ಮಧುಮೇಹ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಆದ ಪದ ಎನಿಸಿಬಿಟ್ಟಿದೆ. ಯಾಕೆಂದರೆ ಪ್ರತಿ ಮನೆಮನೆಗಳನ್ನು ಕೂಡ ಸಕ್ಕರೆ ಕಾಯಿಲೆಗೆ ತುತ್ತಾಗಿರುವವರು ಇದ್ದೇ ಇದ್ದಾರೆ. ಭಾರತದಂತಹ ದೇಶದ ಯುವ ಜನತೆಯು ಕೂಡ ತಮ್ಮ 20 25ನೇ ವಯಸ್ಸಿಗೆ ಈ ಡಯಾಬಿಟಿಸ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಇದು ದುರ್ದೈವವಾಗಿದೆಹ ಡಯಾಬಿಟಿಸ್ ಬರುವುದಕ್ಕೆ ತಪ್ಪಾದ ಲೈಫ್ ಸ್ಟೈಲ್ ಅಥವಾ ವಂಶವಾಹಿನಿ ಇನ್ಯಾವುದೇ ಕಾರಣಕ್ಕೂ ಇರಬಹುದು.
ಎಲ್ಲೆಡೆ ಕಾಮನ್ ಆಗಿರುವುದರಿಂದ ಮಾರಣಾಂತಿಕವಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬಹುದು ಆದರೆ ಮಿತಿಮೀರಿದರೆ ಇದರಿಂದಲೂ ಕೂಡ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಅತಿ ಚಿಕ್ಕ ವಯಸ್ಸಿಗೆ ಸಕ್ಕರೆ ಕಾಯಿಲೆಗೆ ತುತ್ತಾದವರು ಇದನ್ನು ತಗ್ಗಿಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಮಾತ್ರೆ ಇನ್ಸುಲಿನ್ ಮಾತ್ರ ಇದಕ್ಕೆ ಮಾರ್ಗ ಎಂದು ಅಂದುಕೊಂಡವರಿಗೆ ಈ ಅಂಕಣದಲ್ಲಿ ಒಂದು ಉಪಯುಕ್ತ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಸಕ್ಕರೆ ಕಾಯಿಲೆಗೆ ತುತ್ತಾಗುವುದರಿಂದ ವಿಪರೀತವಾಗಿ ಸುಸ್ತಾಗುತ್ತದೆ ನೆನಪಿನ ಶಕ್ತಿ ಕುಂದುತ್ತದೆ ಕೈ ಕಾಲುಗಳ ಸೆಳೆತ ಸ್ನಾಯುಗಳ ಸೆಳೆತ ಫಂಗಲ್ ಇನ್ಫೆಕ್ಷನ್ ಇನ್ನು ಮುಂತಾದ ಅನೇಕ ಸಮಸ್ಯೆಗಳು ಕಾಡುತ್ತವೆ. ಸಕ್ಕರೆ ಕಾಯಿಲೆ ಇರುವವರು ಚಪಾತಿ ತಿನ್ನುವುದರಿಂದ ಶುಗರ್ ಲೆವೆಲ್ ಕಂಟ್ರೋಲ್ ಗೆ ಬರುತ್ತದೆ ಎನ್ನುವ ಭ್ರಮೆ ಹಲವರಿಗಿದೆ.
ಕಾರ್ಬೋಹೈಡ್ರೇಟ್ಸ್ ಮತ್ತು ಇನ್ನಿತರ ಪೋಷಕಾಂಶಗಳ ವಿಷಯದಲ್ಲಿ ಅಕ್ಕಿ ಹಾಗೂ ಈ ಗೋಧಿ ಒಂದೇ ರೀತಿ ಇದೆ ಆದ್ದರಿಂದ ಇದೊಂದು ಭ್ರಮೆ ಅಷ್ಟೇ ಎಂದು ವೈದ್ಯರು ಬೇಡ ಖಂಡಿತವಾಗಿ ಹೇಳುತ್ತಿದ್ದಾರೆ. ನೀವು ಯಾವುದೇ ಔಷಧಿ ಸೇವಿಸದೆ ಈಗ ನಾವು ಹೇಳುವ ಈ ಆಹಾರ ಪದ್ಧತಿಯನ್ನು ಪಾಲಿಸಿದರೆ ಸಾಕು ನಿಮ್ಮ ಶುಗರ್ ಲೆವೆಲ್ ಕಂಟ್ರೋಲ್ ಗೆ ತರಬಹುದು.
