ಕೃಷಿ ಭೂಮಿ ಇರುವ ಎಲ್ಲಾ ರೈತರಿಗೂ ಉಚಿತ ಸೋಲಾರ್ ಪ್ಯಾನಲ್ & ಪಂಪ್ ಸೆಟ್ ವಿತರಣೆ ಮಾಡುತ್ತಿದ್ದಾರೆ ಈ ಸೌಲಭ್ಯ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

 

WhatsApp Group Join Now
Telegram Group Join Now

ರಾಜ್ಯದ ಎಲ್ಲಾ ರೈತರ ಜಮೀನಿಗೆ ಉಚಿತ ಸೋಲಾರ್ ಪ್ಯಾನೆಲ್ ಗಳು ಅರ್ಜಿ ಸಲ್ಲಿಸುವುದು ಹೇಗೆ ನೋಡಿ ರಾಜ್ಯದಾದ್ಯಂತ ಎಲ್ಲ ರೈತರಿಗೂ ಕೂಡ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿ ಬೆಸ್ಕಾಂ ಸರ್ಕಾರದ ಯೋಜನೆ ಒಂದರ ಅಡಿಯಲ್ಲಿ ಸಹಾಯಕ್ಕೆ ಬರುತ್ತಿದೆ. ರೈತರು ಮಳೆ ಆಶ್ರಿತ ವ್ಯವಸಾಯ ಮಾಡುವುದರಿಂದ ಆದಾಯ ಕಡಿಮೆ ಸಿಗುತ್ತಿದೆ, ಎಲ್ಲರಿಗೂ ಸಹ ಪಂಪ್ ಸೆಟ್ ಸೌಲಭ್ಯ ಇದ್ದಿದ್ದರೆ ಹೆಚ್ಚಿನ ಆದಾಯ ಬರುವ ಬೆಳೆಗಳನ್ನು ವರ್ಷದ ಯಾವ ಕಾಲದಲ್ಲಿ ಬೇಕಾದರೂ ಬೆಳೆದು ರೈತರ ಉತ್ತಮ ಬದುಕು ಕಟ್ಟಿ ಕೊಳ್ಳಬಹುದಿತ್ತು.

ಸರ್ಕಾರವು ಸಹ ಈ ರೀತಿ ಬೋರ್ವೆಲ್ ಕೊರೆಸಿ ಪಂಪ್ಸೆಟ್ ಮಾಡಿಕೊಳ್ಳುವ ರೈತರಿಗೆ ಸಹಾಯಧನಗಳ ಮೂಲಕ ಸಬ್ಸಿಡಿಗಳ ಮೂಲಕ ಕೆಲವೊಂದು ವರ್ಗದವರಿಗೆ ಉಚಿತವಾಗಿ ಬೋರ್ವೆಲ್ ಕೊರೆಸಿಕೊಡುವ ಮೂಲಕ ಸಹಾಯ ಮಾಡುತ್ತಿದೆ. ಜೊತೆಗೆ ವಿದ್ಯುತ್ ಶಕ್ತಿ ಸರಬರಾಜು ಮಾಡುವಲ್ಲೂ ಕೂಡ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಇಷ್ಟಿದ್ದರೂ ಕೂಡ ಎಲ್ಲ ರೈತರಿಗೂ ಅವರ ಜಮೀನಿನಲ್ಲಿ ಪಂಪ್ಸೆಟ್ ಇದ್ದರು ವಿದ್ಯುತ್ ಶಕ್ತಿಗೆ ಸರಬರಾಜಿಗೆ ಬೇಕಾದ ವಿದ್ಯುತ್ ಕಂಬಗಳ ವ್ಯವಸ್ಥೆ ಇಲ್ಲದಿರುವುದರಿಂದ ಬಹಳ ತೊಂದರೆ ಆಗುತ್ತಿದೆ.

ನಮ್ಮ ರಾಜ್ಯದಲ್ಲಿಯೇ ಅನೇಕ ರೈತರುಗಳಿಗೆ ತಮ್ಮ ಜಮೀನುಗಳಲ್ಲಿ ವಿದ್ಯುತ್ ಕಂಬ ಇಲ್ಲದೆ ಇರುವುದು ಭಾರಿ ಸಮಸ್ಯೆ ಆಗಿದೆ. ಇದನ್ನೆಲ್ಲ ಮನಗಂಡಿರುವ ಸರ್ಕಾರ ವಿದ್ಯುತ್ ಬದಲಾಗಿ ಸೌರಶಕ್ತಿ ಬಳಕೆಯಿಂದ ಕೃಷಿ ಮಾಡುವುದಕ್ಕೆ ಉತ್ತೇಜನ ಕೊಡುತ್ತಿದೆ. ತಮ್ಮ ಜಮೀಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಇದ್ದಲ್ಲಿ, ನಿರಾಸೆ ಹೊಂದುವ ಬದಲು ಸೋಲಾರ್ ಪ್ಯಾನೆಲ್ ಮಾಡಿಸಿಕೊಂಡು ವಿದ್ಯುತ್ ಶಕ್ತಿ ಬಳಸಿ ಏನೆಲ್ಲಾ ಕೆಲಸ ಮಾಡುತ್ತಿದ್ದರು ಅದೆಲ್ಲವನ್ನು ಕೂಡ ಸೌರಶಕ್ತಿ ಬಳಸಿ ಮಾಡಬಹುದು. ಜೊತೆಗೆ ವಿದ್ಯುತ್ ಶಕ್ತಿ ವ್ಯತ್ಯಯ ಆಗುವುದರಿಂದ ಸಮಸ್ಯೆ ಅನುಭವಿಸುತ್ತಿದ್ದ ರೈತರಿಗೆ ಕೂಡ ಸೌರಶಕ್ತಿ ಪ್ಯಾನಲ್ ಗಳ ಅಳವಡಿಕೆ ಹೆಚ್ಚು ಅನುಕೂಲ ತರಲಿದೆ.

ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್ಸೆಟ್‌ಗಳನ್ನು ನೀಡಲಾಗುತ್ತಿದೆ. ವಿದ್ಯುತ್ ಶಕ್ತಿ ಪೂರೈಕೆ ಇಲ್ಲದ ಕೃಷಿ ಪ್ರದೇಶಗಳಿಗೆ ಸೌರ ಚಾಲಿತ ಕೃಷಿ ಪಂಪ್ಸೆಟ್ಗಳನ್ನು ಅಳವಡಿಸಲು ಆದ್ಯತೆ ನೀಡಲಾಗಿದೆ. ಈಗ ರಾಜ್ಯದ ವಿದ್ಯುತ್ ಪ್ರಸರಣ ನಿಗಮವು ಕೂಡ ರೈತರ ಜೊತೆ ಕೈಜೋಡಿಸುತ್ತಿದೆ. ರಾಜ್ಯದಲ್ಲಿ ವಿದ್ಯುತ್ ಶಕ್ತಿ ಪೂರೈಕೆ ಮಾಡಲಾಗದ ಪ್ರದೇಶಗಳಲ್ಲಿ ಪಂಪ್ ಸೆಟ್ ಮಾಡಿ ಬೆಳೆ ತೆಗೆಯಲು ಆಸಕ್ತಿ ಇರುವ ರೈತರ ಗಳಿಗೆ ಉಚಿತ ಸೋಲಾರ್ ಪ್ಯಾನೆಲ್ ನಿರ್ಮಾಣ ಮಾಡಿ ಕೊಡುವ ಯೋಜನೆ ಕೈಗೆತ್ತಿಕೊಂಡಿದೆ.

ರಾಜ್ಯದ 2,60,000 ರೈತರುಗಳಿಗೆ ನೀರು ಎತ್ತುವ ಕೆಲಸದಿಂದ ಹಿಡಿದು ವಿದ್ಯುತ್ ಶಕ್ತಿ ಮಾಡುತ್ತಿದ್ದ ಎಲ್ಲಾ ಕೆಲಸಗಳಿಗೂ ಇನ್ನು ಮುಂದೆ ಸೌರಶಕ್ತಿಯನ್ನೇ ಬಳಸಿಕೊಂಡು ಆ ಕೆಲಸಗಳನ್ನು ಮಾಡಿಕೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಅಂದರೆ ಬೆಸ್ಕಾಂ, ಶೀಘ್ರದಲ್ಲಿಯೇ ರಾಜ್ಯಾದ್ಯಂತ 2.6 ಲಕ್ಷ ರೈತರ ನೀರಾವರಿ ಭೂಮಿಗಳಿಗೆ ಶಕ್ತಿಯನ್ನು ತುಂಬಲು ಸೌರ ಶಕ್ತಿಯನ್ನು ಬಳಸಿಕೊಳ್ಳಲಿದೆ. ಪ್ರಧಾನಮಂತ್ರಿ ಕಿಸಾನ್ ಉರ್ಜ ಸುರಕ್ಷಾ ಎವಾಂ ಉತ್ತಾನ್ ಮಹಭಿಯಾನ್ ಯೋಜನೆ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಸಬ್ ಸ್ಟೇಷನ್ ಮಟ್ಟದಲ್ಲಿ ಗ್ರಿಡ್ ಸಂಪರ್ಕಿತ ವಿತರಣ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಏಜೆನ್ಸಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಆಸಕ್ತ ರೈತರು ಕೂಡ ಈ ಯೋಜನೆಯ ಫಲಾನುಭವಿಗಳಾಗಲು ನೋಂದಣಿ ಮಾಡಿಕೊಳ್ಳಬಹುದಾಗಿದೆ ವಿಶೇಷ ಚೇತನ ರೈತರಿಗೆ ಮೊದಲ ಆದ್ಯತೆ ಇದ್ದು ಈ ಯೋಜನೆಗಾಗಿ ಪಾವತಿ ಮಾಡಬೇಕಾದ ಕಡಿಮೆ ಮೊತ್ತದ ವಂತಿಕೆಯಲ್ಲಿ ಅವರಿಗೆ ರಿಯಾಯಿತಿ ಇದೆ. ಅವರನ್ನು ಹೊರತು ಪಡಿಸಿ ಉಳಿದ ಎಲ್ಲಾ ರೈತರು ಸರ್ಕಾರ ನಿಗದಿ ಮಾಡಿದ ವಂತಿಕೆ ಮೊತ್ತವನ್ನು ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕು. KREDL ಅಧಿಕೃತ ಜಾಲತಾಣ www.kredl.kar.gov.co.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now