Laptop
ಕರ್ನಾಟಕದಲ್ಲಿರುವ ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ತಯಾರಾಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಅಗತ್ಯ ಪರಿಕರವಾಗಿರುವ ಲ್ಯಾಪ್ಟಾಪ್ ದೊರಕದೆ ತೊಂದರೆ ಆಗದಂತೆ ನೆರವಾಗುವ ಉದ್ದೇಶದಿಂದ ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಮೀಸಲಾತಿ ವರ್ಗದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡುತ್ತಿದೆ.
ಇತ್ತೀಚಿನ ದಿನದಲ್ಲಿ ಡಿಜಿಟಲ್ ವಿಚಾರದಲ್ಲಿ ಕ್ರಾಂತಿ ಆಗುತ್ತಿರುವುದರಿಂದ ಹಣಕಾಸಿನ ತೊಂದರೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ತಾಂತ್ರಿಕ ಶಿಕ್ಷಣದಿಂದ ಹಿಂದುಳಿಯಬಾರದು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ಹಾಗಾಗಿ ಸರ್ಕಾರವು ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2024 ಈ ಯೋಜನೆಯ ಮೂಲಕ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತಿರ್ಣವಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡುವ ನಿರ್ಧಾರಕ್ಕೆ ಬಂದಿದೆ.
ಈ ಯೋಜನೆ ಅಡಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕೆಲವೊಂದು ನಿಬಂಧನೆಗಳು ಇದ್ದು, ಅರ್ಹತಾ ಮಾನದಂಡಗಳು ಕೂಡ ಇವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ದ್ವಿತೀಯ ಪಿಯುಸಿಯಲ್ಲಿ 75% ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಈ ಅನುಕೂಲತೆ ಸಿಗಲಿದೆ.
● ದ್ವಿತೀಯ ಪಿಯುಸಿ ಮುಗಿದ ನಂತರ ಪದವಿ, ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸುಗಳು ಪಾಲಿಟೆಕ್ನಿಕ್ ಕೋರ್ಸ್ ಗಳಿಗೆ ದಾಖಲಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
● https://dce.karnataka.gov.in ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
● ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಲ ಪ್ರಮುಖ ವೈಯಕ್ತಿಕ ವಿವರಗಳು ಮತ್ತು ಪೂರಕ ದಾಖಲೆಗಳನ್ನು ಒದಗಿಸಬೇಕು.
ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2024 ಅರ್ಜಿ ಸಲ್ಲಿಸುವ ವಿಧಾನ:–
● ಮೊದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಅಲ್ಲಿ ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2023 ಗೆ ಅರ್ಜಿ ಸಲ್ಲಿಸಲು ಗೂಗಲ್ ಗೆ ಹೋಗಿ https://dce.karnataka.gov.in ಎಂದು ಸರ್ಚ್ ಮಾಡಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
● ನಂತರ ಹೋಮ್ ಪೇಜ್ ಅಲ್ಲಿ ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2023 ಎನ್ನುವುದರ ಮೇಲೆ ಕ್ಲಿಕ್ ಮಾಡಿ.
● ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2023 ಅರ್ಜಿ ನಮೂನೆ ಅನ್ನು ಡೌನ್‌ಲೋಡ್ ಮಾಡಲು ಇರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
● ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2023 ಗಾಗಿ ಅರ್ಜಿ ನಮೂನೆಯನ್ನು ಪಡೆದ ನಂತರ ಅಲ್ಲಿ ಅರ್ಜಿ ಸಲ್ಲಿಸಲು ಕೇಳಿರುವ ಮಾಹಿತಿಗಳನ್ನು ಫಿಲ್ ಮಾಡಿ, ಮತ್ತು ಕೇಳಲಾಗುವ ಕೆಲವು ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಎಲ್ಲಾ ವಿವರಗಳನ್ನು ಪುನಃ ಪರಿಶೀಲಿಸಿ ಮತ್ತು ನಂತರ ಅದನ್ನು ಕರ್ನಾಟಕ ಶಿಕ್ಷಣ ಮಂಡಳಿಗೆ ಸಲ್ಲಿಸಿ.
● ಅರ್ಜಿ ಸ್ವೀಕೃತಿ ಆದ ಬಳಿಕ ಭವಿಷ್ಯದ ಬಳಕೆಗಾಗಿ ಆ ಫಾರಂ ಅನ್ನು ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಂದ ಕೇಳಲಾಗುವ ಕೆಲವು ಪ್ರಮುಖ ದಾಖಲೆಗಳು:-
● ಅರ್ಜಿದಾರರನು ಕರ್ನಾಟಕದ ನಿವಾಸಿ ಎನ್ನುವುದಕ್ಕೆ ನಿವಾಸ ಪ್ರಮಾಣ ಪತ್ರ
● ಅರ್ಜಿದಾರರ ಆಧಾರ್ ಕಾರ್ಡ್
● ಅರ್ಜಿದಾರರ ಬ್ಯಾಂಕ್ ವಿವರ
● ಜಾತಿ ಪ್ರಮಾಣ ಪತ್ರ
● ವಯಸ್ಸಿನ ಪ್ರಮಾಣ ಪತ್ರ
● ಆದಾಯ ಪ್ರಮಾಣ ಪತ್ರ
● ಶೈಕ್ಷಣಿಕ ಪ್ರಮಾಣ ಪತ್ರಗಳು
● ದ್ವಿತೀಯ ಪಿಯುಸಿ ಬಳಿಕ ಮುಂದಿನ ತರಗತಿಗೆ ದಾಖಲಾಗಿರುವ ಬಗ್ಗೆ ಪುರಾವೆ
● ಇನ್ನಿತ್ಯಾದಿ ದಾಖಲೆಗಳು