ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸದ್ಯಕ್ಕೆ ಈಗ ಉಚಿತವಾಗಿ ದೇಶದ ಎಲ್ಲ BPL ಮತ್ತು AAY ಪಡಿತರ ಚೀಟಿದಾರರು ಉಚಿತವಾಗಿ ಪಡಿತರ ಪಡೆಯುತ್ತಿದ್ದಾರೆ. ಅಕ್ಕಿ, ಗೋಧಿ, ರಾಗಿ ನೀಡಿ ದೇಶದ ನಾಗರಿಕರ ಹಸಿವು ತಣಿಸುತ್ತಿದೆ ಸರ್ಕಾರಗಳು. ಭಾರತ ಆಹಾರ ನಿಗಮದ ಪ್ರಕಾರ ಕಾಲ ಕಾಲಕ್ಕೆ ಅನುಗುಣವಾಗಿ ಪಡಿತರ ಚೀಟಿ ಬಗ್ಗೆ ನಾನಾ ಸುಧಾರಣೆಗಳನ್ನು ತರಲಾಗುತ್ತಿದೆ.
ಸದ್ಯಕ್ಕೀಗ ಪಡಿತರ ಚೀಟಿಯಲ್ಲಿ ಇರುವ ಎಲ್ಲಾ ಸದಸ್ಯರು ಆಧಾರ್ ಕಾರ್ಡನ್ನು ಪಡಿತರ ಚೀಟಿ ಜೊತೆಲಿಂಕ್ ಮಾಡಬೇಕು ಎನ್ನುವುದಕ್ಕೆ ಸರ್ಕಾರಗಳು ಆದೇಶ ನೀಡಿ ಶೀಘ್ರದಲ್ಲೇ ಪೂರ್ತಿಕೊಳ್ಳಬೇಕು ಎಂದು ಎಚ್ಚರಿಕೆಯನ್ನು ನೀಡಿದೆ. ಇದರ ಜೊತೆ ಮತ್ತೊಂದು ಸುದ್ದಿ ಎಲ್ಲಾ ಕಡೆ ಹಬ್ಬಿದೆ. ಅದೇನೆಂದರೆ ಇನ್ನು ಮುಂದೆ ಪಡಿತರ ಚೀಟಿಯಲ್ಲಿ ಕೊಡುತ್ತಿದ್ದ ಉಚಿತ ಪಡಿತರದ ಬದಲು ಕುಟುಂಬದಲ್ಲಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಒಂದಷ್ಟು ಮೊತ್ತದ ಹಣವನ್ನು ಪಡಿತರ ಚೀಟಿ ದಾರರಿಗೆ ಕೊಡಲಾಗುವುದು ಎಂದು.
ಅರ್ಥ ಪ್ರಕಾರ ವ್ಯಕ್ತಿಗೆ 9,000 ರೂಗಳನ್ನು ಕೊಡುತ್ತಾರೆ ಎನ್ನುವ ಮಾತುಗಳು ಇವೆ. ಆದರೆ ಇದಕ್ಕೆ ಸಂಬಂಧಪಟ್ಟ ಹಾಗೆ ಸ್ಪಷ್ಟನೆಗಳು ಇಲ್ಲ, ಒಂದು ವೇಳೆ ಸರ್ಕಾರ ಏನಾದರೂ ಇಂತಹ ಯೋಜನೆಯನ್ನು ಜಾರಿಗೊಳಿಸಿದರೆ ಪಡಿತರ ಚೀಟಿ ಹೊಂದಿರುವ ಮುಖ್ಯಸ್ಥರ ಖಾತೆಗೆ ಆ ಹಣ ಬರುತ್ತದೆ. ಈಗ ಎಲ್ಲಾ ಪಡಿತರ ಚೀಟಿಯು ಕೂಡ ಆ ಕುಟುಂಬದ ಯಜಮಾನೀಯ ಹೆಸರಿನಲ್ಲಿ ಇರುತ್ತದೆ. ಆದ ಕಾರಣ ಅವರ ಬ್ಯಾಂಕ್ ಖಾತೆಗೆ DBT ಮೂಲಕ ಸರ್ಕಾರ ಕೊಡುವ ಈ ಹಣ ತಲುಪಲಿದೆ.
