ಈಗಾಗಲೇ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಎಲೆಕ್ಷನ್ ವೇಳಾಪಟ್ಟಿಯು ಪ್ರಕಟ ಆಗಿದೆ. ಇದರೊಂದಿಗೆ ಚುನಾವಣಾ ಆಯೋಗವು 2023ರಲ್ಲಿ ಮತದಾನ ಮಾಡಲಿರುವ ಎಲ್ಲ ಮತದಾರರ ಹೆಸರಿನ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಇದನ್ನು ನೀವು ಕುಂತಲ್ಲಿಯೇ ನಿಮ್ಮ ಮೊಬೈಲ್ ಮುಖಾಂತರ ಚೆಕ್ ಮಾಡಿ ತಿಳಿದುಕೊಳ್ಳಬಹುದು.
ನೀವೇನಾದರೂ ಈ ವರ್ಷ 18 ವರ್ಷ ಪೂರೈಸಿ ಹೊಸದಾಗಿ ಮತದಾನದ ಚೀಟಿ ಪಡೆದುಕೊಂಡು ಮೊದಲ ಬಾರಿಗೆ ಮತದಾನ ಮಾಡಲು ತಯಾರಾಗಿದ್ದರೆ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ನೀವು ಪರೀಕ್ಷಿಸಿಕೊಳ್ಳಬಹುದು ಅಥವಾ ನಿಮ್ಮ ಹೆಸರು ಕೈಬಿಟ್ಟು ಹೋಗಿದೆ ಎನ್ನುವ ಅನುಮಾನಗಳಿದ್ದರೆ ಅದರ ಸಲುವಾಗಿ ಕೂಡ ಈ ವಿಧಾನದ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.
ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಅಲ್ಲಿ ಮೊದಲು ಗೂಗಲ್ ಗೆ ಹೋಗಿ ನಂತರ CEO ಕರ್ನಾಟಕ ಎಂದು ಟೈಪ್ ಮಾಡಿ, ಅಲ್ಲಿ ನಿಮಗೆ ಚೀಫ್ ಎಲೆಕ್ಟ್ರಾಲ್ ಆಫೀಸರ್ ಕರ್ನಾಟಕ ಎನ್ನುವ ವೆಬ್ಸೈಟ್ ಸಿಗುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಆಫೀಷಿಯಲ್ ವೆಬ್ಸೈಟ್ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅಲ್ಲಿ ಓಪನ್ ಆಗುತ್ತದೆ. ನೀವು ಕನ್ನಡ ಅಥವಾ ಇಂಗ್ಲಿಷ್ ಯಾವ ಭಾಷೆಯಲ್ಲಿ ಬೇಕಾದರೂ ಈ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಬಹುದು.
ಎರಡು ಭಾಷೆಯಲ್ಲೂ ಮಾಹಿತಿ ಲಭ್ಯವಿದೆ. ಈ ಅಫಿಶಿಯಲ್ ವೆಬ್ಸೈಟ್ ಓಪನ್ ಮಾಡಿದಾಗ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಎನ್ನುವ ಇಂಟರ್ಫೇಸ್ ಓಪನ್ ಆಗುತ್ತದೆ. ಅದರಲ್ಲೂ ಹಲವಾರು ಆಯ್ಕೆಗಳು ತೆರೆದುಕೊಳ್ಳುತ್ತವೆ. ಅಂತಿಮ ಮತದಾರರ ಪಟ್ಟಿ 2023, ಕರಡು ಮತದಾರರ ಪಟ್ಟಿ, ಹಕ್ಕು ಮತ್ತು ಆಕ್ಷೇಪಣೆ ಗಳ ಪಟ್ಟಿ, ಮತದಾರರ ಪಟ್ಟಿ ಸೇರ್ಪಡೆ ಅಥವಾ ತೆಗೆದು ಹಾಕಿರುವ ಮತ್ತು ತಿದ್ದುಪಡಿ ಮಾಡಿರುವ ಮತದಾರರ ಪಟ್ಟಿ, ಕರಡು ಮತ್ತು ಅಂತಿಮ ಮತದಾರ ಪಟ್ಟಿ 2022, ಅರ್ಜಿ ನಮೂನೆಗಳು ಈ ರೀತಿ ಹಲವು ಆಯ್ಕೆಗಳು ತೆಗೆದುಕೊಳ್ಳುತ್ತವೆ.
ಅದರಲ್ಲಿ ನೀವು ಅಂತಿಮ ಮತದಾರರ ಪಟ್ಟಿ 2023 ಇದನ್ನು ಕ್ಲಿಕ್ ಮಾಡಿ. ಈ ರೀತಿ ಕ್ಲಿಕ್ ಮಾಡಿದಾಗ ಸ್ಕ್ರೀನ್ ಮೇಲೆ ನಮ್ಮ ಕರ್ನಾಟಕದ ಎಲ್ಲ ಜಿಲ್ಲೆಗಳ ಹೆಸರುಗಳು ಕೂಡ ಆಪ್ಷನ್ ಗಳಾಗಿ ತೋರಿಸಲಾಗುತ್ತದೆ. ಇರಲಿ ನೀವು ಯಾವ ಜಿಲ್ಲೆಗೆ ಸೇರಿದ್ದೀರಾ ಆ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ. ಜಿಲ್ಲೆಯನ್ನು ಆಯ್ಕೆ ಮಾಡಿದ ಮೇಲೆ ಆ ಜಿಲ್ಲೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ತೋರಿಸುತ್ತದೆ.
ನಿಮ್ಮ ವಿಧಾನಸಭಾ ಕ್ಷೇತ್ರದ ಹೆಸರಿನ ಮೇಲೆ ಕ್ಲಿಕ್ ಮಾಡಿ. ನಂತರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಪೋಲಿಂಗ್ ಬೂತ್ ಗಳ ಲಿಸ್ಟ್ ಇರುತ್ತದೆ. ಚೆಕ್ ಮಾಡಿ ನೀವು ಪೋಲಿಂಗ್ ಮಾಡುವ ಬೂತ್ ಯಾವ ಶಾಲೆ ಅಥವಾ ಸರ್ಕಾರಿ ಆಫೀಸು ಬರುತ್ತದೆ ಎನ್ನುವುದನ್ನು ಆಯ್ಕೆ ಮಾಡಿ ಅದರ ಪಕ್ಕ ಇರುವ MR ಎನ್ನುವುದನ್ನು ಕ್ಲಿಕ್ ಮಾಡಿ ಆಗ ಒಂದು ಕ್ಯಾಪ್ಚ ಬರುತ್ತದೆ.
ಆ ಕ್ಯಾಪ್ಚದಲ್ಲಿರುವ ಅಕ್ಷರಗಳನ್ನು ಅದರ ಅನುಸಾರವಾಗಿ ನಮೂದಿಸಿ ಡೌನ್ಲೋಡ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಮೊಬೈಲ್ ಅಲ್ಲಿ ಒಂದು ಡೌನ್ಲೋಡ್ ಆಗಿರೋ ಫೈಲ್ ಓಪನ್ ಆಗುತ್ತದೆ. ಅದರಲ್ಲಿ ಪೋಲಿಂಗ್ ಬೂತ್ ಫೋಟೋ ಸಮೇತ ಅಂತಿಮ ಮತದಾರ ಪಟ್ಟಿ ಲಿಸ್ಟ್ ಕೂಡ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದು.