರೆ ಗ್ರಾಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ವೆಬ್ಸೈಟ್ https://sdcedn.karnataka.gov.in/rteadmission/RTE/page1.aspx
* ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು ವೇಳಾಪಟ್ಟಿಯನ್ನು ಪರೀಕ್ಷಿಸಬಹುದು ಮತ್ತು ಆಯಾ ವಿಭಾಗಕ್ಕೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಪ್ರಮುಖ ದಿನಾಂಕಗಳು:-
* ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22 ಏಪ್ರಿಲ್, 2024.
* ಅರ್ಜಿಗಳ ಪರಿಶೀಲನೆ ನಂತರ ಲಾಟರಿ ಪ್ರಕ್ರಿಯೆಯಲ್ಲಿ ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕ – 26 ಏಪ್ರಿಲ್, 2024
* ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಬಿಡುಗಡೆ – 30 ಏಪ್ರಿಲ್, 2024
* ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ದಾಖಲಾತಿ ಪಡೆಯಲು ಕೊನೆ ದಿನಾಂಕ – 13 ಮೇ, 2024
* ಆನ್ಲೈನ್ ತಂತ್ರಾಂಶದಲ್ಲಿ 2ನೇ ಸುತ್ತಿನ ಸೀಟು ಹಂಚಿಕೆ ಬಿಡುಗಡೆ ದಿನಾಂಕ – 22 ಮೇ, 2024.