ಸುಳ್ಳಲ್ಲ, ಮೋಸವೂ ಅಲ್ಲ, ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ 100% ಫ್ರೀ ಟ್ರೀಟ್ಮೆಂಟ್ ಕೊಡ್ತಾರೆ. ನಿಮಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಇರಲಿ ಒಮ್ಮೆ ಇಲ್ಲಿಗೆ ಭೇಟಿ ನೀಡಿ..

 

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಆಸ್ಪತ್ರೆಗಳು ಎಂದರೆ ಹಣ ಮಾಡುವ ದಂದೆಗೆ ಇಳಿದಿರುವ ಜಾಗ ಎಂದು ದೂರಲಾಗುತ್ತಿದೆ. ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ದುಡ್ಡಿನ ಹಿಂದೆ ಓಡುತ್ತಿರುವುದರಿಂದ ತನಗೆ ಉಪಯೋಗ ಇಲ್ಲ ಎನ್ನುವ ಯಾವ ಕೆಲಸವನ್ನು ಮನುಷ್ಯನಿಗೆ ಮಾಡುವಷ್ಟು ಸಹನೆ ಉಳಿದಿಲ್ಲ. ಜೊತೆಗೆ ಮನುಷ್ಯ ಮನುಷ್ಯನನ್ನೇ ಕಿತ್ತು ತಿನ್ನುವಂತಹ ಹಣದ ವ್ಯಾಮೋಹ ಬಂದಿರುವ ಈ ಕಾಲದಲ್ಲಿ ಉಚಿತವಾಗಿ ಯಾರಿಗಾದರೂ ಏನಾದರೂ ಸೌಲಭ್ಯವನ್ನು ಅದು ಕೂಡ ಪ್ರಾಮಾಣಿಕವಾಗಿ ಫಲ ಕೊಡುವಂತೆ ನೀಡುತ್ತಾರೆ ಎಂದರೆ ಅದನ್ನು ನಂಬಲು ಬಹಳ ಅಸಾಧ್ಯ.

ಆದರೆ ಬೆಂಗಳೂರಿನಲ್ಲಿರುವ ಒಂದು ಸೆರಾ ಕೇರ್ ಎನ್ನುವ ಸಂಸ್ಥೆಯು ನೀಡುತ್ತಿರುವ ವೈದ್ಯಕೀಯ ಚಿಕಿತ್ಸೆ ಬಗ್ಗೆ ಕೇಳಿದರೆ ನಿಜಕ್ಕೂ ನಾವು ರಾಮ ರಾಜ್ಯದಲ್ಲಿ ಇದ್ದೇವಾ ಎಂದು ಆಶ್ಚರ್ಯ ಪಡುತ್ತೀರಾ, ಅಷ್ಟು ಒಳ್ಳೆಯ ಸೇವಾ ಮನೋಭಾವನೆಯಿಂದ ಇಲ್ಲಿ ಜನರ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಸೆರಾ ಕೇರ್ ಎಂದರೆ ವಾರ್ಮ್ ಕೇರ್ ಎನ್ನುವ ಮತ್ತೊಂದು ಮೀನಿಂಗ್ ಬರುತ್ತದೆ. ಈ ಸಂಸ್ಥೆಯಲ್ಲಿ ನೀಡುವುದು ಥರ್ಮಲ್ ಆಕ್ಯೂಪ್ರೆಶರ್ ಥೆರಪಿ, ಇದರ ಮೂಲಕ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಇದೊಂದು ದಕ್ಷಿಣ ಕೊರಿಯಾದ ಸಂಸ್ಥೆ ಆಗಿದೆ, ಅಲ್ಲಿ ಇದು ಶುರುವಾಗಿ 40 ವರ್ಷಗಳಾಗಿದ್ದು ಭಾರತದಲ್ಲಿ 15 ವರ್ಷಗಳಿಂದ ಈ ಸಂಸ್ಥೆಯ ಬ್ರಾಂಚ್ ಗಳು ಕೆಲಸ ಮಾಡುತ್ತಿವೆ. 15 ವರ್ಷಗಳಿಂದಲೂ ಸಹ ಇಲ್ಲಿಗೆ ಬರುವ ರೋಗಿಗಳಿಗೆ ಸಂಪೂರ್ಣವಾಗಿ ಉಚಿತವಾದ ಉತ್ತಮ ಗುಣಮಟ್ಟದ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಪ್ರತಿನಿತ್ಯವು ಚಿಕಿತ್ಸೆಗಿ ಬರುವ ಹಲವು ರೋಗಿಗಳು ಇದ್ದರೂ ಕೂಡ ಅವರಿಂದಲೂ ಸಹ ಒಂದು ರೂಪಾಯಿಯನ್ನು ಇವರು ತೆಗೆದುಕೊಂಡಿಲ್ಲ.

