ಇತ್ತೀಚೆಗೆ ಎಲ್ಲಾ ಆರ್ಥಿಕ ವ್ಯವಹಾರಗಳು ಕೂಡ ಬ್ಯಾಂಕ್ ಖಾತೆ ಮೂಲಕವೇ ನಡೆಯುತ್ತಿದೆ. ಅದರಲ್ಲೂ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ಮೇಲಂತೂ ಜನ ಹಣದ ವಹಿವಾಟಿಗಿಂತ ಬ್ಯಾಂಕ್ ಖಾತೆ ಮುಖಾಂತರವೇ ಆನ್ಲೈನಲ್ಲಿ ಆರ್ಥಿಕ ವಹಿವಾಟು ನಡೆಸುತ್ತಿರುವುದು ಹೆಚ್ಚಾಗಿದೆ. ಒಂದು ರೀತಿಯಲ್ಲಿ ಇದು ದೇಶ ಉನ್ನತಿಯತ್ತ ಮುಂದೆ ನಡೆಯುತ್ತಿದೆ, ಜನಸಾಮಾನ್ಯರು ಕೂಡ ಈಗ ಬ್ಯಾಂಕ್ ವ್ಯವಹಾರ ಕಲಿಯುತ್ತಿದ್ದಾರೆ ಎನ್ನುವುದರ ಬಗ್ಗೆ ಖುಷಿಪಟ್ಟುಕೊಳ್ಳುವ ಸಂಗತಿ.
ಈಗ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವುದಕ್ಕೂ, ಹಾಗೆಯೇ ರೈತರು ತಮ್ಮ ಯೋಜನೆಗಳ ಫಲಾನುಭವದ ಹಣ ಪಡೆಯಲು, ವೃದ್ಧರು ವೃದ್ಯಾಪ್ಯ ವೇತನ ಪಡೆಯಲು ಹೀಗೆ ದೇಶದ ಎಲ್ಲರಿಗೂ ಕೂಡ ಬ್ಯಾಂಕ್ ಖಾತೆ ಕಡ್ಡಾಯವಾಗಿ ಬೇಕಾಗಿದೆ. ಇತ್ತೀಚೆಗೆ ಬ್ಯಾಂಕ್ ಖಾತೆ ಹೊಂದುವುದು ಪ್ರಮುಖ ಆಧಾರ ಆಗಿದ್ದರೂ ಕೂಡ ನಮ್ಮಲ್ಲಿ ಅನೇಕ ಜನರಿಗೆ ಬ್ಯಾಂಕ್ ವ್ಯವಹಾರದ ಬಗ್ಗೆ ಕೆಲವು ಪ್ರಮುಖ ಮಾಹಿತಿಯ ಕೊರತೆ ಇದೆ. ಇದರಿಂದ ಅವರು ಬ್ಯಾಂಕ್ ನಲ್ಲಿ ಹಣ ಇಡಲು ಹೋಗಿ ತಮ್ಮ ಹಣವನ್ನು ಕಳೆದುಕೊಂಡಿರುವ ಉದಾಹರಣೆಗಳಿವೆ.
ಒಂದು ಸಮೀಕ್ಷೆ ಪ್ರಕಾರ ಯಾವುದೇ ಬ್ಯಾಂಕ್ ಖಾತೆಯಲ್ಲಿ ಆದರೂ 5 ಲಕ್ಷಕ್ಕಿಂತ ಹೆಚ್ಚು ಹಣ ಇದ್ದಲ್ಲಿ ಅದು ಸೇಫ್ ಅಲ್ಲ, ಜೊತೆಗೆ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನು ಮಾತ್ರ ಹೊಂದಬಹುದು, ಹೆಚ್ಚು ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿರುವುದರಿಂದ ಆಗುವ ಲಾಭಗಳು ಏನು ಅಥವಾ ಸಮಸ್ಯೆಗಳು ಏನು ಎನ್ನುವ ಪ್ರಮುಖ ಮಾಹಿತಿಗಳು ಕೂಡ ಜನರಿಗೆ ತಿಳಿದಿಲ್ಲ. ಅದನ್ನೆಲ್ಲ ಈ ಲೇಖನದ ಮೂಲಕ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
ಕಳೆದ ದಶಕದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಆಗಿದೆ ಎಂದು ಹೇಳಬಹುದು. ನಾವು ಹತ್ತು ವರ್ಷಗಳ ಹಿಂದಿನ ಜನಸಾಮಾನ್ಯರ ಬದುಕು ನೋಡುವುದಾದರೆ ಉದಾಹರಣೆಗೆ ಒಬ್ಬ ರೈತನೇ ಆದರೆ ತನ್ನ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಹೋಗಿ ಮಾರಾಟ ಮಾಡುತ್ತಿದ್ದನು, ಅದರಿಂದ ಬಂದ ಹಣವನ್ನು ಮನೆಯಲ್ಲಿ ಇಟ್ಟುಕೊಂಡು ಖರ್ಚಿಗಾಗಿ ಬಳಸಿಕೊಳ್ಳುತ್ತಿದ್ದನು. ಆ ಹಣ ಮುಗಿದ ಬಳಿಕ ಮತ್ತೆ ಆತ ಮತ್ತೊಮ್ಮೆ ತನ್ನ ಕೃಷಿಯ ಮತ್ತಿಷ್ಟು ಬೆಳೆಯನ್ನು ಮಾರಿ ಹಣ ಪಡೆಯಬೇಕಿತ್ತು.
ಆದರೆ ಈಗ ದೇಶದಲ್ಲಿ ಒಂದು ಉತ್ತಮ ಬೆಳವಣಿಗೆ ಆಗಿದೆ ಅದು ಕೂಡ ಜನಧನ ಅಕೌಂಟ್ ಎನ್ನುವ ಜೀರೋ ಬ್ಯಾಲೆನ್ಸ್ ಅಕೌಂಟ್ ಓಪನ್ ಮಾಡುವ ಅನುಕೂಲತೆ ಮಾಡಿ ಕೊಟ್ಟ ಮೇಲೆ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಯೇ ಕಂಡಿದೆ. ಜೀರೋ ಬ್ಯಾಲೆನ್ಸ್ ಅಕೌಂಟ್ ಇಂದ ಇಂದು ದೇಶದ ಎಲ್ಲರ ಹೆಸರಿನಲ್ಲಿಯೂ ಕೂಡ ಅಕೌಂಟ್ ಇದೆ. ಇಂದು ದೇಶದ ಎಲ್ಲರ ಹೆಸರಿನಲ್ಲೂ ಕೂಡ ಬ್ಯಾಂಕ್ ಅಕೌಂಟ್ ಇರುವುದು ಒಂದು ಸರಿಯಾದ ವ್ಯವಸ್ಥೆ.
ಆದರೆ ಕೆಲವರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳು ಇವೆ. 10 ಬ್ಯಾಂಕ್ ಅಕೌಂಟ್ ಗಳನ್ನು ಕೂಡ ಹೊಂದಿರುವವರು ನಮ್ಮ ನಡುವೆ ಇದ್ದಾರೆ. ನಾನ ಕಾರಣಗಳಿಗಾಗಿ ಈ ರೀತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳನ್ನು ಹೊಂದುವ ಪರಿಸ್ಥಿತಿ ಎದುರಾಗುತ್ತದೆ. ಕೆಲಸ ಮಾಡುವ ಕಂಪನಿಯ ವೇತನ ಪಡೆಯುವ ಕಾರಣಕ್ಕೋ ಅಥವಾ ಲೋನ್ ಗಳನ್ನು ಪಡೆಯುವ ಕಾರಣಕ್ಕೋ ಓಪನ್ ಆಗಿ ಬಿಟ್ಟಿರುತ್ತದೆ.
ಇಷ್ಟೇ ಬ್ಯಾಂಕ್ ಅಕೌಂಟ್ ಗಳು ಮಾತ್ರ ಇರಬೇಕು ಎನ್ನುವ ಕಡ್ಡಾಯ ನಿಯಮ ಇನ್ನು ನಮ್ಮ ದೇಶದಲ್ಲಿ ಇಲ್ಲ. ಹೆಚ್ಚು ಅಕೌಂಟ್ ಹೊಂದಿರುವುದರಿಂದ ಆಗುವ ಅನುಕೂಲತೆ ಮತ್ತು ಅನಾನುಕೂಲತೆಗಳ ಬಗ್ಗೆ ಜನರು ತಿಳಿದುಕೊಂಡಿರಬೇಕು. ಆ ಬಳಿಕ ಅವರು ಹೆಚ್ಚು ಅಕೌಂಟ್ ಹೊಂದುವ ಬಗ್ಗೆ ನಿರ್ಧರಿಸಬಹುದು, ಅದರ ಸಾಧಕ ಭಾದಕಗಳನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.