ರಾಜ್ಯ ಸರ್ಕಾರದ ನೂತನ ಯೋಜನೆ ಕರ್ನಾಟಕದಲ್ಲಿ ಉಚಿತ ವಿದ್ಯುತ್ ಯೋಜನೆ ಇನ್ನೂ ಮುಂದೆ ಪ್ರತಿ ಮನೆಗೆ ಸಿಗಲಿದೆ ಉಚಿತ ವಿದ್ಯುತ್. ಈ ಯೋಜನೆ ಪಡೆಯೋದು ಹೇಗೆ ನೋಡಿ.

ರಾಜ್ಯ ಸರ್ಕಾರವು ತನ್ನ ನೂತನ ಯೋಜನೆಗಳನ್ನು ಆಗಾಗ ರೂಪಿಸುತ್ತದೆ ಅಂತಹ ಒಂದು ಯೋಜನೆಗಳಲ್ಲಿ ಈಗ ಉಚಿತವಾಗಿ 75 ಯೂನಿಟ್ ನಷ್ಟು ವಿದ್ಯುತ್ತನ್ನು ನೀಡುವುದಾಗಿ ಘೋಷಣೆ ಮಾಡಲಾಗಿದೆ. ತಿಂಗಳಿಗೆ 75 ಯೂನಿಟ್ ನಷ್ಟು ವಿದ್ಯುತ್ ಉಚಿತವಾಗಿ ನೀವು ಪಡೆದುಕೊಳ್ಳಬಹುದಾಗಿದೆ ಹಾಗಾದರೆ ಈ ಒಂದು ಯೋಜನೆ ಅಡಿ ವಿದ್ಯುತ್ತನ್ನು ಪಡೆದುಕೊಳ್ಳಲು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

WhatsApp Group Join Now
Telegram Group Join Now

ನಾವಿಲ್ಲಿ ತಿಳಿಸುವಂತಹ ದಾಖಲಾತಿಗಳನ್ನು ನೀವು ಒಳಗೊಂಡಿದ್ದರೆ ಖಂಡಿತವಾಗಿಯೂ 75 ಯೂನಿಟ್ ನಷ್ಟು ವಿದ್ಯುತ್ ನಿಮಗೆ ಫ್ರೀಯಾಗಿ ದೊರೆಯುತ್ತದೆ. ಯಾವೆಲ್ಲ ದಾಖಲಾತಿಗಳು ಎಂದು ನೋಡುವುದಾದರೆ ಬಿಪಿಎಲ್ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್ ಹಾಗೆ ನೀವು ಸ್ವಂತ ಮನೆ ಅಥವಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೀರ ಎನ್ನುವಂತಹ ಮಾಹಿತಿ.

ಮೇಲೆ ತಿಳಿಸಿದಂತಹ ಎಲ್ಲಾ ದಾಖಲಾತಿಗಳ ಜೆರಾಕ್ಸ್ ಪ್ರತಿಗಳು ನಿಮ್ಮ ಹತ್ತಿರ ಇರಬೇಕಾಗುತ್ತದೆ. ಈ ಯೋಜನೆಯ ಲಾಭವನ್ನು ಬಡವರು ಪಡೆದುಕೊಳ್ಳಬಹುದಾಗಿದೆ ಅಂದರೆ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಈ ಒಂದು ಯೋಜನೆ ಅನ್ವಯವಾಗುತ್ತದೆ. ಗೃಹಬಳಕೆಗಾಗಿ 75 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆಯನ್ನು ಮಾಡಲಾಗಿದೆ.

ಈ ಯೋಜನೆ ಮೊದಲು ಸಹ ಹೊರಡಿಸಿದ್ದ ಆದೇಶದಲ್ಲಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವಂತಹ ಕುಟುಂಬಗಳಿಗೆ ಯೋಜನೆ ಅನ್ವಯವಾಗುತ್ತದೆ ಎಂದು ತಿಳಿಸಲಾಗಿತ್ತು. ನಗರ ಪ್ರದೇಶದಲ್ಲಿ ವಾಸವಾಗಿರುವಂತಹ ಜನರಿಗೂ ಸಹ ಈ ಒಂದು ಯೋಜನೆ ಅನ್ವಯವಾಗುತ್ತದೆ.

ಯೋಚನೆಯ ಲಾಭವನ್ನು ಪಡೆದುಕೊಳ್ಳುವಂತಹ ಬಳಕೆದಾರರು ಆ ತಿಂಗಳ ಒಟ್ಟಾರೆ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ಪಾವತಿಸಿರಬೇಕು ಬಿಲ್ ಪಾವತಿಸಿದ ನಂತರ ಬಿಲ್ಲಿನ ಒಟ್ಟಾರೆ ಬಳಕೆ ವಿದ್ಯುತ್ ಪ್ರಮಾಣದಲ್ಲಿ 75 ಯೂನಿಟ್ ಗಳ ವಿದ್ಯುತ್ ಶುಲ್ಕದ ಮೊತ್ತವನ್ನು ಮರಳಿ ಗ್ರಾಹಕರಿಗೆ ನೇರ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಅಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣದ ಮೊತ್ತವನ್ನು ಪಾವತಿಸಲಾಗುತ್ತದೆ.

ಕೆಲವೊಂದು ಷರತ್ತುಗಳು ಸಹ ಅನ್ವಯವಾಗುತ್ತದೆ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದ 75 ಯೂನಿಟ್ ಉಚಿತ ಬಿದ್ಯುತ್ ಮರುಪಾವತಿ ಮಾಡುವ ವ್ಯವಸ್ಥೆ 2022ರ ಮೇ ಇಂದ ಜಾರಿಗೆ ಬಂದಿದೆ ವಿದ್ಯುತ್ ಸ್ಥಾವರಗಳಿಗೆ ಮಾಪಕವನ್ನು ಹಾಗೂ ಮೀಟರ್ ರೀಡಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ.

ಈ ಸೌಲಭ್ಯ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ದೃಢೀಕರಣ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ. ಮೇಲೆ ತಿಳಿಸಿದಂತಹ ಎಲ್ಲಾ ದಾಖಲೆಗಳನ್ನು ನೀವು ಒದಗಿಸಿದ ನಂತರ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ವಿದ್ಯುತ್ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯುತ್ ಕಂಪನಿಯ ಉಪ ವಿಭಾಗಕ್ಕೆ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಹಾಯವಾಗುತ್ತದೆ.

ಯಾರೆಲ್ಲ ಬಡವರು ವಿದ್ಯುತ್ ಬಿಲ್ಲನ್ನು ಪಾವತಿ ಮಾಡಲು ಸಾಧ್ಯವಿಲ್ಲವೋ ಅಂತಹವರು ಈ ಯೋಜನೆಯ ಅಡಿಯಲ್ಲಿ ಉಚಿತವಾದಂತಹ ವಿದ್ಯುತ್ ಪಡೆದುಕೊಳ್ಳಲು ಸರ್ಕಾರವು ಅನುವು ಮಾಡಿಕೊಟ್ಟಿದೆ ಯೋಜನೆಯ ಲಾಭವನ್ನು ಪ್ರತಿಯೊಬ್ಬ ಬಡ ಕುಟುಂಬದವರು ಸಹ ಪಡೆದುಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now