ರೈತರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ ಅಕಾಲಿಕ ಮಳೆ ಅಥವಾ ಮಳೆಯ ಕೊರತೆ, ಸಾಲದ ಹೊರೆ, ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆ, ಇನ್ನು ಇತ್ಯಾದಿ ಇತ್ಯಾದಿ ಸಮಸ್ಯೆಗಳ ಜೊತೆ ಗ್ರಾಮೀಣ ಭಾಗದಲ್ಲಿ ಕುಟುಂಬಸ್ಥರಿಂದ ಅಥವಾ ಗ್ರಾಮಸ್ಥರಿಂದ ಏರ್ಪಡುವ ಕೆಲವೊಂದು ಸಮಸ್ಯೆಗಳು ಕೂಡ ಇವೆ.
ಗ್ರಾಮೀಣ ಭಾಗದ ರೈತರುಗಳಿಗೆ ಇರುವ ಸಮಸ್ಯೆಗಳಲ್ಲಿ ಒಂದು ಪ್ರಮುಖವಾದ ಸಮಸ್ಯೆ ಏನೆಂದರೆ ಅವರ ಜಮೀನಿಗೆ ಹೋಗಲು ಕಾಲು ದಾರಿ ಹಾಗೂ ಬಂಡಿ ದಾರಿ ಇಲ್ಲದೆ ಇರುವುದು. ಗ್ರಾಮ ನಕ್ಷೆಯಲ್ಲಿ ತೋರಿಸಿರುವ ಮಾರ್ಗದ ಪ್ರಕಾರ ಹೋದರೂ ಕೂಡ ಕೆಲವೊಮ್ಮೆ ಖಾಸಗಿ ರೈತರುಗಳ ಜಮೀನನ್ನು ದಾಟಿ ಹೋಗಬೇಕಾಗುತ್ತದೆ.
ಅಕ್ಕ ಪಕ್ಕದ ರೈತರ ಜೊತೆ ಸಂಬಂಧ ಉತ್ತಮವಾಗಿದ್ದಾಗ ಇದು ಚೆನ್ನಾಗಿರುತ್ತೆ ಆದರೆ ಊರು ಎಂದ ಮೇಲೆ ಸಣ್ಣ ಪುಟ್ಟ ಮನಸ್ಸು ಏರ್ಪಡುವುದು ಮಾಮೂಲಿ ಅಂತ ಸಮಯದಲ್ಲಿ ಇದನ್ನೇ ದೊಡ್ಡದಾಗಿ ಮಾಡಿಕೊಂಡು ತನ್ನ ಜಮೀನಿನಿಂದ ಹಿಂದಕ್ಕೆ ಹೋಗುವ ರೈತನಿಗೆ ಜಮೀನಿನ ಮೇಲೆ ದಾರಿ ಕೊಡುವುದಿಲ್ಲ ಎಂದು ರೈತ ಆ ದಾರಿಯಲ್ಲಿ ಮುಚ್ಚಿಬಿಡುತ್ತಾನೆ.
ಅನೇಕ ಸಂದರ್ಭಗಳಲ್ಲಿ ಜಮೀನು ವಿಭಾಗವಾದಾಗ ಅಣ್ಣ-ತಮ್ಮಂದಿರ ನಡುವೆಯೂ ಇಂತಹ ಮನಸ್ತಾಪ ಏರ್ಪಡುತ್ತದೆ. ಇದರಿಂದ ರೈತನು ತನ್ನ ಕೃಷಿ ಭೂಮಿಗೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು, ಆಳು ಕಾಳುಗಳನ್ನು ಕರೆದುಕೊಂಡು ಹೋಗಲು ಅಥವಾ ಬೆಳೆದ ಬೆಳೆಯನ್ನು ಮಾರಾಟಕ್ಕೆ ಮಾಡಲು ಸಾಧ್ಯವಾಗದೆ ಬಹಳ ತೊಂದರೆ ಅನುಭವಿಸುತ್ತಾನೆ.
