ಪ್ರಸ್ತುತ ಏರುತ್ತಿರುವ ದಿನಸಿ ಸಾಮಾನು ಬೆಲೆ, ಗಗನ ಮುಟ್ಟಿರುವ ತರಕಾರಿ ಪಲ್ಲೆಗಳ ಬೆಲೆ, ಗ್ಯಾಸ್ ಸಿಲೆಂಡರ್ ದರ, ಅಡುಗೆ ಎಣ್ಣೆ ರೇಟ್, ಪೆಟ್ರೋಲ್ ಡೀಸೆಲ್ ರೇಟ್ ಇದೆಲ್ಲದರಿಂದ ಬಡ ಹಾಗೂ ಸಾಮಾನ್ಯ ಜನ ಕಂಗೆಟ್ಟು ಹೋಗಿದ್ದಾರೆ. ಅದರಲ್ಲೂ ಕೋವಿಡ್ ಸಮಯದ ಸಂಕಷ್ಟ ಅನುಭವಿಸಿದ ಜನರಿಗೆ ಲಾಕ್ಡೌನ್ ಓಪನ್ ಬೆನ್ನಲ್ಲೇ ಎಲ್ಲಾ ದರಗಳು ಏರಿಕೆ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರತಿ ಬಾರಿ ಕೇಂದ್ರದ ಹಾಗೂ ರಾಜ್ಯದ ಬಜೆಟ್ ಘೋಷಣೆ ಆದಾಗಲೆಲ್ಲ ಜನ ಆಸೆ ಕಣ್ಣುಗಳಿಂದ ಇವುಗಳ ಬೆಲೆಗಳಲ್ಲಿ ಏನಾದರೂ ಇಳಿಮುಖವಾಗಿ, ಜನಸಾಮಾನ್ಯರಿಗೆ ಬದುಕು ಸಲೀಸಾಗುತ್ತದೆಯಾ ಎಂದು ನೋಡುತ್ತಿರುತ್ತಾರೆ. ಸರ್ಕಾರಕ್ಕೂ ಸಹ ಅದರದ್ದೇ ಹೊರೆ ಇರುವುದರಿಂದ ಕೆಲ ಬಾರಿ ನಿರಾಸೆ ಮಾಡಲೇಬೇಕಾಗುತ್ತದೆ. ಆದರೆ ಈಗ ಕರೆಂಟ್ ಬಿಲ್ ವಿಚಾರದಲ್ಲಿ ಸರ್ಕಾರ ದೊಡ್ಡ ಮನಸ್ಸು ಮಾಡಿದೆ.
ಇದೇ ಮೊದಲ ಬಾರಿಗೆ ಸರ್ಕಾರದಿಂದ ಇಂತಹ ಒಂದು ಘೋಷಣೆ ಆಗಿದ್ದು, ದೇಶದಾದ್ಯಂತ ಎಲ್ಲರೂ ಸಂತಸ ಪಡುವಂತೆ ಆಗಿದೆ. ಯಾಕೆಂದರೆ ಇತ್ತೇಚೆಗೆ ವಿದ್ಯುತ್ ಗೂ ಕೂಡ ಪ್ರತಿ ಯೂನಿಟ್ ಮೇಲೆ ಪೈಸೆ ಲೆಕ್ಕದಲ್ಲಿ ಬೆಲೆ ಹೆಚ್ಚಿಸಿದ್ದರಿಂದ ಸರ್ಕಾರಕ್ಕೆ ಜನ ಹಿಡಿಹಿಡಿ ಶಾಪ ಹಾಕುತ್ತಿದ್ದರು. ಜನಸಾಮಾನ್ಯರ ಗೋಳು ಕೇಳಿದ ಸರ್ಕಾರ ಈ ಬಾರಿ ದೊಡ್ಡ ಮನಸ್ಸು ಮಾಡಿದೆ. ಅದಕ್ಕಾಗಿ ಏಪ್ರಿಲ್ 1 ರಿಂದ ವಿದ್ಯುತ್ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ ಎನ್ನುವ ಘೋಷಣೆ ಮಾಡಿದೆ ಆದರೆ ಇದು ಎಲ್ಲರಿಗೂ ಅನ್ವಯ ಆಗುವುದಿಲ್ಲ.
