ಮಾನ್ಯ ಪ್ರಧಾನ್ ಮಂತ್ರಿ ನರೇಂದ್ರ ಮೋದಿ ಅವರು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಮಾಡಿದ್ದಾರೆ. ಅದರಲ್ಲಿ ದೇಶದಾದ್ಯಂತ ಹೆಸರುವಾಸಿ ಆಗಿರುವುದು ಪಿಎಮ್ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಪಿಎಂ ಫಸಲ್ ಭೀಮಾ ಯೋಜನೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ದೇಶದಾದ್ಯಂತ ಇರುವ 14 ಕೋಟಿ ರೈತರಿಗೆ ವಾರ್ಷಿಕವಾಗಿ 6,000ಗಳನ್ನು ಮೂರು ಕಂತುಗಳಲ್ಲಿ ಕೊಡುತ್ತಿದ್ದಾರೆ. ಇದೀಗ ಯಶಸ್ವಿಯಾಗಿ 13ನೇ ಕಂತಿನ ಹಣ ಕೂಡ ರೈತರಿಗೆ DBT ಮೂಲಕ ಜಮೆ ಆಗಿದೆ.
ಈಗ ಇತ್ತೀಚಿಗೆ ಶುರುವಾದ ಪಿಎಮ್ ಫಸಲ್ ಭೀಮಾ ಯೋಜನೆಯ ಫಲಾನುಭವಿಗಳಾಗುವ ಸಮಯ. ಪಿಎಂ ಫಸಲ್ ಭೀಮಾ ಯೋಜನೆ ಎಂದರೆ ಇದೊಂದು ಬೆಳೆ ವಿಮೆ ಆಗಿದೆ. ಇದರಲ್ಲಿ ರೈತ ಬೆಳೆಯುವ ಬೆಳೆಗಳಿಗೆ ಸರ್ಕಾರ ನಿಗದಿ ಮಾಡಿದ ನಿಗದಿತ ಮೊತ್ತದ ಹಣ ವಿಮೆ ಮಾಡಬೇಕಾಗುತ್ತದೆ. ಒಂದು ವೇಳೆ ಬೆಳೆ ಪ್ರಕೃತಿ ವಿಕೋಪದಿಂದ ಹಾಳಾದ ಪಕ್ಷದಲ್ಲಿ ವಿಮೆ ಕ್ಲೈಮ್ ಆಗಿ ರೈತರಿಗೆ ಒಂದು ಕನಿಷ್ಠ ಮೊತ್ತದ ಹಣವನ್ನು DBT ಮೂಲಕ ಅವರ ಖಾತೆಗೆ ಜಮೆ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಕೂಡ ಅನೇಕ ರೈತರುಗಳು ಪಿಎಂ ಫಸಲ್ ಭೀಮಾ ಯೋಜನೆಯ ವಿಮೆ ಖರೀದಿಸಿದ್ದಾರೆ. ಅದರಲ್ಲಿ ಕೆಲವರ ಪಾಲಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ 2022 ಮತ್ತು 23ನೇ ಸಾಲಿನಲ್ಲಿ ಫಸಲ್ ಭೀಮಾ ವಿಮೆ ಮಾಡಿದ್ದ ರೈತರುಗಳ ಖಾತೆಗಳಿಗೆ ಬೆಳೆ ವಿಮೆ ಹಣ ಪಾವತಿ ಆಗಿದೆ. 12 ಏಪ್ರಿಲ್, 2023 ರಂದು ನಮ್ಮ ರಾಜ್ಯದಲ್ಲಿಯೇ ಅನೇಕ ರೈತರುಗಳು ಈ ವಿಮೆ ಹಣ ಪಡೆದಿದ್ದಾರೆ. ಮುಂಗಾರು ಹಂಗಾಮಿನ ಮಳೆ ಆಶ್ರಿತ ಮೆಣಸಿನಕಾಯಿ ಬೆಳೆಗೆ ವಿಮೆ ಮಾಡಿಸಿದ್ದ ರೈತರಿಗೆ 46.33% ರಷ್ಟು ಬೆಳೆ ವಿಮೆ ಕ್ಲೈಂ ಆಗಿದೆ.
ಅಂದರೆ ಎಕೆರೆಗೆ 13,500 ರೂಗಳ ವರೆಗೆ ಬೆಳೆ ವಿಮೆ ಸಿಕ್ಕಿದೆ.
ನೀವು ಸಹ ಮುಂಗಾರು ಹಂಗಾಮಿನ ಬೆಳೆ ಹಾನಿ ಅನುಭವಿಸಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ನಿಮಗೆ ಪಿಎಂ ಫಸಲ್ ಭೀಮಾ ಯೋಜನೆಯ ವಿಮೆ ಕ್ಲೈಮ್ ಆಗಿದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ.
● ಮೊದಲಿಗೆ ಗೂಗಲ್ ಅಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ. ಅಥವಾ https://www.samarakshane.karnataka.gov.in/ ಈ ವೆಬ್ ಸೈಟ್ ಗೆ ಭೇಟಿ ಕೊಡಿ.
● ನಂತರ ವರ್ಷ ಮತ್ತು ಋತುವಿನ ಆಯ್ಕೆ ಮಾಡಿ ವರ್ಷ 2022-23, ಋತು ಮುಂಗಾರು ಅಥವಾ ಖಾರಿಫ್ ಬೆಳೆ ಎಂದು ಫಿಲ್ ಮಾಡಿ ಗೋ ಬಟನ್ ಕ್ಲಿಕ್ ಮಾಡಿ.
● ಓಪನ್ ಆಗುವ ಹೊಸ ಟ್ಯಾಬ್ ನಲ್ಲಿ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಚೆಕ್ ಸ್ಟೇಟಸ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಮುಂದಿನ ಹಂತದಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣುತ್ತವೆ ಪ್ರಪೋಸಲ್ ನಂಬರ್, ಆಧಾರ್ ನಂಬರ್, ಮೊಬೈಲ್ ಸಂಖ್ಯೆ ಇವುಗಳಲ್ಲಿ ಪ್ರಪೋಸಲ್ ನಂಬರ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
● ಅರ್ಜಿ ಸಲ್ಲಿಸಿದ ಅರ್ಜಿ ಸಂಖ್ಯೆಯನ್ನು ಇದರಲ್ಲಿ ನಮೂದಿಸಿ ಕ್ಯಾಪ್ಚಾವನ್ನು ಕೂಡ ಟೈಪ್ ಮಾಡಿ ಸರ್ಚ್ ಬಟನ್ ಕ್ಲಿಕ್ ಮಾಡಿ.
● ಹೀಗೆ ಮಾಡುವ ಮೂಲಕ ನೀವು ಬೆಳೆ ವಿಮೆ ಮಾಡಿಸಿದಂತಹ ಬೆಳಗ್ಗೆ ಎಷ್ಟು ಹಣ ಜಮೆ ಆಗಿದೆ ಎನ್ನುವುದನ್ನು ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು.