ಹೃದಯಾಘಾತ ತಡೆಗಟ್ಟುವ ಪಾರು ಚುಚ್ಚು ಮದ್ದು ಉಚಿತ, ಆರೋಗ್ಯ ಸಚಿವ ಗುಂಡುರಾವ್ ರಿಂದ ಅಧಿಕೃತ ಘೋಷಣೆ.!

ಪಾಶ್ವವಾಯು ಹಾಗೂ ಹೃದಯಘಾತಕ್ಕೆ ಒಳಗಾದವರನ್ನು ನಿರ್ಲಕ್ಷ ಮಾಡದೆ ತಕ್ಷಣ ಆಸ್ಪತ್ರೆಗೆ ಸಾಗಿಸುವುದು ಬಹಳ ಮುಖ್ಯ. ಅದು ಅವರ ಜೀವನದ ಗೋಲ್ಡನ್ ಟೈಮ್ ಆಗಿರುತ್ತದೆ. ಒಂದು ವೇಳೆ ವಿಳಂಬವಾದರೆ ಪಾಶ್ವವಾಯು ಪೀಡಿತರಾದವರಿಗೆ ಅಂಗಾಂಗ ವೈಫಲ್ಯ ಅಥವಾ ಮ’ರ’ಣ ಉಂಟಾಗುತ್ತದೆ, 90 ನಿಮಿಷಗಳ ಒಳಗೆ ಹೃದಯಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸದೇ ಹೋದರೆ ಅವರು ಕೂಡ ಪ್ರಾಣ ಕಳೆದುಕೊಳ್ಳುತ್ತಾರೆ.

WhatsApp Group Join Now
Telegram Group Join Now

ಹೀಗಾಗಿ ಆಸ್ಪತ್ರೆಗೆ ಸೇರಿಸುವುದು ಮುಖ್ಯ ಆದರೆ ಈ ಸಮಯದಲ್ಲಿ ಆಸ್ಪತ್ರೆಗಳಿಂದ ನೀಡುವ ಚುಚ್ಚುಮದ್ದುಗಳು ಬಹಳ ದುಬಾರಿಯಾಗಿರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯು ನಿರ್ವಹಣೆಗೆ ಅಗತ್ಯವಿರುವ RT ಪ್ಲಸ್ ಚುಚ್ಚುಮದ್ದಿಗೆ 60,000ರೂ. ಹೃದಯಾಘಾತದ ನಿರ್ವಹಣೆಗೆ ನೀಡುವ ಟೆನೆಕ್ಟ್ ಪ್ಲಸ್ ಚುಚ್ಚುಮದ್ದಿಗೆ 40,000ರೂ. ನೀಡಬೇಕು.

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ಆ’ಘಾ’ತವಾಗಿದೆ. ಯಾಕೆಂದರೆ ಈ ಚುಚ್ಚುಮದ್ದುಗಳಿಗೆ ಅವಲಂಬಿಸಬೇಕಾಗಿದೆ. ಇದುವರೆಗೂ ಕೂಡ ಈ ಚುಚ್ಚುಮದ್ದುಗಳನ್ನು ಸರ್ಕಾರಿ ವ್ಯವಸ್ಥೆಯಡಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ಜಯದೇವ ಹೃದ್ರೋಗ ಸಂಸ್ಥೆ ಹೊರತುಪಡಿಸಿದರೆ ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ.

ಈಗ ಆರೋಗ್ಯ ಇಲಾಖೆಯು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಈ ಚುಚ್ಚುಮದ್ದುಗಳನ್ನು ರಾಜ್ಯದ ಎಲ್ಲಾ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸ್ಟೆಮಿ ಅಂದರೆ ಹೃದಯ ಸ್ನಾಯವಿನ ಸೋಂಕು ನಿವಾರಣೆ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

ಈ ಕಾರ್ಯಕ್ರಮದಡಿ ಮುಖ್ಯವಾಗಿ ಪಾರ್ಶ್ವವಾಯು ಹಾಗೂ ಹೃದಯಘಾತದ ಚಿಕಿತ್ಸೆಗೆ ಆದ್ಯತೆ ನೀಡಲಾಗಿದ್ದು ಸರ್ಕಾರದಿಂದ 3.80 ಕೋಟಿ ಅನುದಾನ ದೊರೆತಿದೆ. ಇದರ ಬಗ್ಗೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸಹ ಪತ್ರಿಕ ಹೇಳಿಕೆ ನೀಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ರೋಗಗಳನ್ನು ಪತ್ತೆ ಮಾಡುವ ಜೊತೆಗೆ ಸೂಕ್ತ ಚಿಕಿತ್ಸೆ ಒದಗಿಸುವ ಮುಖ್ಯ.