● ವಿಟಮಿನ್ B12 ಶುಗರ್ ಲೆವೆಲ್ ಕಂಟ್ರೋಲ್ ಮಾಡುವುದಕ್ಕೆ ಇರುವ ಮೆಡಿಸಿನ್. ಇದನ್ನು ಮಾತ್ರೆ ರೂಪದಲ್ಲಿ ತೆಗೆದುಕೊಳ್ಳುವುದರ ಬದಲು ನ್ಯಾಚುರಲ್ ಆಗಿ ಆಹಾರದ ರೂಪದಲ್ಲಿ ತೆಗೆದುಕೊಳ್ಳಬೇಕು. ಎಲ್ಲಾ ರೀತಿಯ ನಾನ್ ವೆಜ್ ಆಹಾರದಲ್ಲಿ ಕೂಡ ವಿಟಮಿನ್ ಬಿ12 ಇರುತ್ತದೆ. ವೆಜಿಟೇರಿಯನ್ ಗಳು ಮಜ್ಜಿಗೆ ಅಥವಾ ಮಜ್ಜಿಗೆ ಅನ್ನ ಸೇವಿಸಬಹುದು. ರಾತ್ರಿ ಮಾಡಿದ ಅನ್ನವನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನುವುದರಿಂದ ಕೂಡ ವಿಟಮಿನ್ B12 ಸಿಗುತ್ತದೆ.
● ವಿಟಮಿನ್ ಡಿ ಕೂಡ ಮುಖ್ಯ, ಇದನ್ನು ನೈಸರ್ಗಿಕವಾಗಿ ಪಡೆದುಕೊಳ್ಳಲು ದಿನದಲ್ಲಿ 15 ರಿಂದ 20 ನಿಮಿಷ ಸೂರ್ಯನ ಬೆಳಕಿಗೆ ಒಡ್ಡಿಕೊಂಡರೆ ಸಾಕು ಇದು ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತದೆ. ಚರ್ಮದ ಸೋಂಕಿನ ನಿವಾರಣೆ ಮಾಡುತ್ತದೆ ಹಾಗಾಗಿ ದಿನದಲ್ಲಿ ಅರ್ಧ ಗಂಟೆಯಾದರೂ ಸೂರ್ಯನ ಬೆಳಕಿಗೆ ಹಾಗೂ ಬಿಸಿಲಿಗೆ ಮೈ ಒಡ್ಡಿ.
● ವಿಟಮಿನ್ ಸಿ ಹೇರಳವಾಗಿರುವ ನಿಂಬೆಹಣ್ಣು, ಮೂಸಂಬಿ, ಕಿತ್ತಾಳೆ, ನೆಲ್ಲಿಕಾಯಿ ಇವುಗಳನ್ನು ಕೂಡ ಸೇವಿಸಬೇಕು. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ರಕ್ತವು ಪ್ಯೂರಿಫೈ ಆಗುತ್ತದೆ ಹೀಗೆ ನಿರಂತರವಾಗಿ ಪಾಲಿಸುವುದರಿಂದ ಶುಗರ್ ಲೆವೆಲ್ ಕೂಡ ಕಂಟ್ರೋಲ್ ಗೆ ಬರುತ್ತದೆ.
● ಒಮೆಗಾ ತ್ರೀ ಫ್ಯಾಟಿ ಆಸಿಡ್ ಇದು ಕೂಡ ಉತ್ತಮವಾದ ಔಷಧಿಯಾಗಿದೆ. ಶುಗರ್ ಬಂದಾಗ ಉಂಟಾಗುವ ಬುದ್ಧಿಶಕ್ತಿ ಸಂಬಂಧಿತ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ.
● ಮೆಗ್ನೀಷಿಯಂ ಕೂಡ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತದೆ. ಮೆಗ್ನಿಷಿಯಂ ನ್ನು ನಾವು ಹಸಿರು ಸೊಪ್ಪು ತರಕಾರಿಗಳಲ್ಲಿ ಹೇರಳವಾಗಿ ಪಡೆಯಬಹುದು. ಮೆಗ್ನೀಷಿಯಂ ಸೇವನೆಯಿಂದ ಶುಗರ್ ಪೇಷಂಟ್ ಗಳಲ್ಲಿ ಉಂಟಾಗುವ ಕಾಲುಗಳು ಸೇರಿದ ಪಾದಗಳ ಅಡಿಯ ನೋವು ಮುಂತಾದ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತದೆ.