ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ಕಾರ ಕಳೆದ ವರ್ಷವೇ ನಿಯಮ ಮಾಡಿತ್ತು. ಡಿಸೆಂಬರ್ 2023ರ ವರೆಗೆ ಇದಕ್ಕೆ ಅವಕಾಶ ನೀಡಿತ್ತಾದರೂ ಜನರಿಗೆ ಮಾಹಿತಿ ಕೊರತೆ ಇದೆ ಎನ್ನುವ ಕಾರಣಕ್ಕಾಗಿ 1000ರೂ. ದಂಡ ಸಮೇತ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮಾರ್ಚ್ 31 ಅಂತಿಮ ಗಡುವಾಗಿ ನೀಡಿತ್ತು.
ಇನ್ನು ಸಹ ಅನೇಕರು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವುದನ್ನು ಮನಗಂಡು ಜೊತೆಗೆ ಈಗ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಸರ್ವರ್ ಸಮಸ್ಯೆ ಎದುರಾಗುತ್ತಿರುವುದನ್ನು ಪರಿಗಣಿಸಿ ಜೊತೆಗೆ ಕಡೆ ದಿನಗಳಲ್ಲಿ ತೀರ ವಿಪರೀತವಾಗಿ ಜನಾಕ್ರೋಶ ಕಂಡು ಬಂದಿದ್ದನ್ನು ಗಮನಿಸಿ ಸರ್ಕಾರವು ಮತ್ತೊಮ್ಮೆ ಜನರಿಗೆ ತಮ್ಮ ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮೂರು ತಿಂಗಳ ಹೆಚ್ಚಿನ ಸಮಯವನ್ನು ನೀಡಿದೆ.
ಆ ಪ್ರಕಾರವಾಗಿ ಜೂನ್ 30ನೇ ತಾರೀಖಿನವರೆಗೆ ಆಧಾರ್ ಕಾರ್ಡನ್ನು ಪಾನ್ ಕಾರ್ಡ್ ಜೊತೆ ಲಿಂಕ್ ಮಾಡಲು ಸರ್ಕಾರದಿಂದ ಮತ್ತೊಮ್ಮೆ ಕಾಲಾವಕಾಶ ವಿಸ್ತರಿಸಿದೆ. ಆದರೆ ಈ ಕುರಿತು ಸಾಕಷ್ಟು ಊಹಾಪೋಹದ ಸುದ್ದಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಾರ್ಚ್ 31ರವರೆಗೆ 1000ರೂ ದಂಡ ಸಮೇತ ಲಿಂಕ್ ಮಾಡಲು ಸರ್ಕಾರ ಹೇಳಿತ್ತು.
ಆದರೆ ಈಗ ಈ ಮೂರು ತಿಂಗಳಲ್ಲಿ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವವರಿಗೆ ಉಚಿತವಾಗಿ ಈ ಸೇವೆ ಸಿಗಲಿದೆ ಎಂದು ಸುದ್ದಿಗಳು ಹರಿದಾಡಿದ್ದವು. ಇದರ ಬಗ್ಗೆ ಅಧಿಕೃತವಾಗಿ ಕೇಂದ್ರ ಸರ್ಕಾರವೇ ಸ್ಪಷ್ಟನೆ ಕೊಟ್ಟಿದೆ. ಸರ್ಕಾರ ಹೇಳಿರುವ ಪ್ರಕಾರ ಈಗಾಗಲೇ 51 ಕೋಟಿಗು ಹೆಚ್ಚು ಪಾನ್ ಕಾರ್ಡ್ ಗಳು ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿದೆಯಂತೆ ಆದರೆ ಇನ್ನೂ ಹೆಚ್ಚಿನ ಜನರು ಬಾಕಿ ಉಳಿಸಿಕೊಂಡಿರುವುದರಿಂದ ಅವರಿಗೆ ಜೂನ್ 30ರವರೆಗೆ ಅವಕಾಶ ನೀಡಲಾಗಿದೆಯಂತೆ.
ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯ ರೀತಿ ಬಗ್ಗೆ ಆದಾಯ ತೆರಿಗೆ ಇಲಾಖೆ ಆಗಲಿ ಸರ್ಕಾರವೇ ಆಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಈಗ ಅವಧಿಯನ್ನು ಹೆಚ್ಚಿಗೆ ನೀಡಿದ್ದೇವೆ ಹೊರತು ದಂಡದಲ್ಲಿ ಯಾವುದೇ ವಿನಾಯಿತಿ ಇಲ್ಲ. ಈಗಲೂ ಸಹ ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಿಸುರವವರು 1000ರೂ ದಂಡ ಸಮೇತವಾಗಿ ಲಿಂಕ್ ಮಾಡಿಸಿಕೊಳ್ಳಬೇಕು ಯಾವುದೇ ರೀತಿಯ ಸುಳ್ಳು ಸುದ್ದಿಗಳಿಗೆ ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಹೇಳಿದೆ.
ಪ್ಯಾನ್ ಕಾರ್ಡ್ ಈಗ ಒಂದು ಪ್ರಮುಖ ಆಧಾರವಾಗಿದೆ. ಅದರಲ್ಲೂ ಆರ್ಥಿಕ ಚಟುವಟಿಕೆ ನಡೆಯಬೇಕು ಎಂದರೆ ಪಾನ್ ಕಾರ್ಡ್ ಮಾನ್ಯವಾಗಿರಲೇಬೇಕು. ಒಂದು ವೇಳೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಹಾಗದೆ ಹೋದರೆ ಅಂತಹ ಕಾರ್ಡ್ ಗಳು ಜೂನ್ 30ರ ಬಳಿಕ ನಿಷ್ಕ್ರಿಯಗೊಳ್ಳಲಿದೆ.
ಜೂನ್ 30 ರ ನಂತರ ನೀವು ಯಾವುದೇ ಆರ್ಥಿಕ ಚಟುವಟಿಕೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹೂಡಿಕೆಯಿಂದ ಬ್ಯಾಂಕ್ ಖಾತೆ ತೆರೆಯುವವರೆಗೂ ಕೂಡ ಪಾನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿ ಬೇಕೇ ಬೇಕು. ಹಾಗಾಗಿ ಈ ಕೂಡಲೇ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಮತ್ತು ಈ ಉಪಯುಕ್ತ ಮಾಹಿತಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೂ ಕೂಡ ಹಂಚಿಕೊಳ್ಳಿ.