ಸರ್ಕಾರದಿಂದ ಭರ್ಜರಿ ಆಫರ್ ಇನ್ನೂ ಮುಂದೆ ರೈತರು ಒಂದು ರೂಪಾಯಿ ಕೂಡ ಕರೆಂಟ್ ಬಿಲ್ ಕಟ್ಟುವಂತಿಲ್ಲ.

 

WhatsApp Group Join Now
Telegram Group Join Now

ರೈತರಿಗೆಲ್ಲಾ ಸಿಹಿಸುದ್ದಿ, ಇನ್ನು ಮುಂದೆ ಒಂದು ರೂಪಾಯಿ ಕೂಡ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ, ಸರ್ಕಾರದಿಂದ ಸಿಗುತ್ತಿದೆ ಈ ಭರ್ಜರಿ ಆಫರ್ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಯ ಕಾವು ಜೋರಾಗಿದೆ. ಈ ಬಾರಿಯ ವಿಧಾನಸಭಾ ಎಲೆಕ್ಷನ್ ಗೆಲ್ಲುವುದಕ್ಕಾಗಿ ಎಲ್ಲಾ ಪಕ್ಷಗಳು ಕೂಡ ಪ್ರಣಾಳಿಕೆಗಳಲ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸುತ್ತಿವೆ.

ಇದೆಲ್ಲದರ ನಡುವೆ ಸರ್ಕಾರ ರೈತರಿಗೆ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ಮನ್ನ ಮಾಡುವುದಾಗಿ ಹೇಳಿರುವ ಈ ಹೊಸ ಯೋಜನೆ ದೇಶದಾದ್ಯಂತ ಇರುವ ಎಲ್ಲ ರೈತರ ಗಮನವನ್ನು ಸೆಳೆಯುತ್ತಿದೆ. ಜೊತೆಗೆ ಇದು ಬರಿ ಭರವಸೆಯಾ ಅಥವಾ ಜಾರಿಗೆ ಬರಲಿದೆಯಾ ಎನ್ನುವ ಅನುಮಾನವನ್ನು ಹಲವು ಜನರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಯೋಜನೆಯನ್ನು ಕೆಲವು ಶರತ್ತುಗಳೊಂದಿಗೆ ರಾಜಸ್ಥಾನದ ಸರ್ಕಾರವು ಜಾರಿಗೆ ಮಾಡಿದೆ.

ರಾಜಸ್ಥಾನದ ಈ ಅರ್ಹತೆಗಳನ್ನು ಹೊಂದಿರುವ ರೈತರುಗಳ ಮಾತ್ರ ಯೋಜನೆಯ ಫಲಾನುಭವಿಗಳಾಗಿ ಅವರ ಬಳಸುವ ವಿದ್ಯುತ್ ಅನ್ನು ಸಂಪೂರ್ಣವಾಗಿ ಉಚಿತ ಪಡೆಯಬಹುದು. ಈಗಷ್ಟೇ, ಉತ್ತರ ಪ್ರದೇಶ ರಾಜ್ಯದಲ್ಲಿ ರೈತರಿಗಾಗಿ ಬಿಜಲಿ ಬಿಲ್ ಮಾಫಿ ಯೋಜನೆ ಜಾರಿಗೆ ತರಲಾಗಿತ್ತು. ಉತ್ತರ ಪ್ರದೇಶದ ಸಹಸ್ರಾರು ರೈತರುಗಳು ಇದರ ಫಲಾನುಭವಿಗಳಾಗಿ ಉಪಯೋಗ ಪಡೆದುಕೊಂಡಿದ್ದರು.

ಅದೇ ಬೆನ್ನಲ್ಲಿ ರಾಜಸ್ಥಾನ ಸರ್ಕಾರವು ಕೂಡ ಇಂತಹ ಒಂದು ಮಹಾನ್ ಕಾರ್ಯಕ್ಕೆ ಜೈ ಎಂದಿದೆ. ರಾಜಸ್ಥಾನದ ರೈತರುಗಳಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸುವ 2000 ಯೂನಿಟ್ ವರೆಗಿನ ವಿದ್ಯುತ್ತನ್ನು ಸಂಪೂರ್ಣ ಉಚಿತವಾಗಿ ನೀಡಲಿದೆ. ಇದಕ್ಕಾಗಿ ಅವರು ಒಂದು ರೂಪಾಯಿ ಕೂಡ ವಿದ್ಯುತ್ ದರ ಪಾವತಿ ಮಾಡುವ ಅಗತ್ಯ ಇಲ್ಲ. ರಾಜಸ್ತಾನ ರಾಜ್ಯದ 14 ಲಕ್ಷ ರೈತರಿಗೆ ಇದು ಅನುಕೂಲ ಆಗಲಿದೆ.

ಇದರೊಂದಿಗೆ ಡೊಮೆಸ್ಟಿಕ್ ಬಳಕೆದಾರರಿಗೂ ಕೂಡ ಸರ್ಕಾರ ವಿದ್ಯುತ್ ಬಿಲ್ ಪಾವತಿ ವಿಚಾರದಲ್ಲಿ ವಿನಾಯಿತಿ ನೀಡಿದೆ. ಡೊಮೆಸ್ಟಿಕ್ ಬಳಕೆದಾರರು 100 ಯೂನಿಟ್ ವರೆಗೆ ಬಳಕೆ ಮಾಡುವ ವಿದ್ಯುತ್ ಗೆ ಯಾವುದೇ ಬಿಲ್ ಪಾವತಿಸುವುದಿಲ್ಲ ಅದು ಸಂಪೂರ್ಣ ಉಚಿತವಾಗಿದೆ. ಇದು ರಾಜ್ಯದ 1.04 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ರಾಜಸ್ಥಾನ ಸರ್ಕಾರದ ಊರ್ಜಾ ಮಿತ್ರ ಯೋಜನೆ ಅಡಿಯಲ್ಲಿ ಈ ಘೋಷಣೆ ಮಾಡಿದ್ದು ರಾಜಸ್ಥಾನದ ಜನತೆ ಈ ಯೋಜನೆ ಘೋಷಣೆ ಕೇಳಿ ಸಂತಸ ಪಟ್ಟಿದ್ದಾರೆ.

ಆದರೆ ಇದಕ್ಕೆ ಕೆಲ ನಿಬಂಧನೆಗಳು ಕೂಡ ಇವೆ. ಮುಖ್ಯವಾಗಿ ರಾಜಸ್ಥಾನದ ಉರ್ಜಾ ಮಿತ್ರ ಯೋಜನೆ ಪಡೆಯಲು ಇಚ್ಚಿಸುವ ರೈತರುಗಳು ಇದುವರೆಗೆನ ಸಂಪೂರ್ಣ ವಿದ್ಯುತ್ ಬಿಲ್ಲನ್ನು ಕಟ್ಟಿರಬೇಕು. ಯಾರು ಪ್ರತಿ ತಿಂಗಳು ತಪ್ಪದೆ ತಮ್ಮ ವಿದ್ಯುತ್ ಬಿಲ್ ಕಟ್ಟಿಕೊಂಡು ಬಂದಿರುತ್ತಾರೆ ಅಂತವರು ಸುಲಭವಾಗಿ ಯೋಜನೆಯ ಫಲಾನುಭವಿಗಳಾಗಬಹುದು.

ಒಂದು ವೇಳೆ ವಿದ್ಯುತ್ ಬಾಕಿ ಇದ್ಓಕರೂ ಕೂಡ ಮಾರ್ಚ್ ತಿಂಗಳ ವಿದ್ಯುತ್ ಬಿಲ್ ವರೆಗೆ ಬಾಕಿ ಇರುವ ಸಂಪೂರ್ಣ ವಿದ್ಯುತ್ ಪಾವತಿ ಮಾಡಿದ ಪಕ್ಷದಲ್ಲಿ ಅಂತವರು ಕೂಡ ಊರ್ಜಾ ಮಿತ್ರ ಯೋಜನೆಯ ಪಾಲುದಾರರಾಗಿದ್ದಾರೆ. ಈ ಯೋಜನೆಗಳನ್ನು ಫಲಾನುಭವಿಕಾಳಾಗಲು ರೈತರು ಹತ್ತಿರದಲ್ಲಿರುವ ವಿದ್ಯುತ್ ಪ್ರಸರಣ ನಿಗಮ ಅಥವಾ ವಿದ್ಯುತ್ ಇಲಾಖೆ ಕಚೇರಿಗೆ ಹೋಗಿ ಅರ್ಜಿ ಪಡೆದು ಅರ್ಜಿ ಸಲ್ಲಿಸಬೇಕು.

ಈ ಸಂದರ್ಭದಲ್ಲಿ ಅವರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ ,ವಿದ್ಯುತ್ ಬಿಲ್ ಪಾವತಿ ಮಾಡಿರುವ ಕಡೆ ತಿಂಗಳ ರಶೀತಿ, ಜಮೀನಿಗೆ ವಿದ್ಯುತ್ ಬಳಕೆ ಮಾಡುತ್ತಿರುವುದರ ಬಗ್ಗೆ ಸಂಬಂಧಪಟ್ಟ ಧೃಡೀಕರಣ ಪ್ರಮಾಣ ಪತ್ರ ಇವುಗಳನ್ನು ದಾಖಲೆಗಳಾಗಿ ಕೊಡಬೇಕು. ಹೆಚ್ಚಿನ ವಿವರಗಳಿಗಾಗಿ ವಿದ್ಯುತ್ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now