ಒಂದು ವೇಳೆ ಅವರು ಬ್ಯಾಂಕ್ ಖಾತೆ ಹೊಂದಿಲ್ಲ ಎಂದರೆ ಈ ಕೂಡಲೇ ಬ್ಯಾಂಕ್ ಖಾತೆ ತೆರೆಯುವಂತೆ ಪ್ರೋತ್ಸಾಹಿಸಬೇಕು. ಆ ವೇಳೆಗಾಗಲೇ ಯೋಜನೆ ಜಾರಿಗೆ ಬಂದಿದ್ದರೆ ಅವರ ಹೆಸರಿನಲ್ಲಿ ಖಾತೆ ಇಲ್ಲ ಎನ್ನುವ ಕೆಲವು ದಿನಗಳವರೆಗೆ ವಿನಾಯಿತಿ ಮೇರೆಗೆ ತಹಶೀಲ್ದಾರರ ಅನುಮತಿ ಜೊತೆ ಕುಟುಂಬದ ಬೇರೆ ಸದಸ್ಯರ ಖಾತೆಗೆ ಸ್ವಲ್ಪ ಕಾಲದವರೆಗೂ ಹಣ ಮಂಜೂರು ಮಾಡುವ ಅನುಮತಿ ಸಿಗಬಹುದು.
ಜೊತೆಗೆ ಈ ಯೋಜನೆಯಲ್ಲಿ ಸದಸ್ಯರ ಸಂಖ್ಯೆ ಮೇರೆಗೆ ಹಣ ನೀಡುವುದರಿಂದ ಒಂದು ಕಾರ್ಡಲ್ಲಿ ಎಷ್ಟು ಸದಸ್ಯರು ಇದ್ದಾರೆ, ಅವರ ಆಧಾರದ ಮೇಲೆ ಮುಖ್ಯಸ್ಥರ ಖಾತೆಗೆ ಹಣ ಹೋಗುತ್ತದೆ. ಹಾಗಾಗಿ ಕಡ್ಡಾಯವಾಗಿ ಎಲ್ಲ ಸದಸ್ಯರು ಕೂಡ ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಿಸಲೇಬೇಕಾಗುತ್ತದೆ. ಸದ್ಯಕ್ಕೆ ಸರ್ಕಾರ ಕೈಗೊಂಡಿರುವ ಈ ಯೋಜನೆಯ ಫಲಾನುಭವಿಗಳಾಗಲು ಆಧಾರ್ ಸಂಖ್ಯೆಯನ್ನು RCMS ವ್ಯವಸ್ಥೆಗೆ ನೀಡಬೇಕಾಗುತ್ತದೆ.
ಲಿಂಕ್ ಮಾಡಿದ ಫಲಾನುಭವುಗಳಿಗೆ ಮಾತ್ರ ಯೋಜನೆ ಲಭ್ಯವಿರುತ್ತದೆ. ಆದ್ದರಿಂದ ಈ ಕೂಡಲೇ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಕೂಡ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು. ರಾಜ್ಯದಲ್ಲೂ ಕೂಡ ಇಂತಹದೊಂದು ಯೋಜನೆ ಜಾರಿಗೆ ಬರುವ ಬಗ್ಗೆ ಬಾರಿ ಮಾತುಗಳಿದ್ದು, ಒಂದು ವೇಳೆ ಜಾರಿಗೆ ಈ ಯೋಜನೆಗೆ ಅರ್ಜಿಯನ್ನು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಕೂಡ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ನೋಂದಾಯಿತ ಅರ್ಹ ಪಡಿತರ ಚೀಟಿದಾರರು ಅರ್ಜಿ ಫಾರಂ ಫಿಲ್ ಮಾಡುವುದರ ಜೊತೆಗೆ ಅಗತ್ಯವಾಗಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇಂತಹ ಒಂದು ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.