ಈ ಯೋಜನೆಯ ಫಲಾನುಭವಿಗಳ ಆಗಬೇಕು ಎಂದರೆ ಯಾವ ಅರ್ಹತೆಗಳು ಇರಬೇಕು ಯಾರಿಗೆ ಈ ಯೋಜನೆಯ ಅನುಕೂಲತೆ ಸಿಗಲಿದೆ ಎನ್ನುವ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಈ ಯೋಜನೆ ಹೆಸರು ಬಿಜಿಲಿ ಬಿಲ್ ಮಾಫಿ ಯೋಜನೆ, ಈ ಯೋಜನೆಯ ಫಲಾನುಭವಿಗಳು ಆಗಬೇಕು ಎಂದರೆ ಅವರು ಮಾರ್ಚ್ 31ರ ಒಳಗೆ ಮಾರ್ಚ್ ತಿಂಗಳವರೆಗಿನ ಪ್ರತಿ ತಿಂಗಳು ಕೂಡ ವಿದ್ಯುತ್ ಬಿಲ್ಲನ್ನು ಪಾವತಿಸಿಕೊಂಡು ಬಂದಿರಬೇಕು.
ಯಾರು ಪ್ರತಿ ತಿಂಗಳು ತಪ್ಪದೆ ತಮ್ಮ ವಿದ್ಯುತ್ ಬಿಲ್ ಅನ್ನು ಪಾವತಿಸುತ್ತಾರೋ ಅವರು ಈ ಯೋಜನೆ ಫಲಾನುಭವಿಗಳು ಆಗುತ್ತಾರೆ. ನೀವು ಸಹ ಪ್ರತಿ ತಿಂಗಳು ತಪ್ಪದೇ ವಿದ್ಯುತ್ ಪಾವತಿಸಿಕೊಂಡು ಬಂದಿರದಿದ್ದರೆ ಈ ಕೂಡಲೇ ಎಲ್ಲಾ ಬಾಕಿಯನ್ನು ಜಮಾ ಮಾಡಬೇಕು. ಮತ್ತು ಈ ಯೋಜನೆ ಫಲಾನುಭವಿಗಳು ಆಗಬೇಕು ಎಂದರೆ ನೀವು ಕಡ್ಡಾಯವಾಗಿ ರೈತರಾಗಿರಬೇಕು.
ಸರ್ಕಾರವು ವಿದ್ಯುತ್ ಕೊಳವೆ ಬಾವಿಯ ವಿದ್ಯುತ್ ಸಂಪರ್ಕ ಹೊಂದಿರುವ ರೈತರು ಮತ್ತು ತಮ್ಮ ಕೊಳವೆ ಬಾವಿಯ ವಿದ್ಯುತ್ ಬಿಲ್ ಪಾವತಿಸಲಾಗದ ರೈತರು ಮಾರ್ಚ್ 31ರ ಒಳಗೆ ತಮ್ಮ ಎಲ್ಲಾ ಹಳೆ ಬಾಕಿ ಮೊತ್ತವನ್ನು ಪಾವತಿ ಮಾಡಿದರೆ ಏಪ್ರಿಲ್ 1ನೇ ತಾರೀಖಿನಿಂದ ಬರುವ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗಿಲ್ಲ ಎಂದು ಘೋಷಣೆ ಮಾಡಿದೆ. ರೈತರಿಗಾಗಿ ಕೊಟ್ಟಿರುವ ಭರ್ಜರಿ ಆಫರ್ ಇದಾಗಿದೆ.
ಪ್ರಸ್ತುತ ಈ ಯೋಜನೆಯು ಉತ್ತರ ಪ್ರದೇಶದ ರೈತರುಗಳಿಗೆ ಸಿಗಲಿದ್ದು, ಇದೇ ಯೋಜನೆ ದೇಶದಾದ್ಯಂತ ಅನ್ವಯವಾಗಬೇಕು ಎನ್ನುವ ಆಶಯ ದೇಶದಾದ್ಯಂತ ಇರುವ ರೈತ ವಲಯದಿಂದ ಕೇಳಿ ಬರುತ್ತಿದೆ. ನೀವು ಸಹ ರೈತರಾಗಿದ್ದರೆ ಉತ್ತರ ಪ್ರದೇಶ ಸರಕಾರದ ಬಿಜ್ಲಿ ಬಿಲ್ ಮಾಫಿ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಮತ್ತು ಇದು ದೇಶವ್ಯಾಪಿ ಅನ್ವಯ ಆಗಬೇಕಾ ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.