ಹೀಗಾಗಿ ಉಚಿತವಾಗಿ ಔಷಧ ಹಾಗೂ ಚುಚ್ಚುಮದ್ದು ಒದಗಿಸಲು ಕ್ರಮವಹಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ನಿಮಾನ್ಸ್ ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 70 ರಿಂದ 80 ಸಾವಿರ ಮಂದಿ ಪಾಶ್ವವಾಯು ಪೀಡಿತರಾಗುತ್ತಿದ್ದಾರಂತೆ ಮತ್ತು ರಾಜ್ಯದಲ್ಲಿ ಪ್ರಸ್ತುತವಾಗಿ 6 ಲಕ್ಷ ಮಂದಿಗೆ ಪಾಶ್ವವಾಯು ಚಿಕಿತ್ಸೆ ನಡೆಯುತ್ತಿದೆಯಂತೆ.

1 ಲಕ್ಷ ಪಾಶ್ವ ವಾಯು ಪೀಡಿತರಾದವರಲ್ಲಿ 73 ಮಂದಿ ಗಂಭೀರ ಸಮಸ್ಯೆಗಳಾಗಿ ಮ’ರ’ಣ ಹೊಂದುತ್ತಿದ್ದಾರೆ ಎನ್ನುವ ಅಂಶವನ್ನು ಈ ವರದಿ ತಿಳಿಸುತ್ತದೆ ಹಾಗೆಯೇ ಹೃದಯಘಾತ ಇದಕ್ಕಿಂತ ಗಂಭೀರವಾಗಿದ್ದು ವರ್ಷಕ್ಕೆ 90 ಸಾವಿರ ಮಂದಿ ದಿಢೀರ್ ಹೃದಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ನಿಮಾನ್ಸ್ ವರದಿ ಹೇಳುತ್ತಿದೆ.

ಹಾಗಾಗಿ ಪಾರ್ಶ್ವ ವಾಯು ಅಥವಾ ಹೃದಯಘಾತಕ್ಕೆ ಒಳಗಾದಾಗ ತಕ್ಷಣ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯ. ಆರೈಕೆ ಮತ್ತು ಚಿಕಿತ್ಸೆ ಸರಿಯಾದ ಸಮಯದಲ್ಲಿ ಸಿಕ್ಕರೆ ವ್ಯಕ್ತಿ ಗುಣಮುಖರಾಗುತ್ತಾರೆ ಅದಕ್ಕಾಗಿ ಇಂತಹ ಒಂದು ಕ್ರಮವನ್ನು ಕೈಗೊಳ್ಳಲಾಗಿದೆ ಮುಂದಿನ ತಿಂಗಳ ಇದಕ್ಕೆ ಚಾಲನೆಯು ಸಹ ಸಿಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಮತ್ತೊಂದು ಸಮಾಧಾನಕರ ವಿಷಯವೇನೆಂದರೆ APL, BPL ಭೇದವಿಲ್ಲದೆ ಚುಚ್ಚುಮದ್ದು ಅವಶ್ಯಕತೆ ಇರುವ ಎಲ್ಲರಿಗೂ ಕೂಡ ಸ್ಟೆಮಿ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ಸಿಗಲಿದೆ ಇದಕ್ಕೆ ಸಂಬಂಧಪಟ್ಟ ತಪಾಸಣೆಯನ್ನು ನಡೆಸಿ ವೈದ್ಯರ ಮಾರ್ಗದರ್ಶನದಲ್ಲಿ ಇದು ನಡೆಯುತ್ತದೆ. ನಿಮಾನ್ಸ್ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ಈ ಯೋಜನೆಯಲ್ಲಿ ಕಾರ್ಯಾಚರಣೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now