ಇಂತಹ ಸಂದರ್ಭಗಳಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಇಲ್ಲಸಲ್ಲದ ಸಮಸ್ಯೆಗೆ ಸಿಲುಕಿಕೊಂಡು ಗಲಾಟೆ ಮಾಡಿಕೊಂಡು ಮಿತಿ ಮೀರಿದಾಗ ಹೊಡೆದಾಟಗಳು ಕೂಡ ನಡೆದು ವಿನಾಕಾರಣ ಕೋರ್ಟ್ ಕಚೇರಿ ಅಲೆಯಬೇಕಾಗಿ ಬರುತ್ತದೆ. ಇದು ಕ್ಷುಲ್ಲಕ ಕಾರಣವಾದರೂ ಪರಿಣಾಮ ಅತ್ಯಂತ ಕೆಟ್ಟದ್ದು. ಇದಕ್ಕೊಂದು ಕಾನೂನು ಇದ್ದರೆ ಸರಿಹೋಗುತ್ತದೆ ಎನ್ನುವುದು ಅನೇಕರ ಅಭಿಪ್ರಾಯ
ಇಂತಹ ಸಮಸ್ಯೆಗಳಿಗೆ ಸಿಲುಕಿದ್ದ ರೈತರಿಗೆ ಈಗ ಸರ್ಕಾರದ ವತಿಯಿಂದ ಅಭಯ ಹಸ್ತ ಸಿಕ್ಕಿದೆ. ಅದೇನೆಂದರೆ ತಹಶೀಲ್ದಾರ್ ಗಳು ನಕಾಶೆಯಲ್ಲಿರುವಂತೆ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ಬಳಸಲು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಕ್ರಮ ವಹಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಕೃಷಿ ಭೂಮಿಗೆ ತೆರಳಲು ರೈತರಿಗಿರುವ ಕಾಲುದಾರಿ ಹಾಗೂ ಬಂಡಿದಾರಿಗಳಿಗೆ ಅಡ್ಡಿಪಡಿಸುವಂತಹ ವಿರುದ್ದ ಕ್ರಮ ಕೈಗೊಳ್ಳಬೇಕು ಒಂದು ವೇಳೆ ಅದು ಖಾಸಗಿ ಭೂಮಿಯಾಗಿದ್ದರೂ ಕೂಡ ಕೃಷಿ ಭೂಮಿಗೆ ತೆರಳಲು ರೈತನಿಗೆ ಗ್ರಾಮ ನಕ್ಷೆಯಲ್ಲಿರುವ ಪ್ರಕಾರ ದಾರಿ ಬಿಡುವುದು ಕಡ್ಡಾಯ ಇದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯನ್ನು ಹೊರಡಿಸಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಪರವಾಗಿ ಈ ಒಂದು ಸುತ್ತೋಲೆಯನ್ನು ಹೊರಡಿಸಿದ್ದು, ಇದರಿಂದ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಲಕ್ಷಾಂತರ ರೈತರಿಗೆ ಖಂಡಿತವಾಗಿಯೂ ಉಪಯೋಗವಾಗಲಿದೆ. ಈ ಕಾರಣಕ್ಕಾಗಿ ನಷ್ಟ ಹೊಂದುತ್ತಿದ್ದ ರೈತನು ಇನ್ನು ಮುಂದೆ ನಿಶ್ಚಿಂತೆಯಾಗಿ ಇರಬಹುದಾಗಿದೆ. ಒಂದು ವೇಳೆ ಈ ರೀತಿಯ ಸಮಸ್ಯೆ ಎದುರಾದಾಗ ತಪ್ಪದೆ ಸಂಬಂಧ ಪಟ್ಟ ಇಲಾಖೆಗಳಿಗೆ ಹೋಗಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದು, ತಪ್ಪದೇ ಈ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆಗೆ ಶೇರ್ ಮಾಡಿ.