ಮಹಿಳೆಯರಿಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಯಾವುದೇ ದಂಡವಿಲ್ಲ, ಸರ್ಕಾರದ ಈ ಗುಡ್ ನ್ಯೂಸ್ ಹಿಂದಿರುವ ಅಸಲಿಯತ್ತು ಏನು ಗೊತ್ತಾ? ಮಾರ್ಚ್ ಮಾಸಾಂತ್ಯದಲ್ಲಿ ಎಲ್ಲೆಡೆ ಬಾರಿ ಚರ್ಚೆ ಆದ ವಿಷಯ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎನ್ನುವುದು. ಭಾರತದ ಎಲ್ಲಾ ಪ್ಯಾನ್ ಕಾರ್ಡ್ ಹೊಂದಿರುವ ನಾಗರಿಕರು ಕಡ್ಡಾಯವಾಗಿ ಮಾರ್ಚ್ 31ರ ಒಳಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲೇಬೇಕು ಇಲ್ಲವಾದಲ್ಲಿ ಅಂತಹವರ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎನ್ನುವ ವಿಚಾರ ಭಾರಿ ಚರ್ಚೆ ಆಯಿತು.
ಸರ್ಕಾರ 2017ರಲ್ಲಿ ಇಂತಹ ಆದೇಶ ಹೊರಡಿಸಿ ಮೂರು ವರ್ಷಗಳ ಕಾಲ ಇದಕ್ಕೆ ಉಚಿತ ಕಾಲಾವಕಾಶ ಕೂಡ ನೀಡಿತ್ತು, ಆದರೆ ಜನರು ಇದರ ಬಗ್ಗೆ ಬಹಳ ನಿರಾಸಕ್ತಿ ತೋರದ ಕಾರಣ ಅಂತಿಮವಾಗಿ ಇಂತಹ ಒಂದು ದಂಡ ಅಸ್ತ್ರವನ್ನು ಪ್ರಯೋಗಿಸಲೇ ಬೇಕಾಯಿತು. ಹಾಗಾಗಿ ಮಾರ್ಚ್ 31, 2023ರ ಒಳಗೆ 1000ರೂ ದಂಡ ಸಮೇತ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲೇಬೇಕು ಎನ್ನುವ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿತು.
ಪಾನ್ ಕಾರ್ಡ್ ಪ್ರಮುಖ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ ಅದರಲ್ಲೂ ಆದಾಯ ತೆರಿಗೆ ಇಲಾಖೆ ನೀಡುವ ಈ ಗುರುತಿನ ಚೀಟಿ ಇಲ್ಲದಿದ್ದರೆ ಖಾಸಗಿ ವಲಯದಲ್ಲೇ ಆಗಲಿ ಅಥವಾ ಸರ್ಕಾರಿ ವಲಯದ್ದೇ ಆಗಲಿ ಯಾವ ಆರ್ಥಿಕ ಚಟುವಟಿಕೆಗಳು ಕೂಡ ಜರುಗುವುದಿಲ್ಲ. ಆದಾಯ ತೆರಿಗೆ ಇಲಾಖೆಗೆ ವಂಚಿಸುವವರನ್ನು ಸುಲಭವಾಗಿ ಪತ್ತೆ ಹಚ್ಚಲು ಸರ್ಕಾರ ಈ ರೀತಿಯ ಒಂದು ನಿಯಮ ಜಾರಿಗೆ ತರಲೇಬೇಕಾದದ್ದು ಅನಿವಾರ್ಯ ಆಗಿತ್ತು.
ಆದರೆ ಜನ ಕೊನೆ ಸಮಯದಲ್ಲಿ ಇದಕ್ಕೆ ತಿರುಗಿಬಿದ್ದ ಕಾರಣ ಜೊತೆಗೆ ಕೊನೆಯಲ್ಲಿ ತಂತ್ರಜ್ಞಾನದ ಸಮಸ್ಯೆ ಉಂಟಾದ ಕಾರಣ ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಂಡು ಸರ್ಕಾರವು ಮತ್ತೆ ಜೂನ್ ಮೂವತ್ತರವರೆಗೆ 1000 ರೂ ತಂಡ ಸಮೇತ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಯೋಜನೆಯ ಗಡುವನ್ನು ವಿಸ್ತರಿಸಿದೆ.
ಇದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸುದ್ದಿ ಹರಿದಾಡಿ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಯಾಕೆಂದರೆ ಮಾನ್ಯ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರೇ ಸುದ್ದಿಗೋಷ್ಠಿ ನಡೆಸಿದಾಗ ಸ್ಪಷ್ಟವಾಗಿ ಇದುವರೆಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದ ಎಲ್ಲರೂ ಸಹ 1000ರೂ ದಂಡ ಸಮೇತ ಜೂನ್ 30ರ ಅಂತಿಮ ಗಡಿವಿನ ಒಳಗೆ ಮಾಡಿಸಬೇಕು, ಇಲ್ಲವಾದಲ್ಲಿ ದಿನ ಮುಂದೂಡುತ್ತಿದ್ದಂತೆ ದಂಡ ಹೆಚ್ಚಾಗಬಹುದು ಜೊತೆಗೆ ಪಾನ್ ಕಾರ್ಡ್ ಕೂಡ ಅಮಾನ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಮಹಿಳೆಯರಿಗೆ ಉಚಿತವಾಗಿ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಅನುಮತಿ ನೀಡಿದೆ ಇದು ಮಹಿಳೆಯರಿಗೆ ಮಾತ್ರ ನೀಡಿರುವ ಅವಕಾಶ ಎನ್ನುವ ಸುದ್ದಿಗಳು ಶೇರ್ ಆಗುತ್ತಿವೆ. ಈ ರೀತಿ ಯಾವ ಘೋಷಣೆ ಕೂಡ ಸರ್ಕಾರ ಮಾಡಿಲ್ಲ, ಇದು ಒಂದು ಸುಳ್ಳು ಸುದ್ದಿ ಆಗಿದೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಹಲವಾರು ಸುಳ್ಳು ಸುದ್ದಿಗಳ ಜೊತೆ ಇದು ಒಂದು ಸಹ ಸುಳ್ಳು ವದಂತಿ.
ಈ ರೀತಿ ಯಾವುದೇ ನಿರ್ಧಾರ ಸರ್ಕಾರ ಮಾಡಿಲ್ಲ ಎಂದು ಮತ್ತೊಮ್ಮೆ ಸರ್ಕಾರ ಹೇಳಿ ಸ್ಪಷ್ಟಪಡಿಸಿದೆ. ಇಂತಹ ಸುದ್ದಿಗಳಿಗೆ ಗಮನಕೊಡದೆ ನೀವು ಸಹ ಪ್ಯಾನ್ ಕಾರ್ಡ್ ಹೊಂದಿದ್ದರೆ ಜೂನ್ 30, 2023 ರ ಒಳಗೆ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿ ಮತ್ತು ಈ ವಿಷಯ ಹೆಚ್ಚು ಜನರಿಗೆ ತಲುಪುವಂತೆ ಶೇರ್ ಮಾಡಿ.