ಏಜ್ ಲಿಮಿಟ್ ಇಲ್ಲದ ಒಂದು ನ್ಯಾಚುರಲ್ ಥೆರಪಿ ಇದಾಗಿದ್ದು ಯಾರು ಯಾವಾಗ ಬೇಕಾದರೂ ಈ ಥೆರಪಿಗೆ ಒಳಗಾಗಬಹುದು. ಇಲ್ಲಿ ಮಾಡಲಾಗುವ ಚಿಕಿತ್ಸೆಗಳಿಗೆ ಬಳಸುವ ಔಷಧ ಅಥವಾ ಮುಖ್ಯ ವಸ್ತು ಯಾವುದು ಎಂದರೆ ಜೇಡ್ಸ್ಟನ್. ಇದನ್ನು ಪಚ್ಚಿಕಲ್ಲು ಎಂದು ಕೂಡ ಕರೆಯುತ್ತಾರೆ. ಪಚ್ಚೆ ಕಲ್ಲನ್ನು 12,000 ವರ್ಷಗಳ ಹಿಂದಿನಿಂದಲೂ ಕೂಡ ಮನುಷ್ಯನ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುವುದಕ್ಕಾಗಿ ಬಳಸುತ್ತಿದ್ದಾರೆ ಎನ್ನುವ ಉಲ್ಲೇಖವು ಕೂಡ ಇದೆ.

ಅದನ್ನೇ ಅಸ್ತ್ರವಾಗಿಸಿಕೊಂಡಿರುವ ಈ ಸಂಸ್ಥೆಯು ಜೇಡ್ ಸ್ಟೋನ್ ಅಥವಾ ಪಚ್ಚೆ ಕಲ್ಲು ಉಪಯೋಗಿಸಿ ನಾನ ರೋಗಗಳಿಗೆ ಥೆರಪಿ ಮಾಡುತ್ತಿದೆ. ಬೆಂಗಳೂರಿನಲ್ಲಿಯೇ ಹಲವು ಕಡೆ ಇದರ ಬ್ರಾಂಚ್ ಇದ್ದು ಕರ್ನಾಟಕದಲ್ಲಿ ಬೆಂಗಳೂರಲ್ಲಿ ಹಲವು ಕಡೆ ಮತ್ತು ರಾಜ್ಯದ ಪ್ರಮುಖ ನಗರಗಳನ್ನು ಕೂಡ ಇದರ ಬ್ರಾಂಚ್ ಗಳು ಇವೆ.

ಬಿಪಿ ಶುಗರ್ ಕಂಟ್ರೋಲಿಗೆ ಬರುವುದರಿಂದ ಹಿಡಿದು ಕ್ಯಾನ್ಸರ್ ಅಂತಹ ಮಾರಣಾಂತಿಕ ಸಮಸ್ಯೆ ಉಳ್ಳವರು, ಸೈನಸ್ ಸಮಸ್ಯೆ ಇರುವವರು, ಕಾಲು ನೋವು, ಮಂಡಿ ನೋವು, ಬೆನ್ನು ನೋವು ಈ ರೀತಿ ನಾನಾ ಸಮಸ್ಯೆ ಇರುವವರು ಕೂಡ ಇಲ್ಲಿಗೆ ಭೇಟಿ ಕೊಟ್ಟು ಚಿಕಿತ್ಸೆ ಪಡೆದು ಆರೋಗ್ಯವನ್ನು ಉತ್ತಮವಾಗಿಸಿಕೊಂಡಿದ್ದಾರೆ. ಕೊರೋನಾ ಬಂದ ಮೇಲೆ ಈ ಸಂಸ್ಥೆಗಳಿಗೆ ಭೇಟಿ ಕೊಡುವ ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತಿದ್ದು ಇತ್ತೀಚೆಗೆ ಎಲ್ಲರೂ ಯಾವುದೇ ಖಾಯಿಲೆಗೆ ಆದರೂ ನ್ಯಾಚುರಲ್ ಥೆರಪಿಗಳಿಗೆ ಒಳಗಾಗಲು ಇಷ್ಟಪಡುತ್ತಿರುವುದರಿಂದ ಸೆರಾ ಕೇರ್ ಹೆಚ್ಚು ಫೇಮಸ್ ಆಗುತ್ತಿದೆ. ವಿಡಿಯೋವನ್ನು ಪೂರ್ತಿಯಾಗಿ ನೋಡುವುದರಿಂದ ಹೆಚ್ಚಿನ ಮಾಹಿತಿ ಸಿಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now